For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2024: ವೆಸ್ಟ್ ಇಂಡೀಸ್‌ಗೆ ಆಘಾತ, ಗಾಯಗೊಂಡು ಹೊರಬಿದ್ದ ಬ್ರಾಂಡನ್ ಕಿಂಗ್; ಬದಲಿ ಆಯ್ಕೆ

ಸದ್ಯ ನಡೆಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್‌ಗಾಗಿ ಆತಿಥೇಯ ವೆಸ್ಟ್ ಇಂಡೀಸ್ ತಂಡದಲ್ಲಿ ಆರಂಭಿಕ ಬ್ಯಾಟರ್ ಬ್ರಾಂಡನ್ ಕಿಂಗ್ ಬದಲಿಗೆ ಆಲ್‌ರೌಂಡರ್ ಕೈಲ್ ಮೇಯರ್ಸ್ ಅವರನ್ನು ಆಯ್ಕೆ ಮಾಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅನುಮೋದನೆ ನೀಡಿದೆ.

ಇತ್ತೀಚಿನ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್‌ನ ಮೊದಲ ಸೂಪರ್ 8ರ ಪಂದ್ಯದ ಸಂದರ್ಭದಲ್ಲಿ ಬ್ರಾಂಡನ್ ಕಿಂಗ್ ಬ್ಯಾಟಿಂಗ್ ಮಾಡುವಾಗ ಸೈಡ್ ಸ್ಟ್ರೈನ್ ಅನುಭವಿಸಿದರು. ಕೇವಲ 13 ಎಸೆತಗಳಲ್ಲಿ 23 ರನ್ ಗಳಿಸಿ ಉತ್ತಮ ಲಯದಲ್ಲಿ ಆಡುತ್ತಿರುವಾಗ ಗಾಯವು ಅವರನ್ನು ನಿವೃತ್ತಿಯಾಗುವಂತೆ ಮಾಡಿತು.

T20 World Cup 2024 Kyle Mayers Replaced by Injured Brandon King In West Indies Squad

ಶನಿವಾರ, ಜೂನ್ 22ರಂದು ಯುಎಸ್ಎ ವಿರುದ್ಧ ವೆಸ್ಟ್ ಇಂಡೀಸ್‌ನ ನಂತರದ ಪಂದ್ಯವನ್ನು ಬ್ರಾಂಡನ್ ಕಿಂಗ್ ತಪ್ಪಿಸಿಕೊಂಡರು. ಏಕೆಂದರೆ ಅವರ ಬದಲಿಗೆ ಶಾಯ್ ಹೋಪ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದರು. ಬ್ರಾಂಡನ್ ಕಿಂಗ್ ಅವರ 2024ರ ಟಿ20 ವಿಶ್ವಕಪ್ ಅಭಿಯಾನವು ಐದು ಪಂದ್ಯಗಳಿಂದ 86 ರನ್‌ಗಳ ಮೊತ್ತದೊಂದಿಗೆ ಕೊನೆಗೊಂಡಿತು.

ಇನ್ನು ಸೋಮವಾರ, ಜೂನ್ 24ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಸೂಪರ್ 8ರ ಹಂತದಲ್ಲಿ ವೆಸ್ಟ್ ಇಂಡೀಸ್‌ನ ಕೊನೆಯ ಪಂದ್ಯಕ್ಕೂ ಮುನ್ನ ಕೇಲ್ ಮೇಯರ್ಸ್ ಕೆರಿಬಿಯನ್ ತಂಡವನ್ನು ಸೇರುವ ನಿರೀಕ್ಷೆಯಿದೆ.

ನವೆಂಬರ್ 2020ರಲ್ಲಿ ಪ್ರಾರಂಭವಾದ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಕೇಲ್ ಮೇಯರ್ಸ್ 18 ಟೆಸ್ಟ್‌ ಪಂದ್ಯಗಳು, 28 ಏಕದಿನ ಪಂದ್ಯಗಳು ಮತ್ತು 37 ಟಿ20 ಪಂದ್ಯಗಳನ್ನು ಆಡಿದ ಅನುಭವವನ್ನು ಹೊಂದಿದ್ದಾರೆ.

