T20 World Cup 2024: ಉಗಾಂಡಾ ವಿರುದ್ಧ ಭಾರೀ ಅಂತರದ ಗೆಲುವು ಸಾಧಿಸಿದ ಅಫ್ಘಾನಿಸ್ತಾನ
ಮಂಗಳವಾರ, ಜೂನ್ 4ರಂದು ಗಯಾನದ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನ 5ನೇ ಗುಂಪು ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಉಗಾಂಡಾ ವಿರುದ್ಧ 125 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಝದ್ರಾನ್ ಅವರ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು.

184 ರನ್‌ಗಳ ಗುರಿ ಪಡೆದ ಉಗಾಂಡಾ ತಂಡ 16 ಓವರ್‌ಗಳಲ್ಲಿ ಕೇವಲ 58 ರನ್‌ಗಳಿಗೆ ಆಲೌಟ್ ಆಗಿದ್ದು, ತಮ್ಮ ಚೊಚ್ಚಲ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿತು.
ಇದಕ್ಕೂ ಮುನ್ನ ಅಫ್ಘಾನಿಸ್ತಾನ ತಂಡದ ಪರ ಆರಂಭಕರಾದ ರಹಮಾನುಲ್ಲಾ ಗುರ್ಬಾಜ್ 45 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಮೇತ 76 ರನ್ ಗಳಿಸಿದರೆ, ಇಬ್ರಾಹಿಂ ಝದ್ರಾನ್ 46 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 70 ರನ್ ಬಾರಿಸಿದರು. ಉಳಿದಂತೆ ಮೊಹಮ್ಮದ್ ನಬಿ 14 ರನ್ ಗಳಿಸಿದರು.
ಅಫ್ಘಾನಿಸ್ತಾನ vs ಉಗಾಂಡಾ ಆಡುವ 11ರ ಬಳಗ
ಉಗಾಂಡಾ: ಸೈಮನ್ ಸ್ಸೆಸಾಜಿ (ವಿಕೆಟ್ ಕೀಪರ್), ರೋಜರ್ ಮುಕಾಸಾ, ರೋನಕ್ ಪಟೇಲ್, ರಿಯಾಝತ್ ಅಲಿ ಶಾ, ದಿನೇಶ್ ನಕ್ರಾಣಿ, ರಾಬಿನ್ಸನ್ ಒಬುಯಾ, ಅಲ್ಪೇಶ್ ರಾಮ್ಜಾನಿ, ಬ್ರಿಯಾನ್ ಮಸಾಬ (ನಾಯಕ), ಬಿಲಾಲ್ ಹಸನ್, ಕಾಸ್ಮಾಸ್ ಕ್ಯೆವುಟಾ, ಹೆನ್ರಿ ಸೆನ್ಯೊಂಡೋ.
ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜಿಬುಲ್ಲಾ ಜದ್ರಾನ್, ಕರೀಂ ಜನತ್, ರಶೀದ್ ಖಾನ್ (ನಾಯಕ), ಮುಜೀಬ್ ಉರ್ ರೆಹಮಾನ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications