Harmanpreet Kaur: ಟಿ20 ಕ್ರಿಕೆಟ್‌ನಲ್ಲಿ ಬೃಹತ್ ಮೈಲಿಗಲ್ಲು ಸ್ಥಾಪಿಸಿದ ಹರ್ಮನ್‌ಪ್ರೀತ್ ಕೌರ್

ಸೋಮವಾರ, ಫೆಬ್ರವರಿ 20ರಂದು ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ 2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯ ಬಿ ಗುಂಪಿನ ಲೀಗ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಮತ್ತು ಐರ್ಲೆಂಡ್ ಮಹಿಳಾ ತಂಡಗಳು ಮುಖಾಮುಖಿಯಾದವು.
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸೋಮವಾರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ, 150 ಅಂತಾರಾಷ್ಟ್ರಿಯ ಟಿ20 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪುರುಷರ ಕ್ರಿಕೆಟ್‌ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಟಿ20 ಮಾದರಿಯಲ್ಲಿ (148) ಅತಿ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ. "ಟಿ20 ಕ್ರಿಕೆಟ್‌ನಲ್ಲಿ 150 ಟಿ20 ಪಂದ್ಯಗಳನ್ನು ಆಡುವುದು ಬಹಳಷ್ಟು ಅರ್ಥಪೂರ್ಣವಾಗಿದೆ. ನನ್ನ ತಂಡದ ಸಹ ಆಟಗಾರರಿಂದ ನಾನು ಭಾವನಾತ್ಮಕ ಸಂದೇಶವನ್ನು ಪಡೆದುಕೊಂಡಿದ್ದೇನೆ," ಎಂದರು.

"ಈ ಮೈಲಿಗಲ್ಲು ನಿರ್ಮಿಸಲು ಸಹಕಾರ ನೀಡಿದ ಬಿಸಿಸಿಐ ಮತ್ತು ಐಸಿಸಿಗೆ ಧನ್ಯವಾದಗಳು, ನಾವು ಹಲವು ಪಂದ್ಯಗಳನ್ನು ಆಡಲು ಸಮರ್ಥರಾಗಿದ್ದೇವೆ," ಎಂದು ಟಾಸ್ ನಂತರ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದರು.
ಇನ್ನು ಮಹಿಳಾ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ ಎರಡನೇ ಅತಿ ಹೆಚ್ಚು (143) ಟಿ20 ಪಂದ್ಯಗಳನ್ನು ಆಡಿದ್ದು, ಭಾರತದ ಉಪನಾಯಕಿ ಸ್ಮೃತಿ ಮಂಧಾನ 115 ಪಂದ್ಯಗಳನ್ನು ಆಡುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ತಮ್ಮ ಕೊನೆಯ ಗುಂಪಿನ ಪಂದ್ಯದಲ್ಲಿ ಸೋಮವಾರ ಐರ್ಲೆಂಡ್ ಮಹಿಳಾ ತಂಡದ ವಿರುದ್ಧ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅನಾರೋಗ್ಯಕ್ಕೆ ಒಳಗಾಗಿರುವ ರಾಧಾ ಯಾದವ್ ಬದಲಿಗೆ ದೇವಿಕಾ ವೈದ್ಯ ಅವಕಾಶ ಪಡೆದುಕೊಂಡರು.
ಭಾರತ vs ಐರ್ಲೆಂಡ್ ಮಹಿಳಾ ತಂಡಗಳ ಆಡುವ 11ರ ಬಳಗ
ಭಾರತ ತಂಡ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ದೇವಿಕಾ ವೈದ್ಯ, ಪೂಜಾ ವಸ್ತ್ರಾಕರ್, ರೇಣುಕಾ ಸಿಂಗ್ ಠಾಕೂರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ.
ಐರ್ಲೆಂಡ್ ತಂಡ: ಆಮಿ ಹಂಟರ್, ಗೇಬಿ ಲೆವಿಸ್, ಓರ್ಲಾ ಪ್ರೆಂಡರ್‌ಗಾಸ್ಟ್, ಐಮಿಯರ್ ರಿಚರ್ಡ್‌ಸನ್, ಲೂಯಿಸ್ ಲಿಟಲ್, ಲಾರಾ ಡೆಲಾನಿ(ನಾಯಕಿ), ಅರ್ಲೀನ್ ಕೆಲ್ಲಿ, ಮೇರಿ ವಾಲ್ಡ್ರಾನ್(ವಿಕೆಟ್ ಕೀಪರ್), ಲೇಹ್ ಪಾಲ್, ಕಾರಾ ಮುರ್ರೆ, ಜಾರ್ಜಿನಾ ಡೆಂಪ್ಸೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications