ಪಾಕ್ ಅಲ್ಲ, ಆಸೀಸ್ ಅಲ್ಲ: ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ತೊಂದರೆ ನೀಡುವ ತಂಡ ಇದೇ: ಗೌತಮ್ ಗಂಭೀರ್

ಅಕ್ಟೋಬರ್ 16ರಿಂದ ಆಸ್ಟ್ರೇಲಿಯದಲ್ಲಿ ಪ್ರಾರಂಭವಾಗುವ 2022ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಅಪಾಯಕಾರಿಯಾಗಬಹುದಾದ ಅಥವಾ ಬೆದರಿಕೆಯೊಡ್ಡಬಹುದಾದ ತಂಡವನ್ನು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೆಸರಿಸಿದ್ದಾರೆ.
ಶ್ರೀಲಂಕಾ ತಂಡವು ಭಾರತ ತಂಡಕ್ಕೆ ಅಪಾಯಕಾರಿಯಾಗುವ ಮುನ್ಸೂಚನೆಯನ್ನು ಗೌತಮ್ ಗಂಭೀರ್ ತಿಳಿಸಿದ್ದು, ಶ್ರೀಲಂಕಾದ ಇತ್ತೀಚಿನ ಏಷ್ಯಾಕಪ್ ಯಶಸ್ಸನ್ನು ಉಲ್ಲೇಖಿಸಿದ ಗಂಭೀರ್, ದ್ವೀಪ ರಾಷ್ಟ್ರವು ಸರಿಯಾದ ಸಮಯದಲ್ಲಿ ಉತ್ತುಂಗಕ್ಕೇರುತ್ತಿದೆ ಎಂದು ಹೇಳಿದರು. ಕಳೆದ ತಿಂಗಳು ದುಬೈನಲ್ಲಿ ನಡೆದ ಏಷ್ಯಾ ಕಪ್ ಟೂರ್ನಮೆಂಟ್‌ನ ಸೂಪರ್-4 ಹಂತದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಆರು ವಿಕೆಟ್‌ಗಳ ಸೋಲು ಅನುಭವಿಸಿತ್ತು.

ಭಾರತಕ್ಕೆ ಶ್ರೀಲಂಕಾ ಬೆದರಿಕೆಯಾಗಲಿದೆ ಎಂದ ಗಂಭೀರ್
"ಶ್ರೀಲಂಕಾ ತಂಡದವರು ಏಷ್ಯಾ ಕಪ್‌ನಲ್ಲಿ ಸಾಧಿಸಿದ ರೀತಿಯ ಯಶಸ್ಸಿನಿಂದಾಗಿ ಅವರು ಆಡುತ್ತಿರುವ ರೀತಿ, ಅವರು ಬಹುಶಃ ಸರಿಯಾದ ಸಮಯದಲ್ಲಿ ಉತ್ತುಂಗಕ್ಕೇರುತ್ತಿದ್ದಾರೆ," ಎಂದು ಸ್ಟಾರ್ ಸ್ಪೋರ್ಟ್ಸ್ ಶೋ "ಗೇಮ್ ಪ್ಲಾನ್'ನಲ್ಲಿ ಮಾತನಾಡುತ್ತಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದರು.
"ಇದೇ ವೇಳೆ ಶ್ರೀಲಂಕಾ ತಂಡಕ್ಕೆ ಚಮೀರಾ ಮತ್ತು ಲಹಿರು ಕುಮಾರ ಮರುಳುವುದರೊಂದಿಗೆ, ಅವರು ಬಹುಶಃ ತಮ್ಮ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಭಾರತಕ್ಕೆ ಅವರು ಬೆದರಿಕೆಯಾಗಲಿದ್ದಾರೆ ಮತ್ತು ಆದ್ದರಿಂದ ಅವರು ಟಿ20 ವಿಶ್ವಕಪ್‌ನಲ್ಲಿ ಹೆಚ್ಚಿನ ವಿಶ್ವಾಸವನ್ನು ತೆಗೆದುಕೊಳ್ಳಲಿದ್ದಾರೆ," ಎಂದರು.

ಅಗ್ರ ಎರಡು ಸ್ಥಾನ ಗಳಿಸಿದರೆ ಸೂಪರ್ 12 ಹಂತಕ್ಕೆ
ಹಿಂದಿನ ಪಂದ್ಯಾವಳಿಯ ಶ್ರೇಯಾಂಕಗಳ ಆಧಾರದ ಮೇಲೆ ಟಿ20 ವಿಶ್ವಕಪ್‌ನ ಮೊದಲ ಸುತ್ತಿಗೆ ಅರ್ಹತೆ ಪಡೆದ ನಾಲ್ಕು ತಂಡಗಳಲ್ಲಿ ಶ್ರೀಲಂಕಾ ಕೂಡ ಒಂದು. ಎ ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಗಳಿಸಿದರೆ ಸೂಪರ್ 12 ಹಂತಕ್ಕೆ ಅರ್ಹತೆ ಪಡೆಯಲು ಸಾಧ್ಯವಾಗುತ್ತದೆ.
ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಟಿ20 ವಿಶ್ವಕಪ್‌ನಲ್ಲಿ ಪ್ರತಿ ವಿರೋಧವನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಭಾರತಕ್ಕೆ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ. ಏಕೆಂದರೆ ಯಾವುದೇ ತಂಡವು ಆಟದ ಕಡಿಮೆ ಸ್ವರೂಪದಲ್ಲಿ ಉತ್ತಮವಾಗಿ ಆಡಬಹುದು ಎಂದು ಅವರು ತಿಳಿಸಿದರು.

ಟಿ20 ಮಾದರಿಯಲ್ಲಿ ಯಾರನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ
"ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಅಥವಾ ಇತರ ಯಾವುದೇ ತಂಡಗಳಂತೆಯೇ ಇತರ ತಂಡಗಳು. ಯಾವುದೇ ತಂಡವನ್ನು ವಿಶೇಷವಾಗಿ, ಟಿ20 ಮಾದರಿಯಲ್ಲಿ ಲಘುವಾಗಿ ಪರಿಗಣಿಸಲಾಗುವುದಿಲ್ಲ, ಏಕೆಂದರೆ ಟಿ20 ಸ್ವರೂಪದಲ್ಲಿ ಯಾವುದೇ ತಂಡವು ಯಾರನ್ನಾದರೂ ಸೋಲಿಸಬಹುದು," ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಅಕ್ಟೋಬರ್ 23ರಂದು ಮೆಲ್ಬೋರ್ನ್‌ನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಸೂಪರ್-12 ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

2022ರ ಟಿ20 ವಿಶ್ವಕಪ್‌ಗಾಗಿ ಭಾರತದ ಪೂರ್ಣ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್
ಸ್ಟ್ಯಾಂಡ್‌ಬೈ ಆಟಗಾರರು: ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications