T20 World Cup 2024:ಬುಮ್ರಾ, ಪಾಂಡ್ಯ ಬೌಲಿಂಗ್ ದಾಳಿಗೆ ನೆಲಕಚ್ಚಿದ ಪಾಕಿಸ್ತಾನ; ಗೆಲುವಿನ ನಗೆ ಬೀರಿದ ಭಾರತ
ಜೂನ್ 10 ಸೋಮವಾರ, ಅಮೆರಿಕಾದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ 19ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ಬಗ್ಗು ಬಡಿದೆ.
ಸಂಘಟಿತ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶನ ತೋರಿದ ಟೀಮ್ ಇಂಡಿಯಾ ಬೌಲರ್‌ಗಳು ಪಾಕಿಸ್ತಾನವನ್ನು ಕಟ್ಟಿ ಹಾಕಿದರು. ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದರು.
ಪಾಕಿಸ್ತಾನ ವಿರುದ್ಧ ಭಾರತ 6 ರನ್‌ಗಳಿಂದ ಗೆದ್ದು ಬೀಗಿದೆ. ಟೀಮ್ ಇಂಡಿಯಾ ನೀಡಿದ 120 ರನ್‌ಗಳ ಗುರಿಯನ್ನು ಪಾಕಿಸ್ತಾನ ತಲುಪಲು ಸಾಧ್ಯವಾಗಲಿಲ್ಲ. ಬಾಬರ್ ಅಜಮ್ ಪಡೆ 7 ವಿಕೆಟ್ ನಷ್ಟಕ್ಕೆ 113 ರನ್‌ಗಳನ್ನು ಪೇರಿಸಲಷ್ಟೇ ಶಕ್ತವಾಯಿತು.

ಸಾಧಾರಣ ಗುರಿ ಹಿಂಬಾಲಿಸಿದ ಪಾಕಿಸ್ತಾನ ತಂಡದ ಪರ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಬೇಗ ಪಂದ್ಯ ಮುಗಿಸುವ ಲೆಕ್ಕಚಾರದಲ್ಲಿರದ್ದರು. ಆದರೆ ಟೀಮ್ ಇಂಡಿಯಾ ಬೌಲರ್‌ಗಳ ಆಕ್ರಮಣಕಾರಿ ಬೌಲಿಂಗ್‌ಗೆ ಸಿಲುಕಿದ ಬಾಬರ್ ಅಜಮ್ 13 ರನ್ ಗಳಿಸಿ ಔಟ್ ಆದರು.
ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ಉಸ್ಮಾನ್ ಖಾನ್ 13 ರನ್‌ಗೆ ವಿಕೆಟ್ ಕಳೆದುಕೊಂಡರೆ, ಫಖರ್ ಜಮಾನ್ 13 ರನ್ ಹೊಡೆದು ಔಟ್ ಆದರು. ಈ ಮಧ್ಯೆ ಉತ್ತಮವಾಗಿ ಆಡುತ್ತಿದ್ದ ಮೊಹಮ್ಮದ್ ರಿಜ್ವಾನ್ ಕೂಡ 31 ರನ್‌ಗಳಿಗೆ ತಮ್ಮ ಆಟವನ್ನು ನಿಲ್ಲಿಸಿ ಕ್ರೀಸ್‌ನಿಂದ ಹೊರ ನಡೆದರು.
ನಂತರ ಬಂದ ಪಾಕಿಸ್ತಾನ ಬ್ಯಾಟರ್‌ಗಳು ಗೆಲುವು ತಮ್ಮ ಬಳಿ ಇದ್ದರೂ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಟೀಮ್ ಇಂಡಿಯಾ ಬೌಲರ್‌ಗಳು ನೀಡಿದ ಭರ್ಜರಿ ಬೌಲಿಂಗ್ ಪ್ರದರ್ಶನ.
ಶಾದಾಬ್ ಖಾನ್ (4), ಇಫ್ತಿಕರ್ ಅಹ್ಮದ್ (5) ಮತ್ತು ಇಮಾದ್ ವಾಸಿಮ್ (15) ಪಾಕಿಸ್ತಾನ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು. ಕೊನೆಯ ಓವರ್‌ನಲ್ಲಿ ಕೆಲವು ದೊಡ್ಡ ಹೊಡೆತಗಳನ್ನು ಹೊಡೆಯಲು ನಸೀಮ್ ಶಾ (10*) ಮುಂದಾದರೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.
ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಉರುಳಿಸಿ ಮಿಂಚಿದರೆ, ಹಾರ್ದಿಕ್ ಪಾಂಡ್ಯ 2, ಅಕ್ಷರ್ ಪಟೇಲ್ ಹಾಗು ಅರ್ಷದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications