T20 World Cup 2024: ಐಸಿಸಿಯಿಂದ ಛೀಮಾರಿ ಹಾಕಿಸಿಕೊಂಡ ಆಸೀಸ್ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್!
ಜೂನ್ 11 ಮಂಗಳವಾರ, ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ (ಶನಿವಾರ) ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಗುಂಪು ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ 36 ರನ್‌ಗಳಿಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಸೋಲಿಸಿತು.
ಆಸ್ಟ್ರೇಲಿಯಾದ ವಿಕೆಟ್‌ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್ ಅವರು 10 ಎಸೆತಗಳಲ್ಲಿ 3 ಬೌಂಡರಿ ಹೊಡೆಯುವ ಮೂಲಕ ಅಜೇಯ 17 ರನ್‌ಗಳನ್ನು ತಂಡಕ್ಕೆ ಕೊಡುಗೆಯಾಗಿ ನೀಡಿದ್ದರು. ಹೀಗಾಗಿ ಆಸ್ಟ್ರೇಲಿಯಾ 200 ರನ್‌ಗಳ ಗಡಿ ದಾಟಲು ಸಹಾಯವಾಗಿತ್ತು.

ಆದರೆ, ಟಿ20 ವಿಶ್ವಕಪ್‌ನಲ್ಲಿ ಇದುವರೆಗೂ ಯಾವುದೇ ತಂಡವು ಮಾಡದ ತಪ್ಪನ್ನು ವೇಡ್ ಮಾಡಿದ್ದಾರೆ.
ಆಸ್ಟ್ರೇಲಿಯಾದ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ವೇಡ್ ಮತ್ತು ಅಂಪೈರ್ ನಿತಿನ್ ಮೆನನ್ ನಡುವೆ ತೀವ್ರ ವಾಗ್ವಾದ ನಡೆದಿದೆ.
ಇಂಗ್ಲೆಂಡ್ ತಂಡದ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಬೌಲ್ ಮಾಡಿದ 18ನೇ ಓವರ್‌ನ ಮೂರನೇ ಎಸೆತದಲ್ಲಿ, ರಶೀದ್ ಚೆಂಡನ್ನು ಎಸೆಯುವ ಮುನ್ನವೇ ವೇಡ್ ಸ್ಟಂಪ್‌ನಿಂದ ದೂರ ಸರಿದ್ದರು. ಆದರೆ ಚೆಂಡನ್ನು ಸಂಪೂರ್ಣವಾಗಿ ಬಿಡುವ ಬದಲು ವೇಡ್ ಆಡಿದ್ದರು.
ನಿತಿನ್ ಮೆನನ್ ಇದಕ್ಕೆ ಡೆಡ್ ಬಾಲ್ ನೀಡುತ್ತಾರೆ ಎಂದು ವೇಡ್ ನಿರೀಕ್ಷಿಸಿದ್ದರು. ಆದರೆ ಮೆನೆನ್ ಡೆಡ್‌ಬಾಲ್ ನೀಡಲಿಲ್ಲ. ಇದು ವೇಡ್ ಅವರನ್ನು ಕೆರಳಿಸಿತ್ತು. ಬಳಿಕ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ವೇಡ್ ಚೆಂಡನ್ನು ಆಡಿದ್ದಾರೆ ಎಂದು ಅಂಪೈರ್‌ಗೆ ತಿಳಿಸಿದರು.
ಇದನ್ನು ಪರಿಶೀಲನೆ ಮಾಡಿದ ಅಂಪೈರ್ ಚೆಂಡು ಕಾನೂನು ಬದ್ದವಾಗಿದೆ ಎಂದು ನಿರ್ಧಾರ ತಿಳಿಸಿದ್ದರು. ವೇಡ್ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಮೆನೆನ್ ಜೊತೆಗೆ ವಾಗ್ವಾದ ನಡೆಸಿದ್ದರು.
ಆನ್-ಫೀಲ್ಡ್ ಅಂಪೈರ್‌ಗಳಾದ ನಿತಿನ್ ಮೆನನ್, ಜೋಯಲ್ ವಿಲ್ಸನ್, ಮೂರನೇ ಅಂಪೈರ್ ಆಸಿಫ್ ಯಾಕೂಬ್ ಮತ್ತು ನಾಲ್ಕನೇ ಅಂಪೈರ್ ಜಯರಾಮನ್ ಮದಗೋಪಾಲ್ ಅವರು ವೇಡ್ ವಿರುದ್ಧ ಐಸಿಸಿ ನೀತಿ ಸಂಹಿತೆಯ ಲೆವೆಲ್ 1 ಉಲ್ಲಂಘಿಸಿದ್ದಾರೆ ಎಂದು ಆರೋಪ ಮಾಡಿದ್ದರು.
ಆಸೀಸ್ ವಿಕೆಟ್ ಕೀಪರ್‌ಗೆ ಐಸಿಸಿ ಛೀಮಾರಿ
ಇದಾದ ಬಳಿಕ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.8 ಅನ್ನು ವೇಡ್ ಉಲ್ಲಂಘಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಸೋಮವಾರ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಐಸಿಸಿ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಿದ್ದಕ್ಕೆ ವೇಡ್ ಅವರಿಗೆ ಛೀಮಾರಿ ಹಾಕಿದೆ.
ಐಸಿಸಿ ಮ್ಯಾಚ್ ರೆಫರಿಗಳ ಎಲೈಟ್ ಪ್ಯಾನೆಲ್‌ನ ಆಂಡಿ ಪೈಕ್ರಾಫ್ಟ್ ಪ್ರಸ್ತಾಪಿಸಿದ ಶಿಕ್ಷೆಯನ್ನು ನಿಯಮ ಉಲ್ಲಂಘನೆ ಮಾಡಿದಕ್ಕಾಗಿ ವೇಡ್ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅಧಿಕೃತ ವಿಚಾರಣೆಯ ಅಗತ್ಯವಿಲ್ಲ ಎಂದು ತಿಳಿಸಿದೆ.
ಕ್ರಿಕೆಟ್ ನಿಯಮಗಳ 20.4.2.5 ಪ್ರಕಾರ ಸ್ಟ್ರೈಕ್‌ನಲ್ಲಿರುವ ಬ್ಯಾಟರ್ ಚೆಂಡನ್ನು ಎದುರಿಸಲು ಸಿದ್ದವಾಗಿಲ್ಲದಿದ್ದು, ಚೆಂಡು ಬಂದರೆ, ಅದನ್ನು ಆಡಲು ಯಾವುದೇ ಪ್ರಯತ್ನ ಮಾಡದಿದ್ದರೆ ಅಂಪೈರ್ ಅದನ್ನು ಡೆಡ್ ಬಾಲ್ ಎಂದು ಸೂಚಿಸಬಹುದು. ವೇಡ್ ಚೆಂಡನ್ನು ಬಿಟ್ಟಿದ್ದರೆ, ಅದಕ್ಕೆ ಡೆಡ್ ಬಾಲ್ ನೀಡಬಹುದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications