Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SA vs AFG semi Final: ಹರಿಣಗಳ ಅದ್ಭುತ ಬೌಲಿಂಗ್‌ ದಾಳಿ; ಅಫ್ಘಾನಿಸ್ತಾನದ ಲೆಕ್ಕಚಾರ ಉಲ್ಟಾ ಮಾಡಿದ ಜಾನ್ಸೆನ್-ಶಮ್ಸಿ

ಜೂನ್‌ 27 ಗುರುವಾರ, ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2024ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಕ್ರಮಣಕಾರಿ ಬೌಲಿಂಗ್‌ ದಾಳಿಗೆ ಅಫ್ಘಾನಿಸ್ತಾನ ತತ್ತರಿಸಿ ಹೋಗಿದೆ.

ಸೆಮಿಫೈನಲ್‌ನಂತಹ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ನಾಯಕ ರಶೀದ್ ಖಾನ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಅಂದುಕೊಂಡಂತೆ ಹರಿಣಗಳ ಪಡೆಯ ಬೌಲರ್‌ಗಳ ಎದುರು ಅಫ್ಘಾನಿಸ್ತಾನ ಬ್ಯಾಟರ್‌ಗಳು ರನ್‌ಗಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೇವಲ 11.5 ಓವರ್‌ಗಳಲ್ಲಿ 56 ರನ್‌ಗಳಿಗೆ ಅಫ್ಘಾನಿಸ್ತಾನ ಆಲೌಟ್‌ ಆಗಿದೆ.

T20 World Cup 2024 South Africa vs Afghanistan match First innings report

ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ಅತ್ಯಂತ ಕಳಪೆ ಆರಂಭ ಪಡೆದು ಕೇವಲ 20 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ರಹಮಾನುಲ್ಲಾ ಗುರ್ಬಾಜ್ (0), ಇಬ್ರಾಹಿಂ ಜದ್ರಾನ್ (2), ಗುಲ್ಬದಿನ್ ನೈಬ್ (9) ಮತ್ತು ಮೊಹಮ್ಮದ್ ನಬಿ (0) ತಂಡಕ್ಕೆ ಆಸರೆಯಾಗದೆ ಔಟಾದರು.

ಬಳಿಕ ಕ್ರೀಸ್‌ಗೆ ಬಂದ ಅಫ್ಘಾನ್‌ ಬ್ಯಾಟರ್‌ಗಳಾದ ನಂಗ್ಯಾಲ್ ಖರೂತಿ (2), ಅಜ್ಮತುಲ್ಲಾ ಉಮರ್ಜಾಯ್ (10), ಕರೀಂ ಜನತ್ (8), ನೂರ್ ಅಹ್ಮದ್ (0), ರಶೀದ್ ಖಾನ್ (8) ಮತ್ತು ನವೀನ್ ಉಲ್ ಹಕ್ (2) ದಕ್ಷಿಣ ಆಫ್ರಿಕಾ ಬೌಲಿಂಗ್‌ ದಾಲಿಯನ್ನು ಎದುರಿಸಲು ಸಾಧ್ಯವಾಗದೆ ಬೇಗನೆ ವಿಕೆಟ್‌ ಕಳೆದುಕೊಂಡು ಪೆವಿಲಿಯನ್‌ ಪರೇಡ್ ನಡೆಸಿದರು.

ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜಾನ್ಸೆನ್ ಮತ್ತು ತಬ್ರೇಜ್ ಶಮ್ಸಿ ತಲಾ 3 ವಿಕೆಟ್ ಉರುಳಿಸಿ ಮಿಂಚಿದರು. ಇದಲ್ಲದೇ ಕಗಿಸೊ ರಬಾಡ ಮತ್ತು ಎನ್ರಿಕ್ ನರ್ಟ್ಜೆ ಕೂಡ ತಲಾ 2 ವಿಕೆಟ್ ಪಡೆದು ಅಫ್ಘಾನಿಸ್ತಾನವನ್ನು ಕಡಿಮೆ ರನ್‌ಗಳಿಗೆ ಕಟ್ಟಿಹಾಕಿದರು.

ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ ಪ್ಲೇಯಿಂಗ್-11

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್‌), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ.

ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್‌), ಇಬ್ರಾಹಿಂ ಜದ್ರಾನ್, ಅಜ್ಮತುಲ್ಲಾ ಉಮರ್ಜಾಯ್, ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ, ಕರೀಂ ಜನತ್, ರಶೀದ್ ಖಾನ್ (ನಾಯಕ), ನಂಗ್ಯಾಲ್ ಖರೂತಿ, ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.

Story first published: Thursday, June 27, 2024, 7:24 [IST]
Other articles published on Jun 27, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+