For Quick Alerts
ALLOW NOTIFICATIONS  
For Daily Alerts
 

T20 World Cup 2024: ಪ್ರಪಥಮ ಬಾರಿಗೆ ವಿಶ್ವಕಪ್‌ ಫೈನಲ್‌ ತಲುಪಿದ ದಕ್ಷಿಣ ಆಫ್ರಿಕಾ; ಅಫ್ಘಾನ್‌ ಪಯಣ ಅಂತ್ಯ

ಜೂನ್‌ 27 ಗುರುವಾರ, 2024ರ ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ ತಂಡವು ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಇತಿಹಾಸ ಸೃಷ್ಟಸಿದೆ.

ಅಫ್ಘಾನಿಸ್ತಾನ ತಂಡವನ್ನು ಸೋಲಿಸಿದ ಹರಿಣಗಳ ಪಡೆ 2024ರ ಟಿ20 ವಿಶ್ವಕಪ್‌ ಫೈನಲ್‌ಗೆ ತನ್ನ ಟಿಕೆಟ್ ಕಾಯ್ದಿರಿಸಿದೆ. ದಕ್ಷಿಣ ಆಫ್ರಿಕಾ ತಂಡ ಯಾವುದೇ ಮಾದರಿಯ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿರುವುದು ಇದೇ ಮೊದಲು.

T20 World Cup 2024 South Africa win against Afghanistan

ಅಫ್ಘಾನಿಸ್ತಾನ ನೀಡಿದ 57 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಸುಲಭವಾಗಿ 9 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದು ಬೀಗಿದೆ. ಅಫ್ಘಾನಿಸ್ತಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.

ಆದರೆ ಅಫ್ಘಾನಿಸ್ತಾನ ತಂಡ ದಕ್ಷಿಣ ಆಫ್ರಿಕಾದ ಬೌಲಿಂಗ್ ದಾಳಿ ಎದುರು ನಿಲ್ಲಲಾಗದೆ ಕೇವಲ 56 ರನ್‌ಗಳಿಗೆ ಕುಸಿದಿತ್ತು.
ಅಫ್ಘಾನಿಸ್ತಾನದ ಯಾವುದೇ ಬ್ಯಾಟರ್‌ಗಳು 10ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ.

ಅಫ್ಘಾನಿಸ್ತಾನ ಪರ ಅಜ್ಮತ್ ಉಲ್ಲಾ ಉಮರ್ಜಾಯ್ (10) ಮಾತ್ರ ಎರಡಂಕಿ ರನ್‌ ಗಳಿಸಿದ ಏಕೈಕ ಬ್ಯಾಟರ್‌ ಆದರೆ, ರಹಮಾನುಲ್ಲಾ ಗುರ್ಬಾಜ್, ಮೊಹಮ್ಮದ್ ನಬಿ ಮತ್ತು ನೂರ್ ಅಹ್ಮದ್ ಖಾತೆ ತೆರೆಯದೆ ಶೂನ್ಯಕ್ಕೆ ಔಟಾದರು.

ಇದಲ್ಲದೆ ಇಬ್ರಾಹಿಂ ಜದ್ರಾನ್, ನಂಗೆಲಿ ಖರೋಟೆ, ನವೀನ್ ಉಲ್ ಹಕ್ ಮತ್ತು ಫಜಲ್ ಹಕ್ ಫಾರೂಕಿ ತಲಾ 2 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಕರೀಂ ಜನ್ನತ್ ಮತ್ತು ರಶೀದ್ ಖಾನ್ ತಲಾ 8 ರನ್ ಗಳಿಸಿದರೆ, ಗುಲ್ಬದಿನ್ ನೈಬ್ 9 ರನ್ ಗಳಿಸಿ ವಿಕೆಟ್‌ ಕಳೆದುಕೊಂಡರು. ಪರಿಣಾಮ ಅಫ್ಘಾನಿಸ್ತಾನ ಕೇವಲ 11.5 ಓವರ್‌ಗಳಲ್ಲಿ 56 ರನ್‌ಗಳಿಗೆ ಆಲೌಟ್‌ ಆಯಿತು.

ಗುರಿ ಬೆನ್ನತ್ತಲು ಬಂದ ಹರಿಣಗಳ ಪಡೆ ಯಾವುದೇ ತೊಂದರೆಯಿಲ್ಲದೆ 8.5 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಸುಲಭವಾಗಿ ಈ ಸ್ಕೋರ್ ಗಳಿಸಿತು. ಆರಂಭಿಕ ಬ್ಯಾಟರ್‌ ಕ್ವಿಂಟನ್ ಡಿ ಕಾಕ್ 8 ಎಸೆತಗಳಲ್ಲಿ 5 ರನ್ ಗಳಿಸಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟಾದರು. ಇದರ ಹೊರತಾಗಿ ರೀಸ್ ಹೆನ್ರಿಕ್ಸ್ 23 ರನ್ ಮತ್ತು ನಾಯಕ ಆಡಮ್ ಮಾರ್ಕ್ರಾಮ್ 29 ರನ್‌ಗಳನ್ನು ಹೊಡೆದು ತಮ್ಮ ತಂಡವನ್ನು ಫೈನಲ್‌ಗೆ ಕರೆದೊಯ್ದರು.

ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ ಪ್ಲೇಯಿಂಗ್-11

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್‌), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ.

ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್‌), ಇಬ್ರಾಹಿಂ ಜದ್ರಾನ್, ಅಜ್ಮತುಲ್ಲಾ ಉಮರ್ಜಾಯ್, ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ, ಕರೀಂ ಜನತ್, ರಶೀದ್ ಖಾನ್ (ನಾಯಕ), ನಂಗ್ಯಾಲ್ ಖರೂತಿ, ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ.

Story first published: Thursday, June 27, 2024, 8:30 [IST]
Other articles published on Jun 27, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+