For Quick Alerts
ALLOW NOTIFICATIONS  
For Daily Alerts
 

T20 World Cup 2022 Warm-up: ಆಸೀಸ್‌ನಿಂದ ಪಂದ್ಯ ಕಸಿದ ಕಿಂಗ್ ಕೊಹ್ಲಿಯ ಮಿಂಚಿನ ಫೀಲ್ಡಿಂಗ್; ಕಾಂಗರೂಗಳು ತಬ್ಬಿಬ್ಬು

T20 World Cup 2022: Virat Kohlis Lightning Fielding Steals The Match From Australia

ಸೋಮವಾರ (ಅಕ್ಟೋಬರ್ 17) ಗಬ್ಬಾದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ರೋಚಕವಾಗಿ ಜಯಗಳಿಸಿದೆ. ಆತಿಥೇಯ ತಂಡದ ವಿರುದ್ಧ 6 ರನ್‌ಗಳ ಅಂತರದಲ್ಲಿ ಗೆಲುವಿನ ನಗೆ ಬೀರಿತು.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ 19 ರನ್‌ಗಳಿಗೆ ಔಟಾಗಿರಬಹುದು. ಆದರೆ ಭಾರತದ ಮಾಜಿ ನಾಯಕ ತಮ್ಮ ಅದ್ಭುತ ಫೀಲ್ಡಿಂಗ್ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು.

ಒಂದೇ ಕೈನಲ್ಲಿ ಹಿಡಿದ ಮತ್ತೊಂದು ಅದ್ಭುತ ಕ್ಯಾಚ್

ಒಂದೇ ಕೈನಲ್ಲಿ ಹಿಡಿದ ಮತ್ತೊಂದು ಅದ್ಭುತ ಕ್ಯಾಚ್

ಮೊದಲಿಗೆ ವಿರಾಟ್ ಕೊಹ್ಲಿ ಮೈದಾನದಲ್ಲಿ ಉತ್ತಮ ಚಾಣಾಕ್ಷತೆಯನ್ನು ತೋರಿಸಿದರು ಮತ್ತು ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ 18ನೇ ಓವರ್‌ನಲ್ಲಿ ಆಸ್ಟ್ರೇಲಿಯದ ಅಪಾಯಕಾರಿ ಬ್ಯಾಟರ್ ಟಿಮ್ ಡೇವಿಡ್ ಅವರನ್ನು ಮಿಂಚಿನ ಕ್ಷೇತ್ರ ರಕ್ಷಣೆಯ ಮೂಲಕ ರನ್ ಔಟ್ ಮಾಡಿದರು.

ನಂತರ ಅದೇ ಅಂತಿಮ ಓವರ್‌ನಲ್ಲಿ ಆಸ್ಟ್ರೇಲಿಯಾಕ್ಕೆ 11 ರನ್‌ಗಳ ಅಗತ್ಯವಿದ್ದಾಗ, ವಿರಾಟ್ ಕೊಹ್ಲಿ ಲಾಂಗ್-ಆನ್‌ನಲ್ಲಿ ಒಂದೇ ಕೈನಲ್ಲಿ ಹಿಡಿದ ಮತ್ತೊಂದು ಅದ್ಭುತ ಪ್ರಯತ್ನದೊಂದಿಗೆ ಪ್ಯಾಟ್ ಕಮ್ಮಿನ್ಸ್ ಅವರನ್ನು ಮರಳಿ ಪೆವಿಲಿಯನ್‌ಗೆ ಕಳುಹಿಸಿದರು. ಹೀಗಾಗಿ ಮೈದಾನದಲ್ಲಿ ವಿರಾಟ್ ಕೊಹ್ಲಿಯ ಮಿಂಚಿನ ಫೀಲ್ಡಿಂಗ್‌ಗೆ ಕಾಂಗರೂ ಪಡೆ ತಬ್ಬಿಬ್ಬಾಯಿತು.

ಲಾಂಗ್-ಆನ್‌ನಲ್ಲಿ ಕ್ಯಾಚ್ ತೆಗೆದುಕೊಳ್ಳಲು ತನ್ನ ಪರಿಪೂರ್ಣ ಜಿಗಿತ

ಲಾಂಗ್-ಆನ್‌ನಲ್ಲಿ ಕ್ಯಾಚ್ ತೆಗೆದುಕೊಳ್ಳಲು ತನ್ನ ಪರಿಪೂರ್ಣ ಜಿಗಿತ

ಮೊಹಮ್ಮದ್ ಶಮಿ ಬೌಲ್ ಮಾಡಿದ ಕಡಿಮೆ ಫುಲ್-ಟಾಸ್ ಆಗಿತ್ತು ಮತ್ತು ಪ್ಯಾಟ್ ಕಮ್ಮಿನ್ಸ್ ಅದನ್ನು ಬಲವಾಗಿ ನೆಲದ ಕೆಳಗೆ ಹೊಡೆದರು. ಚೆಂಡು ಬೌಂಡರಿ ಹಗ್ಗಗಳ ಮೇಲೆ ಹೋಗುವಂತೆ ಕಾಣುತ್ತಿತ್ತು. ಆದರೆ ಅಲ್ಲಿದ್ದ ವಿರಾಟ್ ಕೊಹ್ಲಿ ಲಾಂಗ್-ಆನ್‌ನಲ್ಲಿ ಕ್ಯಾಚ್ ತೆಗೆದುಕೊಳ್ಳಲು ತನ್ನ ಪರಿಪೂರ್ಣ ಜಿಗಿತವನ್ನು ಮಾಡಿದರು. ಆಗ ಚೆಂಡು ಅವರ ಬಲಗೈಗೆ ಸಿಕ್ಕಿತು. ವಿರಾಟ್ ಕೊಹ್ಲಿಯ ಅದ್ಭುತ ಕ್ಯಾಚ್‌ಗೆ ಡಗ್-ಔಟ್‌ನಲ್ಲಿ ಕುಳಿತ ಆಸ್ಟ್ರೇಲಿಯಾದ ಆಟಗಾರರು ಸಹ ಕೊಹ್ಲಿಯನ್ನು ಶ್ಲಾಘಿಸಿದರು.

ಇನ್ನು ಅಂತಿಮ ಓವರ್‌ನಲ್ಲಿ ಮೊಹಮ್ಮದ್ ಶಮಿ ಅದ್ಭುತವಾಗಿದ್ದರು ಮತ್ತು ಅಂತಿಮ ಓವರ್‌ನಲ್ಲಿ ಅವರು ಕೇವಲ ನಾಲ್ಕು ರನ್‌ಗಳನ್ನು ಬಿಟ್ಟುಕೊಟ್ಟರು, ಅದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಉರುಳಿದವು. ಹೀಗಾಗಿ ಅಂತಿಮವಾಗಿ ಭಾರತವು ಆರು ರನ್‌ಗಳ ಜಯ ಸಾಧಿಸಿತು.

ಆಸೀಸ್ 20 ಓವರ್‌ಗಳಲ್ಲಿ 180 ರನ್‌ಗಳಿಗೆ ಸರ್ವಪತನ

ಆಸೀಸ್ 20 ಓವರ್‌ಗಳಲ್ಲಿ 180 ರನ್‌ಗಳಿಗೆ ಸರ್ವಪತನ

ಇಡೀ ಪಂದ್ಯದಲ್ಲಿ ಆಸ್ಟ್ರೇಲಿಯ ನಾಯಕ ಆರೋನ್ ಫಿಂಚ್ 187 ರನ್‌ಗಳ ಚೇಸ್‌ಗೆ ಮುನ್ನೆಲೆಯಲ್ಲಿ ನಿಂತು ಆಡಿದ ಕಾರಣ ಆಸ್ಟ್ರೇಲಿಯಾ ಗೆಲ್ಲುವ ಸೂಚನೆ ನೀಡಿತ್ತು. ಆದರೆ ಅವರ ಔಟಾದ ನಂತರ, ಟಿ20 ವಿಶ್ವಕಪ್‌ನ ಹಾಲಿ ಚಾಂಪಿಯನ್ನ ಮತ್ತು ಆತಿಥೇಯರು ನಿರ್ಣಾಯಕ ಘಟ್ಟದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರು ಮತ್ತು ಭಾರತವು ರೋಚಕ ಗೆಲುವು ಸಾಧಿಸಿತು.

ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ಅವರ ಅರ್ಧಶತಕಗಳ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 186/7 ಸ್ಕೋರ್ ಮಾಡಿತ್ತು. 187 ರನ್‌ಗಳ ಗುರಿ ಬೆನ್ನತ್ತಿದ ಆಸೀಸ್ 20 ಓವರ್‌ಗಳಲ್ಲಿ 180 ರನ್‌ಗಳಿಗೆ ಸರ್ವಪತನ ಕಂಡಿತು.

Story first published: Monday, October 17, 2022, 14:58 [IST]
Other articles published on Oct 17, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+