Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2024ರ ಟಿ20 ವಿಶ್ವಕಪ್‌ಗೆ ಕ್ವಾಲಿಫೈ ಆಗಿರುವ ತಂಡಗಳು: ನೆದರ್ಲ್ಯಾಂಡ್ಸ್‌ ಕೂಡ ಸೇರ್ಪಡೆ

T20 world cup 2024

ಐಸಿಸಿ ಟಿ20 ವಿಶ್ವಕಪ್‌ 2022 ನಾಕೌಟ್‌ ಹಂತಕ್ಕೆ ಬಂದು ತಲುಪಿದೆ. ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಇಂಗ್ಲೆಂಡ್ ತಂಡಗಳು ಸೆಮಿಫೈನಲ್‌ ಕಾದಾಟಕ್ಕೆ ರೆಡಿಯಾಗಿವೆ. ದಕ್ಷಿಣ ಆಫ್ರಿಕಾ ವಿರುದ್ಧ ಆಶ್ಚರ್ಯಕರ ರೀತಿಯಲ್ಲಿ ಗೆದ್ದ ನೆದರ್ಲ್ಯಾಂಡ್ಸ್‌ ತಂಡ ಕೂಡ ಮುಂದಿನ ಟಿ20 ವಿಶ್ವಕಪ್‌ನ ಸೂಪರ್ 12ಗೆ ಅರ್ಹತೆ ಪಡೆದುಕೊಂಡಿದೆ.

ಸೂಪರ್‌ 12ನ ಗ್ರೂಪ್‌ 2ನಲ್ಲಿ ಟಾಪ್‌ 4ನಲ್ಲಿ ನೆದರ್ಲ್ಯಾಂಡ್ಸ್‌ ಸ್ಥಾನ ಪಡೆದ ಪರಿಣಾಮ, 2024ರಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಯುಎಸ್‌ಎ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಸೂಪರ್‌ 12ಗೆ ನೇರವಾಗಿ ಅರ್ಹತೆ ಪಡೆದಿದೆ.

ನಿಯಮಗಳ ಪ್ರಕಾರ ಗ್ರೂಪ್ 1 ಮತ್ತು ಗ್ರೂಪ್‌ 2ನಲ್ಲಿ ಅಗ್ರ ನಾಲ್ಕು ತಂಡಗಳು ಮುಂದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯುತ್ತವೆ. ಜೊತೆಗೆ ಅತಿ ಹೆಚ್ಚು ರ್ಯಾಂಕಿಂಗ್ ಹೊಂದಿರುವಂತೆ ಇತರೆ 2 ತಂಡಗಳು ಕೂಡ ಸೂಪರ್‌ 12 ಪ್ರವೇಶಿಸಿವೆ.

ಐಸಿಸಿ ಟಿ20 ವಿಶ್ವಕಪ್ 9ನೇ ಆವೃತ್ತಿಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಆತಿಥ್ಯ ವಹಿಸಿವೆ. ಹೀಗಾಗಿ ಈ ಎರಡು ತಂಡಗಳು ನೇರವಾಗಿ ಸೂಪರ್ 12 ಪ್ರವೇಶಿಸಿವೆ. ಗ್ರೂಪ್‌ ಅಗ್ರಸ್ಥಾನವನ್ನ ಹೊರತುಪಡಿಸಿ ಹೆಚ್ಚಿನ ರ್ಯಾಂಕಿಂಗ್ ಹೊಂದಿರುವ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಕೂಡ ಮುಂದಿನ ವಿಶ್ವಕಪ್‌ನಲ್ಲಿ ಭಾಗವಹಿಸಲಿವೆ.

ಐಸಿಸಿ ಟಿ20 ವಿಶ್ವಕಪ್‌ 2024ರ ಟೂರ್ನಮೆಂಟ್‌ಗೆ ಅರ್ಹತೆ ಗಿಟ್ಟಿಸಿರುವ 12 ತಂಡಗಳ ಹೆಸರು ಈ ಕೆಳಗಿದೆ

ಯುಎಸ್‌ಎ
ವೆಸ್ಟ್ ಇಂಡೀಸ್
ಭಾರತ
ಪಾಕಿಸ್ತಾನ
ದಕ್ಷಿಣ ಆಫ್ರಿಕಾ
ಬಾಂಗ್ಲಾದೇಶ
ಶ್ರೀಲಂಕಾ
ಅಫ್ಘಾನಿಸ್ತಾನ
ನ್ಯೂಜಿಲೆಂಡ್
ಇಂಗ್ಲೆಂಡ್
ಆಸ್ಟ್ರೇಲಿಯಾ
ನೆದರ್ಲ್ಯಾಂಡ್ಸ್‌

Story first published: Monday, November 7, 2022, 12:38 [IST]
Other articles published on Nov 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+