T20 World Cup: ಶ್ರೀಲಂಕಾ ತಂಡದ ಪ್ರಭಾವಿ ಬೌಲಿಂಗ್: ಸಾಧಾರಣ ಗುರಿ ನೀಡಿದ ಐರ್ಲೆಂಡ್

ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ 2022ರ ಟಿ20 ವಿಶ್ವಕಪ್‌ನ ಸೂಪರ್ 12 ಹಂತದ ಮೂರನೇ ಪಂದ್ಯ ಶ್ರೀಲಂಕಾ ಮತ್ತು ಐರ್ಲೆಂಡ್ ನಡುವಿನ ಪಂದ್ಯ ಹೋಬರ್ಟ್‌ನ ಬೆಲ್ಲೆರಿವ್ ಓವಲ್‌ನಲ್ಲಿ ನಡೆಯುತ್ತಿದೆ.
ಶ್ರೀಲಂಕಾ ತಂಡದ ಪ್ರಭಾವಿ ಬೌಲಿಂಗ್ ದಾಳಿಗೆ ಐರ್ಲೆಂಡ್ ತಂಡದ ಬ್ಯಾಟರ್‌ಗಳು ಅಕ್ಷರಶಃ ತತ್ತರಿಸಿ ಹೋದರು. ಮಹೀಶ್ ತೀಕ್ಷಣ ಮತ್ತು ವನಿಂದು ಹಸರಂಗಾ ಅವರ ಅತ್ಯುತ್ತಮ ಸ್ಪಿನ್ ಬೆಲೆಗೆ ಬಿದ್ದ ಐರ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 128 ರನ್ ಗಳಿಸಿತು.
ಶ್ರೀಲಂಕಾ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಂಡ್ರ್ಯೂ ಬಲ್ಬಿರ್ನಿ ನಾಯಕತ್ವದ ಐರ್ಲೆಂಡ್ ತಂಡವು ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡದ ಸಮಗ್ರ ಪ್ರದರ್ಶನದಿಂದಾಗಿ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲವಾಯಿತು.
ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ನಂತರ ಐರ್ಲೆಂಡ್ ನಿಯಮಿತವಾಗಿ ವಿಕೆಟ್ ಪತನವನ್ನು ಎದುರಿಸಿತು. ಪಾಲ್ ಸ್ಟಿರ್ಲಿಂಗ್ (34), ಹ್ಯಾರಿ ಟೆಕ್ಟರ್ (45) ಮತ್ತು ಜಾರ್ಜ್ ಡಾಕ್ರೆಲ್ (14) ಅವರ ಜೊತೆಯಾಟದೊಂದಿಗೆ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಆದರೆ ಧನಂಜಯ ಡಿ ಸಿಲ್ವಾ, ತೀಕ್ಷಣ ಮತ್ತು ಬಿನುರಾ ಫೆರ್ನಾಂಡೋ ಈ ಬ್ಯಾಟರ್‌ಗಳನ್ನು ಔಟ್ ಮಾಡಿದರು. ಉಳಿದಂತೆ ವನಿಂದು ಹಸರಂಗ ಮತ್ತು ಮಹೇಶ್ ತೀಕ್ಷಣ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.
ಎರಡೂ ತಂಡಗಳು ಅರ್ಹತಾ ಸುತ್ತಿನಲ್ಲಿ ತಲಾ ಎರಡು ಪಂದ್ಯಗಳನ್ನು ಗೆದ್ದು ಗ್ರೂಪ್ ಸ್ಟೇಜ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡವು.
ಶ್ರೀಲಂಕಾ ಮತ್ತು ಐರ್ಲೆಂಡ್ ತಂಡಗಳ ಆಡುವ 11ರ ಬಳಗ
ಐರ್ಲೆಂಡ್: ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಲೋರ್ಕನ್ ಟಕರ್ (ವಿಕೆಟ್ ಕೀಪರ್), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಮಾರ್ಕ್ ಅಡೇರ್, ಸಿಮಿ ಸಿಂಗ್, ಬ್ಯಾರಿ ಮೆಕಾರ್ಥಿ, ಜೋಶುವಾ ಲಿಟಲ್
ಶ್ರೀಲಂಕಾ: ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಅಶೇನ್ ಬಂಡಾರ, ಭಾನುಕಾ ರಾಜಪಕ್ಸೆ, ದಸುನ್ ಶನಕ(ನಾಯಜ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಬಿನುರಾ ಫೆರ್ನಾಂಡೊ, ಲಹಿರು ಕುಮಾರ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications