Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

India vs Pakistan : ಬದ್ದವೈರಿ ಪಾಕಿಸ್ತಾನ ವಿರುದ್ಧ ಹಾರ್ದಿಕ್‌ ಪಾಂಡ್ಯ ವಿಶೇಷ ಸಾಧನೆ!

ಜೂನ್‌ 10 ಸೋಮವಾರ, ಐಸಿಸಿ ಟಿ20 ವಿಶ್ವಕಪ್‌ನ ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಮ್‌ ಇಂಡಿಯಾ ಗೆಲುವಿನ ವಿಜಯೋತ್ಸವ ಆಚರಿಸಿದೆ. ಅಮೆರಿಕಾದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಹೈವೋಲ್ಟೇಜ್‌ ಪಂದ್ಯ ನಡೆಯಿತು.

ಕಡಿಮೆ ಸ್ಕೋರ್ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲುವ ಸನಿಹವಿದ್ದರೂ ಭಾರತ ಛಲ ಬಿಡದೆ ಕೊನೆವರಗೂ ಹೋರಾಟ ನಡೆಸಿ ಗೆದ್ದು ಬೀಗಿತ್ತು. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಏಳನೇ ಬಾರಿಗೆ ಸೋಲು ಕಂಡಿದೆ.

T20 World Cup 2024 Hardik Pandya new achievement against Pakistan

ಭಾರತ ಕೂಡ ಟಿ20 ವಿಶ್ವಕಪ್‌ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಬಾರಿ ಗೆದ್ದ ವಿಶ್ವ ದಾಖಲೆ ಸೃಷ್ಟಿಸಿದೆ. ಇದರೊಂದಿಗೆ ಪಾಕಿಸ್ತಾನ ವಿರುದ್ಧ ಟೀಮ್‌ ಇಂಡಿಯಾ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ವಿಶೇಷ ಸಾಧನೆ ಮಾಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ಪಂದ್ಯಗಳಲ್ಲಿ ಅತಿಹೆಚ್ಚು ವಿಕೆಟ್‌ಗಳನ್ನು ಪಡೆದ ಹೆಗ್ಗಳಿಕೆಗೆ ಹಾರ್ದಿಕ್‌ ಪಾಂಡ್ಯ ಪಾತ್ರಾರಾಗಿದ್ದಾರೆ. ಈವರಗೆ ಹಾರ್ದಿಕ್‌ ಪಾಂಡ್ಯ ಪಾಕಿಸ್ತಾನದ ವಿರುದ್ಧ 13 ವಿಕೆಟ್‌ಗಳ ಕಬಳಿಸಿ ಆಗ್ರಸ್ಥಾನಲ್ಲಿದ್ದಾರೆ.

ಸ್ವಿಂಗ್‌ ಕಿಂಗ್‌ ಖ್ಯಾತಿಯ ಟೀಮ್‌ ಇಂಡಿಯಾ ಮತ್ತೋರ್ವ ಬೌಲರ್‌ ಭುವನೇಶ್ವರ್‌ ಕುಮಾರ್‌ 11 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಟಿದ್ದಾರೆ. ಮೂರನೇ ಸ್ಥಾನದಲ್ಲಿ ಪಾಕಿಸ್ತಾನದ ವೇಗದ ಬೌಲರ್‌ ಉಮರ್‌ ಗುಲ್‌ 11 ವಿಕೆಟ್‌ಗಳನ್ನು ಭಾರತದ ವಿರುದ್ಧ ಉರುಳಿಸಿದ್ದಾರೆ.

ಹ್ಯಾರಿಸ್‌ ರೌಫ್‌ ಮತ್ತು ನಸೀಮ್‌ ಶಾ ತಲಾ 7 ವಿಕೆಟ್‌ ಪಡೆಯುವ ಮೂಲಕ ಕ್ರಮವಾಗಿ ನಾಲ್ಕು ಹಾಗು ಐದನೇ ಸ್ಥಾನದಲ್ಲಿದ್ದಾರೆ.

ಐಪಿಎಲ್‌ 2024ರ ಟೂರ್ನಿಯಲ್ಲಿ ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ನಾಯಕಮನಾಗಿದ್ದರು. ಆದರೆ ಈ ಬಾರಿ ಹಾರ್ದಿಕ್‌ ಪಾಂಡ್ಯ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಹೀಗಿದ್ದರೂ ಬಿಸಿಸಿಐ ಹಾರ್ದಿಕ್‌ ಪಾಂಡ್ಯ ಅವರನ್ನು ಟಿ20 ವಿಶ್ವಕಪ್‌ ಭಾರತ ತಂಡಕ್ಕೆ ಆಯ್ಕೆ ಮಾಡಿತ್ತು.

ಹೀಗಾಗಿ ಹಾರ್ದಿಕ್‌ ಪಾಂಡ್ಯ ಸಾಕಷ್ಟು ಟೀಕೆಗೊಳಗಾಗಿದ್ದರು. ಆದರೆ ಇದೀಗ ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್‌ ಪಾಂಡ್ಯ ತಮ್ಮ ಅದ್ಭುತ ಪ್ರದರ್ಶನದಿಂದ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

Story first published: Monday, June 10, 2024, 11:33 [IST]
Other articles published on Jun 10, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+