T20 World Cup 2024: ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ, ಬಾಬರ್ ಅಜಮ್ ದಾಖಲೆ ಸರಿಗಟ್ಟಿದ ಮೊಹಮ್ಮದ್ ರಿಜ್ವಾನ್!
ಜೂನ್ 12 ಬುಧವಾರ, ಟಿ20 ವಿಶ್ವಕಪ್ 2024ರ 22ನೇ ಪಂದ್ಯ ಪಾಕಿಸ್ತಾನ ಮತ್ತು ಕೆನಡಾ ನಡುವೆ ನಡೆಯಿತು. ಈ ಪಂದ್ಯವನ್ನು ಗೆಲ್ಲುವ ಮೂಲಕ ಪಾಕಿಸ್ತಾನ ಸೂಪರ್-8 ತಲುಪುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಪಾಕಿಸ್ತಾನದ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರನ್ನು ತಂಡದ ಬೆನ್ನೆಲುಬು ಎಂದು ಕರೆದರೆ ತಪ್ಪಾಗುವುದಿಲ್ಲ. ನಾಯಕ ಬಾಬರ್ ಅಜಮ್ ನಂತರ, ತಂಡದ ಜವಾಬ್ದಾರಿಯನ್ನು ಹೊತ್ತಿರುವ ಎರಡನೇ ಹೆಸರು ರಿಜ್ವಾನ್.

ಟಿ20 ವಿಶ್ವಕಪ್ 2024ರ ಕೆನಡಾ ವಿರುದ್ಧದ ಪಂದ್ಯದಲ್ಲಿ, ರಿಜ್ವಾನ್ ಮತ್ತೊಮ್ಮೆ ಅದೇ ಪಾತ್ರವನ್ನು ನಿರ್ವಹಿಸುವ ಮೂಲಕ ಆರಂಭಿಕರಾಗಿ ವಿಶ್ವದಾಖಲೆ ಮಾಡಿದರು. ಈ ಪಂದ್ಯದಲ್ಲಿ ರಿಜ್ವಾನ್ ಅದ್ಭುತ ಅರ್ಧಶತಕ ಬಾರಿಸಿದರು. ಈಗಾಗಲೇ ರಿಜ್ವಾನ್ ಹೆಸರಿನಲ್ಲಿ ಅನೇಕ ದಾಖಲೆಗಳು ಇವೆ.
ಮೊಹಮ್ಮದ್ ರಿಜ್ವಾನ್ ಕೆನಡಾ ವಿರುದ್ಧ 53 ಎಸೆತಗಳಲ್ಲಿ 53 ರನ್ ಗಳಿಸಿದರು. ಈ ಅರ್ಧಶತಕದ ಬಳಿಕ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಟೀಮ್ ಇಂಡಿಯಾ ನಾಯಕ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ದಾಖಲೆಯನ್ನು ಸರಿಗಟ್ಟಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಅತಿ ಹೆಚ್ಚು ಅರ್ಧಶತಕಗಳನ್ನು ರೋಹಿತ್ ಶರ್ಮಾ ಹೊಡೆದಿದ್ದರು. ಈ ದಾಖಲೆ ಇದೀಗಾ ರಿಜ್ವಾನ್ ಸರಿಗಟ್ಟುವ ಮೂಲಕ ಮುಂದಿನ ಪಂದ್ಯದಲ್ಲಿ ನೂತನ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಆದರೆ ಇನ್ನಿಂಗ್ಸ್‌ಗೆ ಹೋಲಿಸಿದರೆ ರೋಹಿತ್ ಶರ್ಮಾ ಅವರನ್ನು ರಿಜ್ವಾನ್ ಹಿಂದಿಕ್ಕಿದ್ದಾರೆ. ಹಿಟ್‌ಮ್ಯಾನ್ ಇದುವರೆಗೆ 118 ಇನ್ನಿಂಗ್ಸ್‌ಗಳಲ್ಲಿ 30 ಅರ್ಧಶತಕಗಳನ್ನು ಗಳಿಸಿದ್ದಾರೆ. ಆದರೆ ರಿಜ್ವಾನ್ ಕೇವಲ 71 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಮತ್ತೊಂದೆಡೆ ರಿಜ್ವಾನ್ ಅವರು ಬಾಬರ್ ಅಜಮ್ ದಾಖಲೆಯನ್ನು ಮುರಿದಿದ್ದಾರೆ. ಬಾಬರ್ ಇದುವರೆಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 84 ಇನ್ನಿಂಗ್ಸ್‌ಗಳನ್ನು ಆಡಿದ್ದು, ಕೇವಲ 28 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಪರ ಅತಿಹೆಚ್ಚು ಅರ್ಧಶತಕ ಹೊಡೆದವರು
ಮೊಹಮ್ಮದ್ ರಿಜ್ವಾನ್ ಅವರು ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪರ ಅತಿ ಹೆಚ್ಚು ಅರ್ಧ ಶತಕ ಗಳಿಸಿದ ದಾಖಲೆಯನ್ನೂ ಮಾಡಿದ್ದಾರೆ. ಬಾಬರ್ ಜೊತೆಗೆ ರಿಜ್ವಾನ್ ಕೂಡ 5 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇವರಿಬ್ಬರನ್ನು ಹೊರತುಪಡಿಸಿ, ಶೋಯೆಬ್ ಮಲಿಕ್, ಕಮ್ರಾನ್ ಅಕ್ಮಲ್ ಮತ್ತು ಉಮ್ರಾನ್ ಅಕ್ಮಲ್ ಟಿ20 ವಿಶ್ವಕಪ್‌ನಲ್ಲಿ ತಲಾ 3 ಅರ್ಧಶತಕಗಳನ್ನು ಗಳಿಸಿದ್ದರು. ರಿಜ್ವಾನ್ ಅವರ ಜವಾಬ್ದಾರಿಯುತ ಇನ್ನಿಂಗ್ಸ್ ಆಧಾರದ ಮೇಲೆ, ಪಾಕಿಸ್ತಾನ ತಂಡವು 2024ರ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪುನರಾಗಮನ ಮಾಡಿದೆ.
ಟಾಸ್ ಸೋತ ಕೆನಡಾ ಮೊದಲು ಬ್ಯಾಟಿಂಗ್ ಮಾಡಿತು. ಆರನ್ ಜಾನ್ಸನ್ ಅರ್ಧಶತಕ ನೆರವಿನಿಂದ 20 ಓವರ್‌ಗಳಲ್ಲಿ 106 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 17.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications