ಟಿ20 ವಿಶ್ವಕಪ್‌ನಲ್ಲಿ ರನ್ ಮಳೆ ಹರಿಸಲಿರುವ ಆಟಗಾರ ಈತನೇ!: ವೀರೇಂದ್ರ ಸೆಹ್ವಾಗ್ ಭವಿಷ್ಯ

ಟಿ20 ವಿಶ್ವಕಪ್ ಸೂಪರ್ ಅರ್ಹತಾ ಸುತ್ತಿನ ಪಂದ್ಯಗಳು ಪಂದ್ಯಗಳು ಅಂತಿಮ ಹಂತದಲ್ಲಿದೆ. ಶನಿವಾರದಿಂದ ಪ್ರಮುಖ ಘಟ್ಟ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಲಿದ್ದು ಟೂರ್ನಿಯ ಮೇಲಿನ ಕುತೂಹಲ ಹೆಚ್ಚಾಗಲಿದೆ. ಬಲಿಷ್ಠ ತಂಡಗಳ ನಡುವಿನ ಸೆಣೆಸಾಟ ನೋಡಲು ಅಭಿನಮಾನಿಗಳು ಕಾತರರಾಗಿದ್ದಾರೆ. ಈ ಸಮದರ್ಣದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಭವಿಷ್ಯವೊಂದನ್ನು ನುಡಿದಿದ್ದು ಕುತೂಹಲ ಮೂಡಿಸಿದೆ.
ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಈ ಬಾರಿಯ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸುವ ಆಟಗಾರ ಯಾರು ಎಂದು ಉಲ್ಲೇಖಿಸಿದ್ದಾರೆ. ಇತ್ತೀಚೆಗೆ ನೀಡುವತ್ತಿರುವ ಸ್ಥಿರ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಸೆಹ್ವಾಗ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸೆಹ್ವಾಗ್ ಹೇಳಿದ ಆ ಆಟಗಾರ ಭಾರತೀಯ ಅಲ್ಲ. ಬದಲಾಗಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ.

ಬಾಬರ್ ಅಜಂ ಬಗ್ಗೆ ಸೆಹ್ವಾಗ್ ಭವಿಷ್ಯ
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸುವ ಆಟಗಾರ ಯಾರು ಎಂದು ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ. ವೀರೇಂದ್ರ ಸೆಹ್ವಾಗ್ ಪ್ರಕಾರ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ರನ್‌ಗಳಿಸುವ ಆಟಗಾರ. ಬಾಬರ್ ಅಜಂ ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಾರೆ ಎಂದು ಸೆಹ್ವಾಗ್ ಪ್ರಶಂಸಿಸಿದ್ದು ಆತನ ಬ್ಯಾಟಿಂಗ್ ನೋಡಲು ಆನಂದವಾಗುತ್ತದೆ ಎಂದಿದ್ದಾರೆ.

ಸೆಹ್ವಾಗ್ ಹೇಳಿದ್ದಿಷ್ಟು
ವಿಶ್ವಕಪ್ ಟೂರ್ನಿ ಹಿನ್ನೆಲೆಯಲ್ಲಿ ಮಾತನಾಡಿದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಾಬರ್ ಅಜಂ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. "ಪಾಕಿಸ್ತಾನದ ಬಾಬರ್ ಅಜಂ ಅದ್ಭುತವಾಗಿ ಬ್ಯಾಟಿಂಗ್ ನಡೆಸುತ್ತಾರೆ. ಅವರು ಬ್ಯಾಟಿಂಗ್ ನಡೆಸುವುದನ್ನು ನೋಡುವುದಕ್ಕೆ ಆನಂದವಾಗುತ್ತದೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ನಡೆಸುವಾಗ ಹೇಗೆ ನೆಮ್ಮದಿನ ಭಾವ ಮೂಡುತ್ತದೋ ಹಾಗೆಯೇ ಬಾಬರ್ ಅಜಂ ನ್ಯಾಟಿಂಗ್ ನೋಡುವಾಗ ಆನಂದವಾಗುತ್ತದೆ"ಎಂದು ಪಾಕಿಸ್ತಾನ ತಂಡದ ನಾಯಕನ ಬ್ಯಾಟಿಂಗ್ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ ವೀರೇಂದ್ರ ಸೆಹ್ವಾಗ್.

ಭಾನುವಾರ ನಡೆಯಲಿದೆ ಭಾರತ vs ಪಾಕ್ ಪಂದ್ಯ
ಈ ಬಾರಿಯ ವಿಶ್ವಕಪ್ ಟೂರ್ನಿಯ ಅತ್ಯಂತ ಕುತೂಹಲಕಾರಿ ಪಂದ್ಯವೆಂದೇ ಉಲ್ಲೇಖಿಸಲಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಈಗ ಕ್ಷಣಗಣನೆ ಆರಂಭವಾಗಲಿದೆ. ಭಾನುವಾರದಂದು ಈ ಎರಡು ತಂಡಗಳು ಪರಸ್ಪರ ಮುಖಾಮುಖಿಯಾಗಲಿದೆ. ಅಕ್ಟೋಬರ್ 23 ಭಾನುವಾರದಂದು ಎಂಸಿಜಿಯಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎರಡು ತಂಡಗಳ ನಡುವಿನ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ. ಭಾರತ ತಂಡದ ಬೌಲಿಂಗ್ ವಿಭಾಗದ ಪ್ರದರ್ಶನ ತಂಡಕ್ಕೆ ಕಳವಳ ಮೂಡಿಸಿದ್ದರೆ ಪಾಕಿಸ್ತಾನ ತಂಡ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನು ಹೆಚ್ಚಾಗಿ ನಂಬಿಕೊಂಡಿದ್ದಯ ಮರ್ದಯಮ ಕ್ರಮಾಂಕದ ಆಟಗಾರರ ಪ್ರದರ್ಶನ ಆ ತಂಡಕ್ಕೆ ಕಳವಳ ಮೂಡಿಸಿದೆ. ಇನ್ನು ಪಾಕಿಸ್ತಾನದ ಮತ್ತೊಂದು ಪ್ರಮುಖ ಬಲ ಅದರ ವೇಗದ ಬೌಲಿಂಗ್ ವಿಭಾಗ. ಹೀಗಾಗಿ ಭಾರತದ ಬ್ಯಾಟಿಂಗ್ ಹಾಗೂ ಪಾಕಿಸ್ತಾನದ ಬೌಲಿಂಗ್ ವಿಭಾಗದ ಈ ಮುಖಾಮುಖಿ ಎಲ್ಲರ ಕುತೂಹಲ ಕೆರಳಿಸಿದೆ.

ಭಾರತದ ಸ್ಕ್ವಾಡ್ ಹೀಗಿದೆ
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಶಮಿ
ಸ್ಟ್ಯಾಂಡ್‌ಬೈ ಆಟಗಾರರು: ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications