T20 World Cup 2024: ಭಾರತದ ಗೆಲುವಿಗೆ ಪಾಕಿಸ್ತಾನ ಪ್ರಾರ್ಥನೆ; ಯುಎಸ್‌ಎ ಗೆದ್ದರೆ ಬಾಬರ್ ಪಡೆಗೆ ಸಂಕಷ್ಟ!
ಜೂನ್ 12 ಬುಧವಾರ, ಕಳೆದ ಆವೃತ್ತಿ ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಇಂಗ್ಲೆಂಡ್ ವಿರುದ್ಧ ಫೈನಲ್‌ನಲ್ಲಿ ಸೋತ ಪಾಕಿಸ್ತಾನ ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಅದೇ ವಿಶ್ವಾಸದಲ್ಲಿ ಕಣಕ್ಕೀಳಿದ ಪಾಕಿಸ್ತಾನ ತಂಡದಿಂದ ಈ ಬಾರಿಯ 2024ರ ಟಿ20 ವಿಶ್ವಕಪ್ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತಿತ್ತು. ಬಳಿಕ ಭಾರತ ಎದುರು ಕಡಿಮೆ ಸ್ಕೋರಿಂಗ್ ಪಂದ್ಯದಲ್ಲಿ ಮುಗ್ಗರಿಸಿತ್ತು.

ಆದರೆ ಕೆನಡಾ ಎದುರು (ಜೂನ್ 11) ಪಾಕಿಸ್ತಾನ ಗೆದ್ದು ಸೂಪರ್-8 ತಲುಪುವ ಭರವಸೆ ಇನ್ನೂ ಜೀವಂತವಾಗಿರಿಸಿಕೊಂಡಿದೆ. ಆದರೆ, ಅಪಾಯಕಾರಿ ಬೌಲಿಂಗ್ ಬಲದಿಂದ ವಿಶ್ವದ ಅಗ್ರ ತಂಡಗಳನ್ನು ಭಯಭೀತಗೊಳಿಸಿರುವ ಪಾಕಿಸ್ತಾನ ಟೂರ್ನಿಯಲ್ಲಿ ಉಳಿಯಲಿ ಇತರ ತಂಡಗಳ ಸೋಲು-ಗೆಲುವಿನ ಮೇಲೆ ಅವಲಂಬಿತವಾಗಿದೆ.
ಇಂದು ಭಾರತ ಮತ್ತು ಯುಎಸ್‌ಎ ನಡುವೆ ಪಂದ್ಯ ನಡೆಯಲಿದೆ. ಎ ಗುಂಪಿನಲ್ಲಿ ಉಭಯ ತಂಡಗಳು ಆಡಿದ ಎರಡೂ ಪಂದ್ಯಗಳನ್ನು ಗೆದ್ದಿವೆ. ಇಂತಹ ಪರಿಸ್ಥಿತಿಯಲ್ಲಿ ಇಂದು ಭಾರತ ವಿರುದ್ಧ ಅಮೇರಿಕಾ ಗೆದ್ದರೆ ಪಾಕಿಸ್ತಾನ ಸೂಪರ್-8ನಿಂದ ಬಹುತೇಕ ಹೊರಗುಳಿಯಲಿದೆ.
ಏಕೆಂದರೆ, ಯುಎಸ್ಎ ತನ್ನ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸೂಪರ್-8 ಗೆ ಅರ್ಹತೆ ಪಡೆಯುತ್ತದೆ. ಭಾರತ ಈಗಾಗಲೇ ಎರಡ ಪಂದ್ಯಗಳನ್ನು ಗೆದ್ದಿದೆ. ಕೊನೆಯ ಪಂದ್ಯವು ದುರ್ಬಲ ಕೆನಡಾ ತಂಡ ವಿರುದ್ಧ ಆಡಲಿದ್ದು, ಸುಲಭವಾಗಿ ಸೋಲಿಸಬಹುದು.
ಭಾರತ ಗೆಲುವಿಗೆ ಪಾಕ್ ಪಾರ್ಥನೆ
ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಯುಎಸ್‌ಎ ನಡುವೆ ಗುಂಪು ಹಂತದ ಪಂದ್ಯ ಇಂದು ನಡೆಯಲಿದೆ. ಈ ಪಂದ್ಯದಲ್ಲಿ ಭಾರತದ ಗೆಲುವಿಗಾಗಿ ಪಾಕಿಸ್ತಾನ ಅಭಿಮಾನಿಗಳೊಂದೊಗೆ ಆಟಗಾರರು ಕೂಡ ಪ್ರಾರ್ಥಿಸುತ್ತಿದ್ದಾರೆ.

ಅಷ್ಟೇ ಅಲ್ಲ, ಪಾಕಿಸ್ತಾನ ಟೂರ್ನಿಯಲ್ಲಿ ಉಳಿಯಲು ಭಾರತ ಗೆದ್ದರೆ ಸಾಲದು ಯುಎಸ್ಎ ದೊಡ್ಡ ಅಂತರದಿಂದ ಸೋಲಬೇಕು. ಅಗ ಯುಎಸ್‌ಎ ರನ್ ರೇಟ್ ಕಡಿಮೆ ಆಗುತ್ತದೆ. ಕೊನೆಯ ಪಂದ್ಯವನ್ನು ಪಾಕಿಸ್ತಾನ ಉತ್ತಮ ರನ್ ರೇಟ್‌ನೊಂದಿಗೆ ಗೆಲ್ಲುವ ಮೂಲಕ ಸೂಪರ್-8 ಗೆ ಅರ್ಹತೆ ಪಡೆಯಬಹುದು.
ಆದರೂ ಇನ್ನೊಂದೆಡೆ ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು ಗೆದ್ದು, ಯುಎಸ್ಎ ತನ್ನ ಎರಡೂ ಪಂದ್ಯಗಳಲ್ಲಿ ಸೋತರೂ, ಸೂಪರ್-8 ಗೆ ಅರ್ಹತೆ ಪಡೆಯುವ ಗ್ಯಾರಂಟಿ ಇಲ್ಲ. ಏಕೆಂದರೆ, ಅಂತಿಮವಾಗಿ ಸೂಪರ್-8 ತಂಡ ರನ್ ರೇಟ್ ಆಧಾರದ ಮೇಲೆ ನಿರ್ಧಾರವಾಗಲಿದೆ.
ಯುಎಸ್‌ಎ ಗೆದ್ದರೂ ಪಾಕಿಸ್ತಾನಕ್ಕೆ ಕೊನೆ ಅವಕಾಶ
ಇಂದು ಯುಎಸ್‌ಎ ಎದುರು ಭಾರತ ಸೋತರೆ ಪಾಕಿಸ್ತಾನಕ್ಕೆ ಸೂಪರ್-8 ತಲುಪುವ ಅವಕಾಶವಿದೆ. ಅದರೆ ಇದು ಅಷ್ಟು ಸುಲಭವಲ್ಲ.
ಅದೇನೆಂದರೆ, ಭಾರತ ತನ್ನ ಮುಂದಿನ ಪಂದ್ಯದಲ್ಲಿ ಕೆನಡಾ ವಿರುದ್ಧ ದೊಡ್ಡ ಅಂತರದಿಂದ ಸೋತರೆ, ಪಾಕಿಸ್ತಾನವು ಸೂಪರ್-8 ಗೆ ಅರ್ಹತೆ ಪಡೆಯಬಹುದು. ಅದಕ್ಕಾಗಿ ಕೆನಡಾ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications