IND vs PAK: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ರೋಹಿತ್ ಶರ್ಮಾಗೆ ಮತ್ತೊಂದು ಗಾಯ
ಗುರುವಾರ, ಜೂನ್ 6ರಂದು ಡಲ್ಲಾಸ್‌ನಲ್ಲಿ ಯುಎಸ್‌ಎ ವಿರುದ್ಧ ಪಾಕಿಸ್ತಾನ ತಂಡದ ಆಘಾತಕಾರಿ ಸೋಲಿನ ಬಳಿಕ, ಅವರ ಟಿ20 ವಿಶ್ವಕಪ್ ಭರವಸೆಯನ್ನು ಸದ್ಯಕ್ಕೆ ಭೀತಿಯಲ್ಲಿರಿಸಿದೆ.
ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ಭಾನುವಾರ, ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ವಿರುದ್ಧದ ಮುಂದಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಮತ್ತೆ ಮೈದಾನಕ್ಕಿಳಿಯಲಿದೆ ಮತ್ತು ಬಲವಾಗಿ ಪುಟಿದೇಳಲು ಎದುರು ನೋಡುತ್ತದೆ.

ಮತ್ತೊಂದೆಡೆ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿದ ನಂತರ, ತಮ್ಮ ಎರಡನೇ ಪಂದ್ಯದಲ್ಲಿ ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸುವಾಗ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯುವ ಭರವಸೆಯಲ್ಲಿದೆ.
ಇದೇ ವೇಳೆ, ಐರ್ಲೆಂಡ್ ವಿರುದ್ಧದ ಪಂದ್ಯದ ವೇಳೆ ತೋಳಿಗೆ ಗಾಯ ಮಾಡಿಕೊಂಡಿದ್ದ ಭಾರತ ತಂಡದ ನಾಯಕ ರೋಹಿತ್ ಅವರು ಪಾಕಿಸ್ತಾನದ ವಿರುದ್ಧ ಬ್ಲಾಕ್-ಬಸ್ಟರ್ ಪಂದ್ಯದಲ್ಲಿ ಆಡುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ಬುಧವಾರದಂದು, ವೇಗಿ ಜೋಶ್ವಾ ಲಿಟಲ್ ಎಸೆತದಲ್ಲಿ ರೋಹಿತ್ ಶರ್ಮಾ ತೋಳಿನ ಮೇಲ್ಭಾಗದಲ್ಲಿ ಪೆಟ್ಟು ಬಿದ್ದ ಬಳಿಕ ಅವರ ಆಟವನ್ನು ಸ್ಥಗಿತಗೊಳಿಸಿ ನಿವೃತ್ತಿ ಹೊಂದಬೇಕಾಯಿತು. ಆ ವೇಳೆಗೆ 37 ಎಸೆತಗಳಲ್ಲಿ ಅಜೇಯ 52 ರನ್ ಗಳಿಸಿದರು. ಪಂದ್ಯದ ನಂತರ ತಮ್ಮ ಗಾಯದ ಬಗ್ಗೆ ಮಾತನಾಡಿದರು, "ಇದು ನೋಯುತ್ತಿರುವ ತೋಳಾಗಿದೆ' ಎಂದರು.
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕಾಗಿ ಶುಕ್ರವಾರದಂದು ನ್ಯೂಯಾರ್ಕ್‌ನಲ್ಲಿ ಭಾರತ ತಂಡ ಅಭ್ಯಾಸ ನಡೆಸುತ್ತಿತ್ತು. ಈ ವೇಳೆ ರೋಹಿತ್ ಶರ್ಮಾ ಹೆಬ್ಬರಳಿಗೆ ಪೆಟ್ಟು ಬಿದ್ದಿದ್ದರಿಂದ ಮತ್ತೊಂದು ಗಾಯದ ಭೀತಿಯನ್ನು ಅನುಭವಿಸಿದರು. ಅಭ್ಯಾಸ ಅವಧಿಯಲ್ಲಿ ಚರ್ಚೆಯ ವೇಳೆ ತಮ್ಮ ಗಾಯದ ಬಗ್ಗೆ ಬಹಿರಂಗಪಡಿಸಿದರು.

ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಶ್ರೀಲಂಕಾದ ಥ್ರೋಡೌನ್ ಸ್ಪೆಷಲಿಸ್ಟ್ ನುವಾನ್ ವಿರುದ್ಧ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಚೆಂಡು ವಿಚಿತ್ರವಾಗಿ ಪುಟಿದೆದ್ದ ನಂತರ ಅವರ ಕೈಗೆ ಬಡಿಯಿತು.
ತಕ್ಷಣವೇ ರೋಹಿತ್‌ರನ್ನು ಚಿಕಿತ್ಸೆಗೆ ಹಾಜರುಪಡಿಸಲಾಯಿತು. ಆದರೆ, ಸ್ವಲ್ಪ ಸಮಯದ ನಂತರ ಮೈದಾನ ತೊರೆಯುವ ಕೆಲವೇ ನಿಮಿಷಗಳ ಮೊದಲು ಅಭ್ಯಾಸ ನೆಟ್‌ನ ಇನ್ನೊಂದು ತುದಿಯಿಂದ ಬ್ಯಾಟಿಂಗ್ ಅಭ್ಯಾಸವನ್ನು ಪುನರಾರಂಭಿಸಿದರು.
ರೋಹಿತ್ ಶರ್ಮಾ ಗಾಯದ ಬಗ್ಗೆ ಬಿಸಿಸಿಐನಿಂದ ಇನ್ನೂ ಅಧಿಕೃತ ದೃಢೀಕರಣವಿಲ್ಲ. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡರೆ, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿರುವ ಕಾರಣ, ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಾರೆ. ಇದೇ ವೇಳೆ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆರಂಭಿಕ ಸ್ಥಾನದಲ್ಲಿ ಆಡುವ ಸಾಧ್ಯತೆಯಿದೆ.
ಟಿ20 ವಿಶ್ವಕಪ್‌ನ ಎ ಗುಂಪಿನಿಂದ ಸೂಪರ್ 8ರ ಅರ್ಹತೆಯನ್ನು ನಿರ್ಧರಿಸುವಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವು ನಿರ್ಣಾಯಕವಾಗಿದೆ. ಕೆನಡಾ ಮತ್ತು ಪಾಕಿಸ್ತಾನದ ವಿರುದ್ಧ ಗೆದ್ದು ಮುಂದಿನ ಸುತ್ತಿಗೆ ಮುನ್ನಡೆಯಲು ಯುಎಸ್ಎ ಫೇವರಿಟ್ ಆಗಿ ಕಾಣುತ್ತಿದೆ.
ಇದಲ್ಲದೆ, 2009ರ ಚಾಂಪಿಯನ್ ಪಾಕಿಸ್ತಾನ ತಂಡವು ಭಾರತ ವಿರುದ್ಧ ಸೋತರೆ ಸೂಪರ್ 8ರ ಅರ್ಹತೆ ಪಡೆಯಲು ಭಾರೀ ಕಷ್ಟಪಡಬೇಕಾಗುತ್ತದೆ. ಇದೇ ವೇಳೆ ಕೆನಡಾ ತಂಡವು ತನ್ನ ಎರಡನೇ ಗುಂಪಿನ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ ಎಂಬುದು ಗಮನಾರ್ಹ ಸಂಗತಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications