T20 WC 2024: ಬಾಂಗ್ಲಾದ ಚಕ್ರವೂಹ್ಯ ಭೇದಿಸಿ ಗೆದ್ದ ಅಫ್ಘಾನಿಸ್ತಾನ; ಪಂದ್ಯಾವಳಿಯಿಂದ ಹೊರಬಿದ್ದ ಆಸೀಸ್!
ಜೂನ್ 25 ಮಂಗಳವಾರ, 2024ರ ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಇತಿಹಾಸವನ್ನು ಸೃಷ್ಟಿಸಿದೆ. ಸೂಪರ್-8 ರ ರೋಚಕ ಹೋರಾಟದಲ್ಲಿ ಅಫ್ಘಾನಿಸ್ತಾನ ತಂಡವು ಬಾಂಗ್ಲಾದೇಶವನ್ನು ಸೋಲಿಸಿದೆ.
ಬಾಂಗ್ಲಾದೇಶ ಸೋಲು ಕಂಡಿರುವುದರಿಂದ ಆಸ್ಟ್ರೇಲಿಯಾದ ಸೆಮಿಸ್ ಕನಸು ಭಗ್ನವಾಗಿದೆ. ಅಫ್ಘಾನಿಸ್ತಾನವು ಗುಂಪು-1ರಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದ ಎರಡನೇ ತಂಡವಾಗಿದೆ.

ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವು ಕೊನೆಯವರೆಗೂ ರಣರೋಚಕತೆಯಿಂದ ಕೂಡಿತ್ತು. ಆದರೆ ಅಂತಿಮವಾಗಿ ಅಫ್ಘಾನಿಸ್ತಾನ ತಂಡವು 8 ರನ್‌ಗಳಿಂದ ಭರ್ಜರಿ ಜಯ ದಾಖಲಿಸಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ನಾಯಕ ರಶೀದ್ ಖಾನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ತಂಡದ ಬ್ಯಾಟಿಂಗ್ ವಿಭಾಗ ದುರ್ಬಲವಾಗಿ ಕಂಡುಬಂದಿತು.
ಆರಂಭಿಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ 55 ಎಸೆತಗಳಲ್ಲಿ 1 ಸಿಕ್ಸರ್ ಹಾಗು 3 ಬೌಂಡರಿ ಮೂಲಕ 43 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆದರು. ಕೊನೆಯಲ್ಲಿ ರಶೀದ್ ಖಾನ್ 3 ಸಿಕ್ಸರ್ ನೆರವಿನಿಂದ 19 ರನ್ ಗಳಿಸಿದರು.
ಪರಿಣಾಮ ಅಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 116 ರನ್‌ಗಳ ಸಾಧಾರಣ ಗುರಿಯನ್ನು ಬಾಂಗ್ಲಾದೇಶಕ್ಕೆ ನೀಡಿತು. ಸೆಮಿಫೈನಲ್‌ಗೆ ತಲುಪಲು 12.1 ಓವರ್‌ಗಳಲ್ಲಿ ಈ ಗುರಿಯನ್ನು ಸಾಧಿಸಬೇಕಾಗಿರುವುದರಿಂದ ಬಾಂಗ್ಲಾ ಬ್ಯಾಟರ್‌ಗಳು ವೇಗವಾಗಿ ಆಡಲು ಪ್ರಾರಂಭಿಸಿದರು.
ವೇಗವಾಗಿ ಆಟವಾಡಿದ ಬಾಂಗ್ಲಾದೇಶ 3 ಓವರ್‌ಗಳಲ್ಲಿ 31 ರನ್ ಗಳಿಸಿತು. ಆದರೆ, ಅಷ್ಟರಲ್ಲಿ ಅಫ್ಘಾನಿಸ್ತಾನ ವೇಗದ ಬೌಲರ್ ನವೀನ್ ಉಲ್ ಹಕ್ ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಪಡೆದು ಅಫ್ಘಾನಿಸ್ತಾನ ಪಾಳಯಕ್ಕೆ ಜೀವ ತುಂಬಿದ್ದರು.
ಇದಾದ ನಂತರ ಅಫ್ಘಾನಿಸ್ತಾನ ಬೌಲಿಂಗ್ ದಾಳಿ ಮುಂದೆ ಬಾಂಗ್ಲಾದೇಶ ತಂಡದ ಯಾವುದೇ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಬಾಂಗ್ಲಾದೇಶದ 4 ಬ್ಯಾಟರ್‌ಗಳು ಖಾತೆ ತೆರೆಯದೆ ಶೂನ್ಯಕ್ಕೆ ಔಟಾದರು.
ಈ ವೇಳೆ ಮಳೆ ಬಂದ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಅಫ್ಘಾನಿಸ್ತಾನ 2 ರನ್‌ಗಳಿಂದ ಮುಂದಿತ್ತು.
ಇತ್ತ ಬಾಂಗ್ಲಾದೇಶ ತಂಡದ ವಿಕೆಟ್‌ಗಳು ಪತನಗೊಳ್ಳುತ್ತಿದ್ದರೂ, ಆರಂಭದಿಂದ ಕ್ರೀಸ್‌ನಲ್ಲಿ ಕಚ್ಚಿ ನಿಂತು ಅಫ್ಘಾನ್ ಬೌಲರ್‌ಗಳನ್ನು ಎದುರಿಸಿ ಲಿಟನ್ ದಾಸ್ ಅರ್ಧಶತಕ ಗಳಿಸಿದರು. ಜೊತೆಗೆ ಕೊನೆವರೆಗೂ ಬಾಂಗ್ಲಾದೇಶ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರು.
ಲಿಟನ್ ದಾಸ್ ಎದುರಿಸಿದ 49 ಎಸೆತಗಳಲ್ಲಿ 5 ಬೌಂಡರಿ ಹಾಗು 1 ಸಿಕ್ಸರ್ ನೆರವಿನಿಂದ ಅಜೇಯ 54 ರನ್ ಗಳಿಸಿದರು. ಆದರೆ ಇನ್ನೊಂದೆಡೆ ಲಿಟನ್ ದಾಸ್ ಅವರಿಗೆ ಯಾವುದೇ ಬ್ಯಾಟರ್ ಸಾಥ್ ನೀಡಲಿಲ್ಲ. ಹೀಗಾಗಿ ಬಾಂಗ್ಲಾದೇಶ 17.5 ಓವರ್‌ಗಳಲ್ಲ 105 ರನ್‌ಗೆ ಆಲೌಟ್ ಆಯಿತು.
ಅಫ್ಘಾನಿಸ್ತಾನ ಪರ ರಶೀದ್ ಖಾನ್ ಹಾಗು ನವೀನ್ ಉಲ್ ಹಕ್ ತಲಾ 4 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರೆ, ಫಜಲ್ಹಕ್ ಫಾರೂಕಿ ಮತ್ತು ಗುಲ್ಬದಿನ್ ನೈಬ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications