T20 World Cup 2024: ಕ್ರಿಸ್ ಗೇಲ್ ರೆಕಾರ್ಡ್ ಬ್ರೇಕ್ ಮಾಡಿದ ನಿಕೋಲಸ್ ಪೂರನ್; ಈಡೇರಲಿಲ್ಲ ಆ ಒಂದು ಕನಸು!
ಜೂನ್ 22 ಶನಿವಾರ, ಟಿ20 ವಿಶ್ವಕಪ್ 2024ರಲ್ಲಿ ವೆಸ್ಟ್ ಇಂಡೀಸ್ ತಂಡವು ಸಾಕಷ್ಟು ಮಾರಕವಾಗಿ ಕಾಣಿಸುತ್ತಿದೆ. ಸ್ಟಾರ್ ಸ್ಪೋಟಕ ಬ್ಯಾಟರ್ ನಿಕೋಲಸ್ ಪೂರನ್ ತಮ್ಮ ಅದ್ಭುತ ಫಾರ್ಮ್‌ನಿಂದ ತಂಡವನ್ನು ಇನ್ನಷ್ಟು ಭಯಾನಕವಾಗಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಭಯಭೀತರಾಗಿರುವು ಪೂರನ್ ಉತ್ತಮ ರನ್ ಗಳಿಸುತ್ತಿದ್ದಾರೆ. ಹಾಗೆಯೇ ಯುಎಸ್‌ಎ ವಿರುದ್ಧ 27 ರನ್‌ಗಳ ಇನ್ನಿಂಗ್ಸ್ ಅನ್ನು ಪೂರನ್ ಆಡಿದರು. ಆದರೆ ಈ ಇನ್ನಿಂಗ್ಸ್ ಮೂಲಕ ಪೂರನ್, ತಮ್ಮದೆ ದೇಶದ ಮಾಜಿ ದಿಗ್ಗಜ ಬ್ಯಾಟರ್ ಕ್ರಿಸ್ ಗೇಲ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.

ಟಿ20 ವಿಶ್ವಕಪ್‌ನ ಒಂದು ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ನಿಕೋಲಸ್ ಪೂರನ್ ಸೃಷ್ಟಿಸಿದ್ದಾರೆ. ಈ ದಾಖಲೆಯನ್ನು 2012 ರಲ್ಲಿ ಕ್ರಿಸ್ ಗೇಲ್ ಮಾಡಿದ್ದರು.
ನಿಕೋಲಸ್ ಪೂರನ್ ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 1 ಅರ್ಧಶತಕ ಬಾರಿಸಿರುವ ಪೂರನ್ 227 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಪೂರನ್ ಬರೋಬ್ಬರಿ 17 ಸಿಕ್ಸರ್‌ಗಳನ್ನು ಹೊಡೆದಿದ್ದು, ಇದು ವಿಶ್ವದಾಖಲೆಯಾಗಿದೆ.
ಈ ಹಿಂದೆ ಟಿ20 ವಿಶ್ವಕಪ್‌ನ ಒಂದು ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿತ್ತು. 2012ರಲ್ಲಿ ಗೇಲ್ 16 ಸಿಕ್ಸರ್ ಸಿಡಿಸಿದ್ದರು. ಅದೇ ವರ್ಷದಲ್ಲಿ, ಮರ್ಲೆನ್ ಸ್ಯಾಮ್ಯುಯೆಲ್ಸ್ ಮತ್ತು ಶೇನ್ ವ್ಯಾಟ್ಸನ್ ತಲಾ 15 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ದಾಖಲೆಯ ಪಟ್ಟಿಯಲ್ಲಿ ಕ್ರಮವಾಗ ಅಗ್ರ-3 ರಲ್ಲಿ ಸ್ಥಾನ ಪಡೆದಿದ್ದರು.
ಪೂರನ್ ಅವರ ಕನಸು ನನಸಾಗಲಿಲ್ಲ!
ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಪೂರನ್ ಅಮೋಘ ಫಾರ್ಮ್‌ನಲ್ಲಿದ್ದರೂ, ಅವರ ಆ ಒಂದು ಕನಸು ನನಸಾಗಲಿಲ್ಲ. ಸೂಪರ್-8ರ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 53 ಎಸೆತಗಳಲ್ಲಿ 98 ರನ್ ಗಳಿಸಿದ್ದರು. ಈ ವೇಳೆ ಪೂರನ್ ಅವರ ಬ್ಯಾಟ್‌ನಿಂದ 8 ಗಗನಚುಂಬಿ ಸಿಕ್ಸರ್‌ಗಳು ಮತ್ತು 6 ಬೌಂಡರಿಗಳು ಬಂದವು.
ಆದರೆ ದುರದೃಷ್ಟವಶಾತ್ ಪೂರನ್ ರನ್ ಔಟ್ ಆದರು. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸುವ ಪೂರನ್ ಕನಸು ನನಸಾಗಲಿಲ್ಲ. ವೆಸ್ಟ್ ಇಂಡೀಸ್ ಕೊನೆಯ ಪಂದ್ಯದಲ್ಲಿ ಗೆದ್ದರೆ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications