Sri Lanka Vs New Zealand: ಕಿವೀಸ್ ಪಡೆಗೆ ಸಿಂಹಳೀಯರ ಸವಾಲು, ಸಂಭಾವ್ಯ ಆಡುವ ಬಳಗ, ಪಿಚ್ ರಿಪೋರ್ಟ್

ಅಕ್ಟೋಬರ್ 29ರಂದು ನಡೆಯುವ ಟಿ20 ವಿಶ್ವಕಪ್ 2022ರ 27ನೇ ಪಂದ್ಯದಲ್ಲಿ ಶ್ರೀಲಂಕಾ ನ್ಯೂಜಿಲೆಂಡ್ ಮುಖಾಮುಖಿಯಾಗಲಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.
ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ಆಸ್ಟ್ರೇಲಿಯಾವನ್ನು ಸೋಲಿಸಿತು. ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಆಲ್‌ರೌಂಡ್ ಪ್ರದರ್ಶನ ನೀಡಿತ್ತು. ಡೆವೋನ್ ಕಾನ್ವೆ, ಜೋಶ್ ಫಿಲಿಪ್ ಅದ್ಭುತ ಬ್ಯಾಟಿಂಗ್ ಸಹಾಯದಿಂದ 200 ರನ್ ಗಳಿಸಿದರು. ನ್ಯೂಜಿಲೆಂಡ್ ಬೌಲರ್ ಗಳು ಅತ್ಯುತ್ತಮ ಪ್ರದರ್ಶನದಿಂದ ಆಸ್ಟ್ರೇಲಿಯಾ 111 ರನ್‌ಗಳಿಗೆ ಆಲೌಟ್ ಆಯಿತು.
ಮೊದಲನೇ ಪಂದ್ಯದಲ್ಲಿ 89 ರನ್‌ಗಳ ಅಂತರದಿಂದ ಜಯ ಸಾಧಿಸಿದ ಬಳಿಕ, ಅಫ್ಘಾನಿಸ್ತಾನದ ವಿರುದ್ಧ ಪಂದ್ಯವನ್ನಾಡಲು ಮೆಲ್ಬೋರ್ನ್‌ಗೆ ಪ್ರಯಾಣಿಸಿದರು. ಅಫ್ಘಾನಿಸ್ತಾನದ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದ್ದ ನ್ಯೂಜಿಲೆಂಡ್ ತಂಡಕ್ಕೆ ಮಳೆ ವಿಲನ್ ಆಯಿತು. ಸತತ ಮಳೆಯಾದ ಕಾರಣ ಒಂದು ಚೆಂಡು ಕೂಡ ಬೌಲ್ ಮಾಡದೆ ಪಂದ್ಯವನ್ನು ರದ್ದು ಮಾಡಲಾಯಿತು.
ಇದರ ಪರಿಣಾಮವಾಗಿ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ತಲಾ ಒಂದು ಅಂಕ ಹಂಚಿಕೊಂಡವು. ಕಿವೀಸ್ ತಮ್ಮ ಗೆಲುವಿನ ಆವೇಗವನ್ನು ಮುಂದುವರಿಸಲು ಅವಕಾಶವನ್ನು ಪಡೆಯದೆ ನಿರಾಶೆಗೊಂಡಿದೆ. ಆದರೆ, ಶನಿವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿಯಾಗದಿರಲಿ ಎಂದು ಅವರು ಪ್ರಾರ್ಥಿಸುತ್ತಾರೆ.

ನ್ಯೂಜಿಲೆಂಡ್‌ಗೆ ಸವಾಲಾಕುತ್ತಾ ಶ್ರೀಲಂಕಾ
ಶ್ರೀಲಂಕಾ ತನ್ನ ಸೂಪರ್ 12 ಅಭಿಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸಿತು. ಅವರು ತಮ್ಮ ಮೊದಲ ಸೂಪರ್ 12 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಅತ್ಯುತ್ತಮ ಜಯ ಸಾಧಿಸಿದರು. ಆದರೆ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದರು.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ಪಾತುಮ್ ನಿಸ್ಸಾಂಕ 40 ರನ್ ಮತ್ತು ಚರಿಶ್ ಅಸಲಂಕಾ ಅಜೇಯ 38 ರನ್ ನೆರವಿನಿಂದ 157 ರನ್ ಗಳಿಸಿದರು. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ನಿಧಾನಗತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದರು. ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಸ್ಫೋಟಕ ಆಟದ ನೆರವಿನಿಂದ ಸುಲಭದ ಗೆಲುವು ಸಾಧಿಸಿದರು.
ಶ್ರೀಲಂಕಾ ತಮ್ಮ ಸೆಮಿಫೈನಲ್ ಆದೆ ಜೀವಂತವಾಗಿಟ್ಟುಕೊಳ್ಳಬೇಕಾದರೆ ನ್ಯೂಜಿಲೆಂಡ್ ವಿರುದ್ಧ ಜಯಗಳಿಸಬೇಕಾಗಿದೆ. ಆದ್ದರಿಂದ ಅವರು ಕಿವೀಸ್ ವಿರುದ್ಧ ಸೆಣೆಸಲು ರಣತಂತ್ರ ರೂಪಿಸುವ ಅವಕಾಶವಿದೆ.
ಆ ಒಂದು ವಿಡಿಯೋ ದೊಡ್ಡ ಶಕ್ತಿ ನೀಡಿತು: ಪಾಕ್ ವಿರುದ್ಧ ಪಂದ್ಯ ಗೆದ್ದ ಬಳಿಕ ಸಿಕಂದರ್ ರಾಜಾ ಹೇಳಿಕೆ

ಪಂದ್ಯಕ್ಕೆ ಮಳೆಯ ಕಾಟ ಇಲ್ಲ
ಸಿಡ್ನಿ ಕ್ರಿಕೆಟ್ ಮೈದಾನದ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ ಮತ್ತು ಬ್ಯಾಟರ್‌ಗಳು ತಮ್ಮ ಸ್ಟ್ರೋಕ್‌ಗಳನ್ನು ಆಟದ ಪ್ರಾರಂಭದಿಂದಲೇ ಮುಕ್ತವಾಗಿ ಆಡಬಹುದು. ಆಟ ಮುಂದುವರೆದಂತೆ ಸ್ಪಿನ್ನರ್‌ಗಳಿಗೆ ಅನುಕೂಲವಾಗುವ ಸಾಧ್ಯತೆ ಇದೆ.
ಸಿಡ್ನಿಯಲ್ಲಿ ತಾಪಮಾನವು 12 ಮತ್ತು 23 ಡಿಗ್ರಿ ಸೆಲ್ಸಿಯಸ್ ನಡುವೆ ಇರಬಹುದೆಂದು ನಿರೀಕ್ಷಿಸಲಾಗಿದೆ, ದಿನವಿಡೀ ಮಳೆಯಾಗುವ ಸಾಧ್ಯತೆಯಿಲ್ಲ. ಆದ್ದರಿಂದ ಎರಡೂ ತಂಡಗಳು ಸಂಪೂರ್ಣ 20 ಓವರ್ ಗಳ ಪಂದ್ಯಕ್ಕೆ ಸಿದ್ಧವಾಗಬೇಕಾಗುತ್ತದೆ.

ನ್ಯೂಜಿಲೆಂಡ್, ಶ್ರೀಲಂಕಾ ಸಂಭಾವ್ಯ ಆಡುವ ಬಳಗ
ನ್ಯೂಜಿಲೆಂಡ್: ಡೆವೊನ್ ಕಾನ್ವೇ, ಫಿನ್ ಅಲೆನ್, ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಲಾಕಿ ಫರ್ಗುಸನ್ ಮತ್ತು ಟ್ರೆಂಟ್ ಬೌಲ್ಟ್.
ಶ್ರೀಲಂಕಾ : ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಬಿನೂರ ಫೆರ್ನಾಂಡೋ/ಪ್ರಮೋದ್ ಮದುಶನ್, ಮತ್ತು ಲಹಿರು ಕುಮಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications