For Quick Alerts
ALLOW NOTIFICATIONS  
For Daily Alerts
 

IND vs BAN: ಮಳೆ-ಬಾಧಿತ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ; ಸೆಮಿಸ್ ದಾರಿ ಸುಗಮ

T20 World Cup 2022: Thrilling Win For India Against Bangladesh In Rain-affected Match; Easy To Semi-final Way

ಬುಧವಾರ ಅಡಿಲೇಡ್ ಓವಲ್‌ನಲ್ಲಿ ಮಳೆ-ಬಾಧಿತ ಪಂದ್ಯದ ಕೊನೆಯ ಓವರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ತಂಡ 5 ರನ್‌ಗಳ ರೋಚಕ ಜಯ ಸಾಧಿಸಿತು ಮತ್ತು ಗ್ರೂಪ್ 2ರ ಅಂಕಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಹಿಂದಿಕ್ಕಿ ಮತ್ತೆ ಅಗ್ರಸ್ಥಾನಕ್ಕೇರಿತು.

ಟಿ20 ವಿಶ್ವಕಪ್ 2022ರ ಬಾಂಗ್ಲಾದೇಶದ ವಿರುದ್ಧದ ರೋಮಾಂಚಕ ಪಂದ್ಯವನ್ನು ಪ್ರೇಕ್ಷಕರು ಕುರ್ಚಿ ತುದಿಯಲ್ಲಿ ಕುಳಿತು ನೋಡಿದರು. ಯುವ ವೇಗಿ ಅರ್ಷ್‌ದೀಪ್ ಸಿಂಗ್ ಕೊನೆಯ ಓವರ್‌ನಲ್ಲಿ 20 ರನ್ ರಕ್ಷಣೆ ಮಾಡಿದರು. ಆಯ್ಕೆಗಾರರು ತಮ್ಮನ್ನು ಏಕೆ ಟಿ20 ವಿಶ್ವಕಪ್ 2022 ತಂಡಕ್ಕೆ ಆಯ್ಕೆ ಮಾಡಿದ್ದಾರೆ ಎಂಬುದನ್ನು ತೋರಿಸಿದರು ಮತ್ತು ಪಂದ್ಯದ ಹೀರೋ ಆಗಿ ಹೊರಹೊಮ್ಮಿದರು.

ಇದೀಗ ಬಾಂಗ್ಲಾದೇಶ ವಿರುದ್ಧ ಅದ್ಭುತ ಗೆಲುವಿನ ಮೂಲಕ ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಭರವಸೆಯನ್ನು ಮತ್ತಷ್ಟು ಬಲಪಡಿಸಿದೆ. ಮುಂದಿನ ಪಂದ್ಯ ಜಿಂಬಾಬ್ವೆ ವಿರುದ್ಧ ನವೆಂಬರ್ 6ರಂದು ನಡೆಯಲಿದೆ.

ಬಾಂಗ್ಲಾದೇಶಕ್ಕೆ 16 ಓವರ್‌ಗಳಲ್ಲಿ 151 ರನ್‌ಗಳ ಗುರಿ

ಬಾಂಗ್ಲಾದೇಶಕ್ಕೆ 16 ಓವರ್‌ಗಳಲ್ಲಿ 151 ರನ್‌ಗಳ ಗುರಿ

ಬಾಂಗ್ಲಾದೇಶವು 185 ರನ್‌ಗಳ ಚೇಸಿಂಗ್‌ನ 7ನೇ ಓವರ್‌ನ ನಂತರ ಮಳೆ ಸುರಿಯಲು ಪ್ರಾರಂಭಿಸುವ ಮೊದಲು ಲಿಟ್ಟನ್ ದಾಸ್ ಭಾರತೀಯ ವೇಗಿಗಳನ್ನು ದಂಡಿಸಿದರು. ಲಿಟ್ಟನ್ ದಾಸ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರಿಂದ ಬಾಂಗ್ಲಾದೇಶ 185 ರನ್ ಚೇಸ್‌ನಲ್ಲಿ ಅದ್ಭುತ ಆರಂಭವನ್ನು ಪಡೆಯಿತು.

7 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 66 ರನ್ ಗಳಿಸಿದ್ದರಿಂದ ಶಕೀಬ್ ಅಲ್ ಹಸನ್ ನಾಯಕತ್ವದ ಬಾಂಗ್ಲಾದೇಶ ತಂಡವು 7ನೇ ಓವರ್‌ನಲ್ಲಿ ಡಕ್‌ವರ್ತ್ ಲೂಸ್ ಸ್ಟರ್ನ್ (DLS) ಸಮಾನ ಸ್ಕೋರ್‌ಗಿಂತ 17 ರನ್ ಮುಂದಿತ್ತು. ಆದಾಗ್ಯೂ, ಸರಿಸುಮಾರು 30 ನಿಮಿಷಗಳ ಕಾಲ ಸುರಿದ ಮಳೆಯಿಂದಾಗಿ 4 ಓವರ್‌ಗಳ ಕಡಿತದ ನಂತರ ಸೂಪರ್ 12 ಪಂದ್ಯ ಪುನರಾರಂಭವಾಯಿತು ಮತ್ತು ಬಾಂಗ್ಲಾದೇಶಕ್ಕೆ 16 ಓವರ್‌ಗಳಲ್ಲಿ 151 ರನ್‌ಗಳ ಗುರಿಯನ್ನು ನೀಡಲಾಯಿತು.

60 ರನ್ ಗಳಿಸಿದ್ದ ಅಪಾಯಕಾರಿ ಬ್ಯಾಟರ್ ಲಿಟ್ಟನ್ ದಾಸ್ ರನೌಟ್

60 ರನ್ ಗಳಿಸಿದ್ದ ಅಪಾಯಕಾರಿ ಬ್ಯಾಟರ್ ಲಿಟ್ಟನ್ ದಾಸ್ ರನೌಟ್

ಮಳೆಯ ವಿಳಂಬದ ನಂತರ ಪಂದ್ಯ ಪುನರಾರಂಭಗೊಂಡ ಕೆಲವೇ ಕ್ಷಣಗಳಲ್ಲಿ ಕೆಎಲ್ ರಾಹುಲ್ ಅವರ ನೇರ ಹಿಟ್ ಮೂಲಕ 60 ರನ್ ಗಳಿಸಿದ್ದ ಅಪಾಯಕಾರಿ ಬ್ಯಾಟರ್ ಲಿಟ್ಟನ್ ದಾಸ್ ಅವರನ್ನು ರನೌಟ್ ಮಾಡಿದರು ಮತ್ತು ಭಾರತಕ್ಕೆ ಮೊದಲ ವಿಕೆಟ್ ತಂದರು.

ಲಿಟ್ಟನ್ ದಾಸ್ ಔಟಾದ ಸ್ವಲ್ಪ ಸಮಯದ ನಂತರ, ಮೊಹಮ್ಮದ್ ಶಮಿ ಅವರ ಬೌಲಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಕ್ಯಾಚ್‌ಗೆ ಶಾಂಟೊ ಔಟಾದರು. ಅಲ್ಲಿಂದ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಹೋದ ಬಾಂಗ್ಲಾದೇಶ ಅಂತಿಮವಾಗಿ 16 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಇದಕ್ಕೂ ಮೊದಲು, ವಿರಾಟ್ ಕೊಹ್ಲಿ ತಮ್ಮ ಅಚ್ಚುಮೆಚ್ಚಿನ ಮೈದಾನ ಅಡಿಲೇಡ್‌ನಲ್ಲಿ ಬ್ಯಾಟಿಂಗ್ ಪರಾಕ್ರಮ ಮುಂದುವರೆಸಿದರು. ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನಂತರ, ಭಾರತವು 6 ವಿಕೆಟ್‌ಗೆ 184 ರನ್ನುಗಳ ಸವಾಲಿನ ಮೊತ್ತ ಗಳಿಸಲು ಕೆಎಲ್ ರಾಹುಲ್ ಸಹ ಫಾರ್ಮ್‌ಗೆ ಮರಳಿದರು.

ವಿರಾಟ್ ಕೊಹ್ಲಿ ತಮ್ಮ ಅಚ್ಚುಮೆಚ್ಚಿನ ಮೈದಾನ ಅಡಿಲೇಡ್‌

ವಿರಾಟ್ ಕೊಹ್ಲಿ ತಮ್ಮ ಅಚ್ಚುಮೆಚ್ಚಿನ ಮೈದಾನ ಅಡಿಲೇಡ್‌

ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಮೂರನೇ ಅರ್ಧಶತಕ (64 ರನ್) ಗಳಿಸಿ ಅಜೇಯರಾಗುಳಿದರೆ, ಕೆಎಲ್ ರಾಹುಲ್ ಅಗತ್ಯ 50 ರನ್ ಗಳಿಸಿದರು. ವಿರಾಟ್ ಕೊಹ್ಲಿ ಕೆಲವು ನಿರ್ಣಾಯಕ ಜೊತೆಯಾಟಗಳ ಭಾಗವಾಗಿದ್ದರು. ಕೆಎಲ್ ರಾಹುಲ್ ಅವರೊಂದಿಗೆ ಎರಡನೇ ವಿಕೆಟ್‌ಗೆ 67 ಮತ್ತು ಸೂರ್ಯಕುಮಾರ್ ಯಾದವ್ (30 ರನ್) ಅವರೊಂದಿಗೆ ಮೂರನೇ ವಿಕೆಟ್‌ಗೆ 38 ರನ್ ಗಳಿಸಿ ಭಾರತ ದೊಡ್ಡ ಮೊತ್ತ ಗಳಿಸಲು ನೆರವಾದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ (7 ಎಸೆತಗಳಲ್ಲಿ 2 ರನ್) ತಸ್ಕಿನ್ ಅಹ್ಮದ್ ಅವರ ಮೊದಲ ಓವರ್‌ನಲ್ಲಿ ಕೈಬಿಟ್ಟ ಕ್ಯಾಚ್‌ನ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ನಾಯಕ ರೋಹಿತ್ ಶರ್ಮಾ ಔಟಾದ ನಂತರ, ವಿರಾಟ್ ಕೊಹ್ಲಿ ವಿಕೆಟ್‌ಗಳ ನಡುವೆ ಕೆಲವು ತ್ವರಿತ ಓಟದ ಮೂಲಕ ತಸ್ಕಿನ್ ಅವರ ಆರಂಭಿಕ ಒತ್ತಡವನ್ನು ನಿವಾರಿಸಿದರು.

ರವಿಚಂದ್ರನ್ ಅಶ್ವಿನ್ (6 ಎಸೆತಗಳಲ್ಲಿ ಔಟಾಗದೆ 13 ರನ್)

ರವಿಚಂದ್ರನ್ ಅಶ್ವಿನ್ (6 ಎಸೆತಗಳಲ್ಲಿ ಔಟಾಗದೆ 13 ರನ್)

ಶಕೀಬ್ ಅಲ್ ಹಸನ್ (4 ಓವರ್‌ಗಳಲ್ಲಿ 2/33) ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅವರ ವಿಕೆಟ್‌ಗಳನ್ನು ಪಡೆದರು. ಆದಾಗ್ಯೂ, ಹಾರ್ದಿಕ್ ಪಾಂಡ್ಯ (5), ದಿನೇಶ್ ಕಾರ್ತಿಕ್ (7) ಮತ್ತು ಅಕ್ಸರ್ ಪಟೇಲ್ (7) ಇನ್ನೊಂದು ತುದಿಯಲ್ಲಿ ಹೆಚ್ಚಿನ ಬೆಂಬಲವನ್ನು ನೀಡಲು ಸಾಧ್ಯವಾಗದಿದ್ದರೂ, ಭಾರತವನ್ನು ಮೇಲಿನ ದೊಡ್ಡ ಮೊತ್ತಕ್ಕೆ ಕೊಂಡೊಯ್ಯಲು ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರ ಮುಂದುವರೆಸಿದರು. ಅಂತಿಮವಾಗಿ, ರವಿಚಂದ್ರನ್ ಅಶ್ವಿನ್ (6 ಎಸೆತಗಳಲ್ಲಿ ಔಟಾಗದೆ 13 ರನ್) 180ರ ಗಡಿ ದಾಟಲು ಉಪಯುಕ್ತ ಕಾಣಿಕೆ ನೀಡಿದರು.

Story first published: Wednesday, November 2, 2022, 19:11 [IST]
Other articles published on Nov 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+