T20 WC 2024: ಭಾರತ ವಿರುದ್ಧ ಸೋತಿದ್ದಕ್ಕೆ ಪಾಕ್ ತಂಡದ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್; ಇನ್ಮುಂದೆ ಅಭಿಮಾನಿಯಲ್ಲ!
ಭಾನುವಾರ, ಜೂನ್ 9ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನ ಎ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧ ರೋಚಕ 6 ರನ್‌ಗಳಿಂದ ಸೋತಿದ್ದರಿಂದ ಭಾವನೆಗಳು ಉದ್ರಿಕ್ತಗೊಂಡಿದ್ದವು.
34,000 ಪ್ರೇಕ್ಷಕರ ಸಾಮರ್ಥ್ಯದ ಕಿಕ್ಕಿರಿದ ಕ್ರೀಡಾಂಗಣದ ಎದುರು ಪಾಕಿಸ್ತಾನ ತಂಡವು ಭಾರತ ವಿರುದ್ಧ ಟಿ20 ವಿಶ್ವಕಪ್‌ನ ಮತ್ತೊಂದು ಮುಖಾಮುಖಿಯಲ್ಲಿ ಸೋತಿದ್ದಕ್ಕೆ ನಿಕಟ ಪೈಪೋಟಿಯ ಪಂದ್ಯಕ್ಕೆ ಸಾಕ್ಷಿಯಾಯಿತು.

ಭಾರತ ವಿರುದ್ಧ ತಮ್ಮ ತಂಡವು ಅಸಮಾಧಾನಗೊಳಿಸುವ ಪ್ರದರ್ಶನಗಳ ಸರಮಾಲೆಯನ್ನೇ ಹಾಕುತ್ತಿದ್ದರೂ, ಯಾವಾಗಲೂ ಬೆಂಬಲಕ್ಕೆ ಬರುವ ಪಾಕಿಸ್ತಾನಿ ಅಭಿಮಾನಿಗಳಿಗೆ ಇದು ಮತ್ತೊಂದು ಹೃದಯ ವಿದ್ರಾವಕ ಸೋಲೆನಿಸಿತು.
ನ್ಯೂಯಾರ್ಕ್ ಸ್ಟೇಡಿಯಂನಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ಲಾಹೋರ್ ಹಾಗೂ ರಾವಲ್ಪಿಂಡಿ ಸ್ಟೇಡಿಯಂಗಳಲ್ಲಿ ಫ್ಯಾನ್ ಪಾರ್ಕ್‌ಗಳನ್ನು ನಿರ್ಮಿಸಲಾಗಿತ್ತು. ಪಂದ್ಯದ ಕೊನೆಯಲ್ಲಿ ಅಲ್ಲಿಗೆ ಬಂದ ಪಾಕಿಸ್ತಾನ ತಂಡದ ಅಭಿಮಾನಿಗಳಲ್ಲಿ ನಿರಾಶೆಯ ಭಾವನೆ ಇತ್ತು.
ಅಲ್ಲದೆ, ನ್ಯೂಯಾರ್ಕ್ ಸ್ಟ್ಯಾಂಡ್‌ನಲ್ಲಿ ರಾಷ್ಟ್ರಧ್ವಜದ ಜೊತೆಗೆ ಪಾಕಿಸ್ತಾನಿ ಆಟಗಾರರ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳು ಹಾರಾಡುತ್ತಿದ್ದಂತೆ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ್ದರು.

ಕಡಿಮೆ ಮೊತ್ತದ ಗುರಿ ಹೊಂದಿದ್ದರೂ, ಕೇವಲ 6 ರನ್‌ಗಳಿಂದ ಪಾಕಿಸ್ತಾನ ಸೋತ ತಕ್ಷಣ, ಹಸಿರು ಜೆರ್ಸಿ ತೊಟ್ಟಿದ್ದ ಅಭಿಮಾನಿಗಳಲ್ಲಿ ಬೇಸರದ ಭಾವ ಕಂಡುಬಂದರೆ, ಭಾರತ ತಂಡದ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು.
ಇದೇ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ರಾಷ್ಟ್ರೀಯ ತಂಡದ ಬಗ್ಗೆ ತಮ್ಮ ಕೋಪವನ್ನು ವ್ಯಕ್ತಪಡಿಸಿದಂತೆಯೇ, ವಿಭಿನ್ನ ಸ್ಥಳಗಳಲ್ಲಿಯೂ ಅದೇ ಕಥೆಯಾಗಿದೆ.
ಸಾಕಷ್ಟು ಎಸೆತಗಳು ಉಳಿದಿಲ್ಲದ ಕಾರಣ, ತಂಡಕ್ಕೆ ಪಂದ್ಯವನ್ನು ಗೆಲ್ಲಿಸಲು ಸಹಾಯ ಮಾಡಲು ಸಾಧ್ಯವಾಗದೆ ಕಣ್ಣೀರು ಹಾಕುತ್ತಾ ಮೈದಾನದಿಂದ ಹೊರನಡೆದ ನಸೀಮ್ ಶಾ ಬಗ್ಗೆ ಅನೇಕ ಪಾಕಿಸ್ತಾನ ಅಭಿಮಾನಿಗಳು ಸಹಾನುಭೂತಿ ವ್ಯಕ್ತಪಡಿಸಿದರು.
ಮತ್ತೊಂದೆಡೆ, ಇತರ ಪಾಕಿಸ್ತಾನಿ ಅಭಿಮಾನಿಗಳು ಬಾಬರ್ ಅಜಂ ನಾಯಕತ್ವದ ತಂಡ ಗೆಲುವಿನ ಸ್ಥಾನದಲ್ಲಿತ್ತು. ನಂತರ ಹೇಗೆ ಸೋಲಿನ ಕಡೆ ಮುಖ ಮಾಡಿತು ಎಂದು ತಮ್ಮ ಆಘಾತ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದರು.
ಅಲ್ಲದೆ, ಭಾರತ ವಿರುದ್ಧ ಐಸಿಸಿ ಪಂದ್ಯಾವಳಿಗಳಲ್ಲಿ ಬರೀ ಸೋಲಿನ ಸರಣಿಯನ್ನು ಮುಂದುವರೆಸಿರುವ ಪಾಕಿಸ್ತಾನ ಮತ್ತೆ ಅದನ್ನು ವಿಸ್ತರಿಸಿದೆ. ಟಿ20 ವಿಶ್ವಕಪ್‌ನ ಒಟ್ಟಾರೆ 8 ಮುಖಾಮುಖಿಗಳಲ್ಲಿ 7 ಬಾರಿ ಮುಖಭಂಗ ಅನುಭವಿಸಿದೆ.
ಇನ್ನು 2024ರ ಟಿ20 ವಿಶ್ವಕಪ್‌ನಲ್ಲಿಯೂ ಸೋಲನುಭವಿಸಿದ ಬಳಿಕ ಪಾಕಿಸ್ತಾನದ ಅಭಿಮಾನಿಗಳು ಬಾಬರ್ ಅಜಂ ನಾಯಕತ್ವದ ತಂಡದ ವಿರುದ್ಧ ರೊಚ್ಚಿಗೆದ್ದಿದ್ದು, ಇನ್ನುಂದೆ ನಾವು ನಿಮ್ಮ ಅಭಿಮಾನಿಗಳಲ್ಲ ಎಂದು ಕಿಡಿಕಾರುತ್ತಿದ್ದಾರೆ. ಬೆಂಬಲಿಸಿದಾಗಲೆಲ್ಲಾ ನಮ್ಮನ್ನು ನಿರಾಸೆಗೊಳಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಕಿಸ್ತಾನ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಮಂಗಳವಾರ, ಜೂನ್ 11ರಂದು ನ್ಯೂಯಾರ್ಕ್‌ನ ಅದೇ ಸ್ಥಳದಲ್ಲಿ ಕೆನಡಾ ತಂಡವನ್ನು ಎದುರಿಸಲಿದೆ. ಇದು ನಿರ್ಣಾಯಕ ಪಂದ್ಯವಾಗಿರಲಿದ್ದು, ತಮ್ಮ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯುವ ಭರವಸೆಯನ್ನು ಜೀವಂತವಾಗಿಡಲು ಆಶಿಸುತ್ತಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications