For Quick Alerts
ALLOW NOTIFICATIONS  
For Daily Alerts
 

ಟಿ20I ಡೆತ್ ಓವರ್‌ನಲ್ಲಿ ಅತಿ ಹೆಚ್ಚು ರನ್ ಕೊಳ್ಳೆ ಹೊಡೆದ 6 ಆಟಗಾರರು: ಪಟ್ಟಿಯಲ್ಲಿ ಇಬ್ಬರು ಭಾರತೀಯರು!

These six cricketers scored the maximum runs in death overs in t20I Matches

ಆಧುನಿಕ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಜನಪ್ರಿಯಗೊಂಡಿರುವ ಮಾದರಿ ಟಿ20 ಕ್ರಿಕೆಟ್. ಲೀಗ್ ಕ್ರಿಕೆಟ್‌ಗಳು ಕಾಲಿಟ್ಟ ಬಳಿಕ ಚುಟುಕು ಕ್ರಿಕೆಟ್‌ನ ಜನಪ್ರಿಯತೆ ಮನತ್ತೊಂದು ಹಂತವನ್ನು ತಲುಪಿದೆ. ಆಟಗಾರರು ಈ ಮಾದರಿಯನ್ನು ಎಷ್ಟು ಆನಂದಿಸುತ್ತಾರೋ ಅಭಿಮಾನಿಗಳು ಕೂಡ ಸಾಕಷ್ಟು ಮನರಂಜನೆ ಪಡೆಯುವ ಮಾದರಿ ಇದಾಗಿದೆ. ಇನ್ನು ಆಟಗಾರರ ದೃಷ್ಟಿಯಿಂದ ನೋಡಿದರೆ ಬ್ಯಾಟರ್‌ಗಳ ಪಾಲಿಗೆ ಈ ಮಾದರಿ ಹೇಳಿ ಮಾಡಿಸಿದಂತಿದೆ. ಸಣ್ಣ ಅವಧಿಯಲ್ಲಿ ಹೆಚ್ಚು ರನ್‌ಗಳಿಸುವ ಗುರಿಯಿರುವ ಕಾರಣ ಬೀಸು ಹೊಡೆತಗಳಿಗೆ ಇಲ್ಲಿ ಸಾಕಷ್ಟು ಅವಕಾಶಗಳು ಇರುತ್ತವೆ.

ಬ್ಯಾಟರ್‌ಗಳು ಇಲ್ಲಿ ಆರಂಭದಿಂದಲೇ ಬೌಲರ್‌ಗಳ ಮೇಲೆ ಆಕ್ರಮಣಕ್ಕೆ ಮುಂದಾಗುವುದು ಸಾಮಾನ್ಯ. ಆದರೆ ಈ ಮಾದರಿಯಲ್ಲಿ ಅತ್ಯಂತ ಹೆಚ್ಚು ನಿರ್ಣಾಯಕವೆನಿಸುವ ಹಂತ ಎಂದರೆ ಡೆತ್ ಓವರ್. ಪ್ರತಿ ಇನ್ನಿಂಗ್ಸ್‌ನ ಅಂತಿಮ ಐದು ಓವರ್‌ಗಳ ಅವಧಿಯನ್ನು ಡೆತ್ ಓವರ್ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಯಾವ ತಂಡ ಹೆಚ್ಚಿನ ಯಶಸ್ಸು ಸಾಧಿಸುತ್ತವೆ ಎಂಬುದರ ಮೇಲೆ ಬಹುತೇಕ ಪಂದ್ಯಗಳ ಪಂದ್ಯಗಳು ನಿರ್ಣಯವಾಗುತ್ತವೆ ಎಂಬುದು ಗಮನಿಸಬೇಕಾದ ಅಂಶ.

ಈ ಡೆತ್ ಓವರ್‌ಗಳಲ್ಲಿಯೇ ಹೆಚ್ಚಿನ ಯಶಸ್ಸು ಸಾಧಿಸುವ ಮೂಲಕ ತಂಡಕ್ಕೆ ನೆರವಾಗುವ ಆಟಗಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಚುಟುಕು ಕ್ರಿಕೆಟ್‌ನಲ್ಲಿ ಈ ಡೆತ್ ಓವರ್‌ಗಳಲ್ಲಿ ಹೆಚ್ಚಿನ ರನ್‌ಗಳಿಸಿದ ಆಟಗಾರರು ಯಾರ್ಯಾರು ಗೊತ್ತಾ? ಈ ಡೆತ್ ಓವರ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆರು ಮಂದಿ ಬ್ಯಾಟರ್‌ಗಳ ಮಾಹಿತಿ ಇಲ್ಲಿದೆ.

6. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ

6. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ

ಅಗ್ರ ಕ್ರಮಾಂಕದ ಆಟಗಾರನಾಗಿದ್ದರೂ ಡೆತ್ ಓವರ್‌ಗಳಲ್ಲಿ ಹೆಚ್ಚು ರನ್‌ಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಕೂಡ ಕಾಣಿಸಿಕೊಂಡಿರುವುದು ಗಮನಾರ್ಹ ಅಂಶ. ಈ ಪಟ್ಟಿಯಲ್ಲಿ ಕೊಹ್ಲಿ 6ನೇ ಸ್ಥಾನದಲ್ಲಿದ್ದಾರೆ. ಭಾರತೀಯ ತಂಡದ ಪರವಾಗಿ ಆಡುವ ಸಂದರ್ಭದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಡೆತ್ ಓವರ್‌ಗಳಲ್ಲಿ 665 ರನ್‌ಗಳನ್ನು ಗಳಿಸಿದ್ದಾರೆ.

5. ಮೊಹಮ್ಮದ್ ನಬಿ, ಅಫ್ಘಾನಿಸ್ತಾನ

5. ಮೊಹಮ್ಮದ್ ನಬಿ, ಅಫ್ಘಾನಿಸ್ತಾನ

ಅಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಫಿನಿಷರ್ ಆಗಿ ತಮ್ಮ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆಲ್‌ರೌಂಡರ್ ಆಗಿ ಪರಿಣಾಮಕಾರಿ ಪ್ರದರ್ಶನ ನೀಡಿರುವ ಮೊಹಮ್ಮದ್ ನಬಿ ಡೆತ್ ಓವರ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ ಎಂಬುದು ಅವರ ಈ ಅಂಕಿಅಂಶಗಳು ಹೇಳುತ್ತವೆ. ಡೆತ್ ಓವರ್‌ನಲ್ಲಿ ವಿರಾಟ್ ಕೊಹ್ಲಿಗಿಂತ 12 ರನ್‌ ಹೆಚ್ಚು ಗಳಿಸಿರುವ ಮೊಹಮ್ಮದ್ ನಬಿ 677 ರನ್‌ಗಳೊಇಂದಿಗೆ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

4. ನಜೀಬುಲ್ಲಾ ಜದ್ರಾನ್, ಅಫ್ಘಾನಿಸ್ತಾನ

4. ನಜೀಬುಲ್ಲಾ ಜದ್ರಾನ್, ಅಫ್ಘಾನಿಸ್ತಾನ

ಡೆತ್ ಓವರ್‌ಲ್ಲಿ 700ಕ್ಕಿಂತ ಅಧಿಕ ರನ್‌ಗಳಿಸಿರುವ ಕೇವಲ ನಾಳ್ವರು ಆಟಗಾರರ ಪೈಕಿ ಅಪ್ಘಾನಿಸ್ತಾನದ ಬ್ಯಾಟರ್ ನಜೀಬುಲ್ಲಾ ಜದ್ರಾನ್ ಕೂಡ ಒಬ್ಬರು. ಅಫ್ಘಾನಿಸ್ತಾನದ ಪರವಾಗಿ ಸಾಕಷ್ಟು ಸ್ಮರಣೀಯ ಇನ್ನಿಂಗ್ಸ್ ಆಡಿರುವ ಈ ಆಟಗಾರ ಡೆತ್ ಓವರ್‌ನಲ್ಲಿ 715 ರನ್‌ಗಳನ್ನು ಗಳಿಸಿದ್ದಾರೆ. ಈ ಮೂಲಕ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

3. ಶೋಯೆಬ್ ಮಲಿಕ್, ಪಾಕಿಸ್ತಾನ

3. ಶೋಯೆಬ್ ಮಲಿಕ್, ಪಾಕಿಸ್ತಾನ

ಪಾಕಿಸ್ತಾನದ ಹಿರಿಯ ಆಟಗಾರ ಶೋಯೆಬ್ ಮಲಿಕ್ ಚುಟುಕು ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ. ಡೆತ್ ಓವರ್‌ನಲ್ಲಿ ಪಾಕಿಸ್ತಾನ ತಂಡದ ಆಟಗಾರರ ಪೈಕಿ ಅತೀ ಹೆಚ್ಚು ರನ್‌ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಶೋಯೆಬ್ ಮಲಿಕ್ ಹೊಂದಿದ್ದಾರೆ. ಡೆತ್ ಓವರ್‌ನಲ್ಲಿ ಶೋಯೆಬ್ ಮಲಿಕ್ ಒಟ್ಟು 745ರನ್‌ಗಳನ್ನು ಗಳಿಸಿದ್ದು ಒಟ್ಟಾರೆ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

2. ಎಂಎಸ್ ಧೋನಿ, ಭಾರತ

2. ಎಂಎಸ್ ಧೋನಿ, ಭಾರತ

ಭಾರತದ ಮಾಜಿ ನಾಯಕ ಎಂಎಸ್ ಧೋನಿ ಟಿ20 ಕ್ರಿಕೆಟ್‌ನಲ್ಲಿ ಡೆತ್ ಓವರ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸಿದ ದಾಖಲೆಯನ್ನು ಸುದೀರ್ಘ ಕಾಲ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದರು. ಈ ದಾಖಲೆಯನ್ನು ಭಾರತದ ವಿರುದ್ಧದ ಟಿ20 ಸರಣಿಯ ಸಂದರ್ಭದಲ್ಲಿ ಡೇವಿಡ್ ಮಿಲ್ಲರ್ ಮುರಿಯುವ ಮೂಲಕ ಧೋನಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ ಡೆತ್ ಓವರ್‌ನಲ್ಲಿ 856 ರನ್‌ಗಳನ್ನು ಗಳಿಸಿ ಸದ್ಯ ಎರಡನೇ ಸ್ಥಾನದಲ್ಲಿದ್ದಾರೆ.

1. ಡೇವಿಡ್ ಮಿಲ್ಲರ್, ದಕ್ಷಿಣ ಆಫ್ರಿಕಾ

1. ಡೇವಿಡ್ ಮಿಲ್ಲರ್, ದಕ್ಷಿಣ ಆಫ್ರಿಕಾ

ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ಮೊದಲ ಸ್ಥಾನದಲ್ಲಿರುವ ಕ್ರಿಕೆಟಿಗ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್. ಈಗಾಗಲೇ ಹೇಳಿದಂತೆ ಭಾರತದ ವಿರುದ್ಧದ ಟಿ20 ಸರಣಿಯ ಸಂದರ್ಭದಲ್ಲಿ ಡೇವಿಡ್ ಮಿಲ್ಲರ್ ಈ ಸಾಧನೆ ಮಾಡಿದ್ದಾರೆ. ಡೆತ್ ಓವರ್‌ನಲ್ಲಿ ಡೇವಿಡ್ ಮಿಲ್ಲರ್ 857 ರನ್‌ಗಳನ್ನು ಗಳಿಸಿದ್ದು ಈ ಸಾಧನೆ ಮಾಡಿದ್ದಾರೆ.

Story first published: Monday, October 10, 2022, 17:07 [IST]
Other articles published on Oct 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+