For Quick Alerts
ALLOW NOTIFICATIONS  
For Daily Alerts
 

ಸಾರ್ವಕಾಲಿಕ ಬೆಸ್ಟ್ ಫಿನಿಷರ್ ಯಾರು? ಎಂಬ ಪ್ರಶ್ನೆಗೆ ಉತ್ತರಿಸಿದ ವಾಸಿಂ ಜಾಫರ್

Wasim jaffer

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಮೆಲ್ಬರ್ನ್‌ನ ಎಂಸಿಜಿ ಮೈದಾನದಲ್ಲಿ ತನ್ನ ವೃತ್ತಿ ಜೀವನದ ಬೆಸ್ಟ್ ಇನ್ನಿಂಗ್ಸ್‌ ಆಡುವ ಮೂಲಕ ಭಾರತಕ್ಕೆ ಗೆಲುವು ತಂದಿಟ್ಟರು. 53 ಎಸೆತಗಳಲ್ಲಿ ಅಜೇಯ 82 ರನ್ ಕಲೆಹಾಕಿದ ವಿರಾಟ್ ಅಮೋಘ ಆಟವಾಡುವ ಮೂಲಕ ರಣರೋಚಕ ಗೆಲುವು ತಂದುಕೊಟ್ಟರು.

ವಿರಾಟ್ ಕೊಹ್ಲಿಯ ಈ ಬೆಸ್ಟ ಇನ್ನಿಂಗ್ಸ್ ನೋಡಿದ ಮೇಲೆ ಅನೇಕ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಕೊಹ್ಲಿಯ ಪ್ರದರ್ಶನವನ್ನ ಹಾಡಿ ಹೊಗಳಿದ್ದಾರೆ. ಇಂತಹ ಒತ್ತಡದ ಸನ್ನಿವೇಶದಲ್ಲಿ ವಿರಾಟ್ ಕೊಹ್ಲಿಗಲ್ಲದೆ ಮತ್ಯಾರಿಗೂ ಈ ರೀತಿಯ ಆಟವಾಡಲು ಸಾಧ್ಯವಿಲ್ಲ ಎಂದೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದು ಕೇವಲ ಕೊಹ್ಲಿ ಬೆಸ್ಟ್‌ ಇನ್ನಿಂಗ್ಸ್‌ ಅಷ್ಟೇ ಅಲ್ಲ, ಭಾರತದ ಬೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ ಎಂದು ಪ್ರಶಂಸಿದ್ದರು.

ಹಾಗಿದ್ರೆ ವಿರಾಟ್ ಕೊಹ್ಲಿ ವಿಶ್ವದ ಬೆಸ್ಟ್ ಫಿನಿಷರ್‌ಗಳಲ್ಲಿ ಪ್ರಮುಖರೇ, ವಿಶ್ವದ ಬೆಸ್ಟ್‌ ಫಿನಿಷರ್‌ಗಳಲ್ಲಿ ಯಾರು ಮೊದಲಿಗರು ಎಂಬ ಪ್ರಶ್ನೆಗೆ ಟೀಂ ಇಂಡಿಯಾ ಮಾಜಿ ಆಟಗಾರ ವಾಸಿಂ ಜಾಫರ್ ಉತ್ತರಿಸಿದ್ದಾರೆ.

'' ನನ್ನ ಪ್ರಕಾರ ಟಿ20 ಯುಗ ಪ್ರಾರಂಭಕ್ಕೂ ಮುನ್ನ ಮೈಕಲ್ ಬೆವೆನ್ ಚೇಸಿಂಗ್‌ ಮಾಡುವಾಗ ಕೆಲವು ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆತ ಪಂದ್ಯದ ಕೊನೆಯವರೆಗೆ ಎಷ್ಟು ಪಂದ್ಯಗಳನ್ನ ಆಡಿದ್ದಾರೆ, ಅಷ್ಟೂ ಪಂದ್ಯಗಳಲ್ಲಿ ಬಹುತೇಕ ಆಸ್ಟ್ರೇಲಿಯಾ ಗೆದ್ದಿದೆ. ಜಾವೇದ್ ಮಿಯಾಂದಾದ್ ಕೂಡ ಉತ್ತಮ ಬ್ಯಾಟರ್ ಆಗಿದ್ದರು, ಪಾಕಿಸ್ತಾನ ತಂಡವನ್ನ ಹಲವು ಬಾರಿ ಗೆಲುವಿನ ದಡ ತಲುಪಿಸಿದ್ದಾರೆ'' ಎಂದು ಜಾಫರ್ ಬ್ಯಾಟ್‌ಬ್ರಿಕ್ಸ್‌7 ಪ್ರಸ್ತುತ ಪಡಿಸುವ ಕ್ರಿಕ್‌ ಕ್ರ್ಯಾಕರ್‌ನ ರನ್‌ ಕೀ ರಣನೀತಿ ಶೋನಲ್ಲಿ ತಿಳಿಸಿದ್ದಾರೆ.

ತನ್ನ ಮಾತನ್ನು ಮುಂದುವರಿಸಿರುವ ಜಾಫರ್ ಟೀಂ ಇಂಡಿಯಾದ ಗ್ರೇಟೆಸ್ಟ್ ಫಿನಿಷರ್ ಎಂಎಸ್ ಧೋನಿ ಕುರಿತಾಗಿ ಮಾತನಾಡಿದ್ದಾರೆ.

''ಪ್ರಸ್ತುತ ಕ್ರಿಕೆಟ್ ಯುಗದಲ್ಲಿ ನೋಡುವುದಾದ್ರೆ ಎಂ.ಎಸ್ ಧೋನಿ ನಿಜಕ್ಕೂ ಅದ್ಭುತ ಇನ್ನಿಂಗ್ಸ್‌ ಆಡಿದ್ದಾರೆ. ಅತ್ಯಂತ ಒತ್ತಡದ ಸನ್ನಿವೇಶಗಳಲ್ಲಿ ಧೋನಿ ಅನೇಕ ಬಾರಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ ಮತ್ತು ಆತ ಹೇಗೆ ಪಂದ್ಯವನ್ನ ಫಿನಿಷ್ ಮಾಡಬೇಕು ಎಂಬ ಮಾರ್ಗದರ್ಶನವನ್ನು ಸೃಷ್ಟಿಸಿದ್ದಾರೆ. ಪಂದ್ಯವನ್ನ ಆದಷ್ಟು ಆಳವಾಗಿ ತೆಗೆದುಕೊಂಡು, ಬೌಲರ್‌ಗಳ ಮೇಲೆ ಒತ್ತಡ ಹೇರುವುದಾಗಿದೆ. ಕೆಲವು ಎಸೆತಗಳಲ್ಲಿ ಸರಿಯಾಗಿ ಕನೆಕ್ಟ್‌ ಮಾಡಿದ್ರೆ ಸಿಕ್ಸರ್ ಹೋಗುತ್ತದೆ ಮತ್ತು ಪಂದ್ಯವು ತಮ್ಮ ಕಡೆಗೆ ವಾಲುತ್ತದೆ ಎಂಬುದನ್ನ ಎಂಎಸ್‌ ಧೋನಿ ಚೆನ್ನಾಗಿ ಅರಿತಿದ್ದರು'' ಎಂದು ಜಾಫರ್ ತನ್ನ ಮಾತಿಗೆ ಸೇರಿಸಿದ್ದಾರೆ.

'' ಅದೇ ರೀತಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ವಿರಾಟ್‌ ಕೊಹ್ಲಿ ಪಂದ್ಯವನ್ನು ಆಳವಾಗಿ ತೆಗೆದುಕೊಂಡು ಹೋದರು, 3 ಓವರ್‌ಗೆ 48 ರನ್‌ಗಳ ಅವಶ್ಯಕತೆಯಿತ್ತು. ಜೋಡಿ ಸಿಕ್ಸರ್‌ಗಳನ್ನ ಸಿಡಿಸಿದ ತಕ್ಷಣ ಬೌಲರ್‌ಗಳು ಒತ್ತಡಕ್ಕೆ ಒಳಗಾದರು. ನನ್ನ ಪ್ರಕಾರ ಎಂ.ಎಸ್ ಧೋನಿ ಬೆಸ್ಟ್‌ ಫಿನಿಷರ್ ಮತ್ತು ವಿರಾಟ್ ಕೊಹ್ಲಿ ಆ ಪಟ್ಟಿಯಲ್ಲಿ ಇರುತ್ತಾರೆ'' ಎಂದು ವಾಸಿಂ ಜಾಫರ್ ತನ್ನ ಮಾತನ್ನು ಕೊನೆಗೊಳಿಸಿದ್ರು.

ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಪಾಯಿಂಟ್ಸ್ ಟೇಬಲ್‌ ತಿಳಿಯಲು ಈ ಲಿಂಕ್‌ ಮೇಲೆ ಕ್ಲಿಕ್ ಮಾಡಿ

Story first published: Tuesday, October 25, 2022, 23:24 [IST]
Other articles published on Oct 25, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+