T20 World Cup 2024 Kyle Mayers Replaced by Injured Brandon King In West Indies Squad

ಟಿ20 ಕ್ರಿಕೆಟ್ ಸ್ವರೂಪದಲ್ಲಿ ಕೇಲ್ ಮೇಯರ್ಸ್ 21.38ರ ಸರಾಸರಿಯಲ್ಲಿ ಮತ್ತು 140.62ರ ಸ್ಟ್ರೈಕ್ ರೇಟ್‌ನಲ್ಲಿ 727 ರನ್ ಗಳಿಸಿದ್ದಾರೆ. ಇದರಲ್ಲಿ 65 ಬೌಂಡರಿಗಳು ಮತ್ತು 49 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನು ಮೂರು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ ಮತ್ತು ಗರಿಷ್ಠ 73 ರನ್ ಗಳಿಸಿದ್ದಾರೆ.

ಕೇಲ್ ಮೇಯರ್ಸ್ ಕೂಡ ಸೂಕ್ತ ಮಧ್ಯಮ ವೇಗಿಯಾಗಿದ್ದು, ಅವರು ಟಿ20 ಕ್ರಿಕೆಟ್‌ನಲ್ಲಿ ಸಾಂದರ್ಭಿಕವಾಗಿ ಬೌಲಿಂಗ್ ಮಾಡಿದ್ದಾರೆ, ಆದರೆ ವಿಕೆಟ್ ಪಡೆದಿಲ್ಲ. ಆದಾಗ್ಯೂ, ಅವರು ಟೆಸ್ಟ್‌ ಪಂದ್ಯಗಳಲ್ಲಿ 34 ಮತ್ತು ಏಕದಿನ ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ.

ವೆಸ್ಟ್ ಇಂಡೀಸ್ ನಾಯಕ ರೋವ್ಮನ್ ಪೊವೆಲ್ ಅವರಿಗೆ ಅಗತ್ಯವಿದ್ದರೆ ಕೇಲ್ ಮೇಯರ್ಸ್ ಒಂದೆರಡು ಓವರ್‌ಗಳನ್ನು ಸುಲಭವಾಗಿ ಬೌಲ್ ಮಾಡಬಹುದು. ವೆಸ್ಟ್ ಇಂಡೀಸ್ ಮೊದಲ ಸುತ್ತಿನಲ್ಲಿ ಪಪುವಾ ನ್ಯೂ ಗಿನಿಯಾ, ಉಗಾಂಡಾ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಸತತ ನಾಲ್ಕು ಗೆಲುವುಗಳ ಹಿನ್ನೆಲೆಯಲ್ಲಿ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆದಿತ್ತು.

ವೆಸ್ಟ್ ಇಂಡೀಸ್ ತಮ್ಮ ಮೊದಲ ಸೂಪರ್ 8ರ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನ್ನು ಅನುಭವಿಸಿತು. ಆದರೆ ಯುಎಸ್ಎ ವಿರುದ್ಧ ಒಂಬತ್ತು ವಿಕೆಟ್‌ಗಳ ಪ್ರಬಲ ಗೆಲುವಿನೊಂದಿಗೆ ಪುಟಿದೇದ್ದಿತು.

ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಮ್ಮ ಅಂತಿಮ ಸೂಪರ್ 8ರ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಲು ಎದುರು ನೋಡುತ್ತದೆ ಮತ್ತು ಸೆಮಿಫೈನಲ್ ಹಂತ ತಲುಪಲು ಪ್ರಯತ್ನಿಸಲಿದೆ.

Story first published: Saturday, June 22, 2024, 13:24 [IST]
Other articles published on Jun 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+