Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಭದ್ರತಾ ಲೋಪ; ದಿಗ್ವ್ರಮೆಗೊಂಡ ಅಭಿಮಾನಿಗಳು!

ಜೂನ್‌ 9 ಭಾನುವಾರ, ಟಿ20 ವಿಶ್ವಕಪ್ 2024ರ ಗುಂಪು ಹಂತದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅಮೆರಿಕಾದ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ.

ಈ ಪಂದ್ಯದ ವೇಳೆ ಭದ್ರತಾ ಲೋಪ ಎದುರಾಗಿದ್ದು, ಅಭಿಮಾನಿಗಳು ದಿಗ್ವ್ರಮೆಗೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

T20 World Cup 2024 Security lapse during India-Pakistan match

ಪಂದ್ಯ ಆರಂಭಕ್ಕೂ ಮುನ್ನ ವಿಮಾನವೊಂದು ಸ್ಟೇಡಿಯಂ ಮೇಲೆ ಹಾದು ಹೋಗಿದೆ. ಇದನ್ನು ನೋಡಿದ ಎಲ್ಲಾ ಅಭಿಮಾನಿಗಳು ಗಾಬರಿಯಾಗಿದ್ದಾರೆ. ಬಳಿಕ ಸ್ಟೇಡಿಯಂನಲ್ಲೇ ಇದ್ದ ಅಭಿಮಾನಿಗಳು ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

'ಇಮ್ರಾನ್ ಖಾನ್ ಬಿಡುಗಡೆ ಮಾಡಿ' ಎಂಬ ಬ್ಯಾನರ್ ಅನ್ನು ಆಕಾಶದಲ್ಲಿ ಪ್ರದರ್ಶಿಸುತ್ತಾ ಸ್ಟೇಡಿಯಂ ಮೇಲೆ ವಿಮಾನ ಹಾರಿ ಹೋಗಿದೆ. ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸದ್ಯ ಜೈಲಿನಲ್ಲಿದ್ದಾರೆ.

ಇಮ್ರಾನ್ ಬೆಂಬಲಿಗರು ಅವರನ್ನು ಬಿಡುಗಡೆ ಮಾಡಲು ಇಂತಹ ಸಾಹಸಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಅದುವೇ ಪಾಕಿಸ್ತಾನದ ರಾಷ್ಟ್ರಗೀತೆ ಮೊಳಗುತ್ತಿರುವಾಗಲೇ ಈ ವಿಮಾನ ಕಾಣಿಸಿಕೊಂಡಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನ್ಯೂಯರ್ಕ್‌ ಪೊಲೀಸರ ಭದ್ರತೆಯನ್ನು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

ಭಯೋತ್ಪಾದಕ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಗಾ

ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಭಯೋತ್ಪಾದಕರು ಬೆದರಿಕೆಯೊಡ್ಡಿರುವುದು ಸಖತ್‌ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮೈದಾನದ ಸುತ್ತಲಿನ ರಹಸ್ಯ ಸ್ಥಳಗಳಲ್ಲಿ ಪೊಲೀಸ್ ಸ್ನೈಪರ್‌ಗಳನ್ನು ನಿಯೋಜಿಸುವುದರ ಜೊತೆಗೆ ನ್ಯೂಯಾರ್ಕ್‌ನ ಸ್ಟೇಡಿಯಂ ಸುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ವರದಿಗಳ ಪ್ರಕಾರ, ಸ್ನೈಪರ್‌ಗಳ ಜೊತೆಗೆ, SWAT ತಂಡಗಳು ಸಹ ಭದ್ರತೆಯಲ್ಲಿ ತೊಡಗಿಕೊಂಡಿವೆ. ಮೈದಾನದೊಳಗೆ ಮಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳು ಕೂಡ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿದ್ದರೂ ಭದ್ರತಾ ಲೋಪ ಉಂಟಾಗಿದೆ.

Story first published: Sunday, June 9, 2024, 23:47 [IST]
Other articles published on Jun 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+