T20 World Cup 2022, IND vs AUS: ರೋಹಿತ್ ಶರ್ಮಾ ಚಿಂತೆ ದೂರ ಮಾಡಿದ ಮೊದಲನೇ ಅಭ್ಯಾಸ ಪಂದ್ಯ

ಐಸಿಸಿ ಟಿ20 ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಆತಿಥೇಯ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾರತ ಆರು ರನ್‌ಗಳ ರೋಚಕ ಜಯ ದಾಖಲಿಸಿದೆ. ರೋಹಿತ್ ಶರ್ಮಾ ಮತ್ತು ತಂಡ ಬ್ರಿಸ್ಬೇನ್‌ನ ಗಬ್ಬಾದಲ್ಲಿ 186 ರನ್ ಗಳಿಸಿತು. ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕದ ನೆರವಿನಿಂದ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿದರು.
ಮೊದಲನೇ ಅಭ್ಯಾಸ ಪಂದ್ಯದಲ್ಲೇ ನಾಯಕ ರೋಹಿತ್ ಶರ್ಮಾ ಚಿಂತೆ ದೂರ ಮಾಡುವಂತೆ ಬೌಲರ್ ಗಳು ಪ್ರದರ್ಶನ ನೀಡಿದರು. ಅದ್ಭುತವಾದ ಫೀಲ್ಡಿಂಗ್, ಬೌಲಿಂಗ್‌ನಿಂದ ಟೀಂ ಇಂಡಿಯಾ ಸೋಲುವ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ಟಿ20 ವಿಶ್ವಕಪ್‌ನ ಸೂಪರ್ 12 ಹಂತಕ್ಕೆ ಮುಂಚಿತವಾಗಿ ಲೆಕ್ಕಾಚಾರ ಮಾಡಲು ಕೆಲವು ಪ್ರಮುಖ ಅಂಶಗಳಿವೆ. ಅಕ್ಟೋಬರ್ 23 ರ ಭಾನುವಾರದಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಜಯಗಳಿಸಿರುವುದು ಟೀಂ ಇಂಡಿಯಾಕ್ಕೆ ಸಾಕಷ್ಟು ಆತ್ಮವಿಶ್ವಾಸ ತುಂಬಿದೆ. ಅಕ್ಟೋಬರ್ 19 ರಂದು ಬ್ರಿಸ್ಬೇನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತೊಂದು ಅಭ್ಯಾಸ ಪಂದ್ಯವನ್ನು ಆಡಲಿದೆ. ಮೊದಲನೇ ಪಂದ್ಯದಲ್ಲಿ ಗಮನ ಸೆಳೆಯುವ ಪ್ರಮುಖ ಅಂಶಗಳಿವು.

ಟೀಂ ಇಂಡಿಯಾ ಬ್ಯಾಟಿಂಗ್ ಲೈನ್ ಅಪ್ ಫಿಕ್ಸ್
ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಟೀಂ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್ ಫಿಕ್ಸ್ ಆಗಿದೆ. ಈಗಿರುವಂತೆ ಯಾವುದೇ ಬದಲವಾಣೆಯನ್ನು ಮಾಡದೆ, ಬ್ಯಾಟರ್ ಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಏಷ್ಯಾಕಪ್ ಅಭಯಾನದಲ್ಲಿ ಸೋತ ಬಳಿಕ ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಬೇಕು ಎನ್ನುವ ಕೂಗು ಕೇಳಿಬಂದಿತ್ತು.
ಕೆಲವರು ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿ ಎಂದು ಹೇಳಿದ್ದರು. ಆದರೆ ಕೆಎಲ್ ರಾಹುಲ್ ಲಯ ಕಂಡುಕೊಂಡಿದ್ದು ಆರಂಭಿಕರಾಗಿ ಮುಂದುವರೆಯಲಿದ್ದಾರೆ. ದೀಪಕ್ ಹೂಡಾ ಮತ್ತು ರಿಷಬ್ ಪಂತ್ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನವಾಗಿದೆ ಇಬ್ಬರೂ ಕೂಡ ಅಭ್ಯಾಸ ಪಂದ್ಯದಲ್ಲಿ ಆಡಲಿಲ್ಲ.
ಮೊಹಮ್ಮದ್ ಶಮಿಗೆ ಒಂದೇ ಓವರ್: ಕಾರಣ ಬಹಿರಂಗಪಡಿಸಿದ ನಾಯಕ ರೋಹಿತ್ ಶರ್ಮಾ

ಆರ್ ಅಶ್ವಿನ್‌ಗೆ ಮಣೆ ಹಾಕುವ ಸಾಧ್ಯತೆ
ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಹೆಚ್ಚಿನ ಸ್ಪಿನ್ ಬೌಲರ್ ಗಳನ್ನು ಆಡಿಸುವುದು ಸರಿಯಾದ ನಿರ್ಧಾರವಲ್ಲ. ಆದ್ದರಿಂದ ಟೀಂ ಇಂಡಿಯಾ ಅಕ್ಷರ್ ಪಟೇಲ್ ಜೊತೆಗೆ ಇನ್ನೊಬ್ಬ ಸ್ಪಿನ್ನರ್ ಆಡಿಸುವ ಸಾಧ್ಯತೆ ಇದೆ.
ಆರ್ ಅಶ್ವಿನ್ ಮತ್ತು ಚಹಾಲ್ ನಡುವೆ ಒಂದು ಸ್ಥಾನಕ್ಕೆ ಪೈಪೋಟಿ ಇದೆ. ಚಹಾಲ್ ಇತ್ತೀಚಿನ ಪಂದ್ಯಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟಿರುವುದು ಚಿಂತೆಗೆ ಕಾರಣವಾಗಿದೆ. ಆರ್ ಅಶ್ವಿನ್ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಮತ್ತು ಅನುಭವಿ ಬೌಲರ್ ಆಗಿರುವ ಕಾರಣ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಅಕ್ಷರ್ ಪಟೇಲ್ ರನ್ ಗಳಿಸಬೇಕಿದೆ
ರವೀಂದ್ರ ಜಡೇಜಾ ಸ್ಥಾನಕ್ಕೆ ಆಯ್ಕೆಯಾಗಿರುವ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಈಗಾಗಲೇ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಅವರಿಂದ ಇನ್ನೂ ಹೇಳಿಕೊಳ್ಳುವಂತ ಬ್ಯಾಟಿಂಗ್ ಪ್ರದರ್ಶನ ಬಂದಿಲ್ಲ.
ಭಾರತದ ಟಿ20 ವಿಶ್ವಕಪ್ ತಂಡದಲ್ಲಿ ಅವರು ಏಕೈಕ ಎಡಗೈ ಬ್ಯಾಟಿಂಗ್ ಆಯ್ಕೆಯಾಗಿದ್ದಾರೆ, ಪಂತ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇಲ್ಲ. ಕೆಳ ಮಧ್ಯಮ ಕ್ರಮಾಂಕದಲ್ಲಿ ಅಕ್ಷರ್ ಪ್ರಮುಖ ಬ್ಯಾಟರ್ ಆಗಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಅವರು ಇನ್ನೂ ಉತ್ತಮ ರನ್ ಗಳಿಸಬೇಕಾಗಿದೆ. ಬುಧವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಭಾರತವು ಗಮನಹರಿಸಲಿರುವ ವಿಷಯ ಇದು.

ಹರ್ಷಲ್ ಪಟೇಲ್ ಅವರ ಆಫ್-ಕಟರ್
ಭಾರತದ ದೀರ್ಘಾವಧಿಯ 19 ನೇ ಓವರ್ ತೊಂದರೆಯನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಹರ್ಷಲ್ ಪಟೇಲ್ ನಿವಾರಿಸಿದರು. ಹರ್ಷಲ್ ಪಟೇಲ್ ಅತ್ಯುತ್ತಮ ಯಾರ್ಕರ್‌ಗಳನ್ನು ಹಾಕಿದರು. ಅವರು ತಮ್ಮ ಕೌಶಲ್ಯಪೂರ್ಣ ಆಫ್-ಕಟರ್ ಅನ್ನು ಪರಿಣಾಮಕಾರಿಯಾಗಿ ಬಳಸಿದರು.
19ನೇ ಓವರ್ ನಲ್ಲಿ ಆರನ್ ಫಿಂಚ್ ಅವರನ್ನು ಬೌಲ್ಡ್ ಮಾಡಿದ ಅವರು, ಕೇವಲ 5 ರನ್ ಬಿಟ್ಟುಕೊಟ್ಟರು. ಕಳೆದ ಕೆಲವು ಪಂದ್ಯಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಟ್ಟು ಟೀಕೆಗೆ ಗುರಿಯಾಗಿದ್ದ ಅವರು, ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.

ಕೊರತೆಯನ್ನು ನೀಗಿಸುವ ಶಮಿ
ಆಸ್ಟ್ರೇಲಿಯಾಕ್ಕೆ ಕೊನೆಯ ಓವರ್ ನಲ್ಲಿ ಗೆಲುವಿಗಾಗಿ 11 ರನ್ ಬೇಕಿತ್ತು. ಈ ಸಮಯದಲ್ಲಿ ತಮ್ಮ ಮೊದಲನೇ ಓವರ್ ಬೌಲಿಂಗ್ ಮಾಡಿದ ಶಮಿ, ತಮ್ಮ ಅನುಭವವನ್ನು ಧಾರೆ ಎರೆದರು.
ಮೊದಲ ಎರಡು ಎಸೆತಗಳಲ್ಲಿ ನಾಲ್ಕು ರನ್ ಬಿಟ್ಟುಕೊಟ್ಟ ಅವರು, ನಂತರದ ನಾಲ್ಕು ಎಸೆತಗಳಲ್ಲಿ ಮೂರು ವಿಕೆಟ್ ಪಡೆದು, ಒಂದ್ ರನ್ ಔಟ್ ಕೂಡ ಮಾಡಿದರು. ಪರಿಣಾಮಕಾರಿ ಯಾರ್ಕರ್ ಎಸೆದ ಅವರು ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಿದರು. ಬುಮ್ರಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಶಮಿ, ಒಂದೇ ಓವರ್ ನಲ್ಲಿ ತಾವು ಎಂತ ಬೌಲರ್ ಎಂದು ಸಾಬೀತುಪಡಿಸಿದರು.
ಅವರು ಸಂಪೂರ್ಣವಾಗಿ ಫಿಟ್ ಆಗಿದ್ದು, ಲಯವನ್ನು ಕಂಡುಕೊಂಡಿರುವುದು ರೋಹಿತ್ ಶರ್ಮಾಗೆ ಸಾಕಷ್ಟು ಸಂತಸ ತಂದಿದೆ. ಮುಂದಿನ ಪಂದ್ಯಗಳಲ್ಲಿ ಭಾರತದ ಪ್ರಮುಖ ವಿಕೆಟ್ ಟೇಕರ್ ಆಗಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications