For Quick Alerts
ALLOW NOTIFICATIONS  
For Daily Alerts
 

T20 World Cup 2024: ಐರ್ಲೆಂಡ್ ವಿರುದ್ಧ ಕಳಪೆ ಔಟಾದ ವಿರಾಟ್ ಕೊಹ್ಲಿ ಬಗ್ಗೆ ಸುನಿಲ್ ಗವಾಸ್ಕರ್ ಹೇಳಿದ್ದೇನು?

ಬುಧವಾರ, ಜೂನ್ 5ರಂದು ನ್ಯೂಯಾರ್ಕ್‌ನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ನ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡದ ಐರ್ಲೆಂಡ್ ವಿರುದ್ಧ 8 ವಿಕೆಟ್‌ಗಳ ಗೆಲುವು ಸಾಧಿಸಿದರೂ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕಳಪೆ ಆಟವಾಡಿದರು.

ವೇಗಿಗಳಿಗೆ ವೈವಿಧ್ಯಮಯ ಬೌನ್ಸ್ ನೀಡುವ ಕಠಿಣ ಪಿಚ್‌ನಲ್ಲಿ ವಿರಾಟ್ ಕೊಹ್ಲಿ 5 ಎಸೆತಗಳಲ್ಲಿ ಕೇವಲ 1 ರನ್ ಗಳಿಸಲು ಸಾಧ್ಯವಾಯಿತು. ಟಿ20 ವಿಶ್ವಕಪ್ ಪಂದ್ಯಾವಳಿಯ ಇತಿಹಾಸದಲ್ಲಿ ಅಪರೂಪದ ಕಳಪೆ ಪ್ರದರ್ಶನ ನೀಡಿದರು. ಐರ್ಲೆಂಡ್ ವಿರುದ್ಧದ ಪಂದ್ಯಕ್ಕೂ ವಿರಾಟ್ ಕೊಹ್ಲಿ ಮೊದಲು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ 81.5ರ ಸರಾಸರಿಯಲ್ಲಿ ಸ್ಕೋರ್ ಮಾಡಿದ್ದರು.

T20 World Cup 2024 Sunil Gavaskar Reaction About Virat Kohli s Poor Dismissal Against Ireland

ಆದರೆ, ವಿರಾಟ್ ಕೊಹ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ ಪರಾಕ್ರಮ ತೋರಿಸಲು ವಿಫಲವಾದ ನಂತರ, ಭಾರತದ ಲೆಜೆಂಡ್ ಬ್ಯಾಟರ್ ಸುನಿಲ್ ಗವಾಸ್ಕರ್ ಅವರು ಪಾಕಿಸ್ತಾನ ವಿರುದ್ಧ ಅಬ್ಬರಿಸಲು ಆರಂಭಿಕ ಬ್ಯಾಟರ್‌ಗೆ ಬೆಂಬಲಿಸಿದರು.

ಸುನಿಲ್ ಗವಾಸ್ಕರ್ ಅವರು ಬ್ಯಾಟ್‌ನಲ್ಲಿ ವಿರಾಟ್ ಕೊಹ್ಲಿಯ ಅಪರೂಪದ ವೈಫಲ್ಯದಿಂದ ವಿಚಲಿತರಾಗಿಲ್ಲ. ಅವರಂತಹ ಶ್ರೇಷ್ಠ ಬ್ಯಾಟರ್ ಪಾಕಿಸ್ತಾನದ ವಿರುದ್ಧ ದುಪ್ಪಟ್ಟು ರನ್ ಗಳಿಸಲು ಬಯಸುತ್ತಾರೆ. ಐರ್ಲೆಂಡ್ ವಿರುದ್ಧ ಕಳೆದುಹೋದ ಅವಕಾಶವನ್ನು ಸರಿದೂಗಿಸುತ್ತಾರೆ ಎಂದರು.

"ಸ್ಟೀವನ್ ಸ್ಮಿತ್, ವಿರಾಟ್ ಕೊಹ್ಲಿ, ಬಾಬರ್ ಅಜಂ ಮತ್ತು ಜೋ ರೂಟ್ ಅವರಂತಹ ಶ್ರೇಷ್ಠ ಆಟಗಾರರನ್ನು ನಾನು ನೋಡುವ ರೀತಿಯೇ ಬೇರೆ. ಅವರು ಒಂದು ಪಂದ್ಯದಲ್ಲಿ ವಿಫಲರಾಗಿದ್ದರೆ, ಅವರು ಮುಂದಿನ ಪಂದ್ಯದಲ್ಲಿ ಅದನ್ನು ಸರಿದೂಗಿಸಲು ಬಯಸುತ್ತಾರೆ".

T20 World Cup 2024 Sunil Gavaskar Reaction About Virat Kohli s Poor Dismissal Against Ireland

"ಅವರು ಒಂದೇ ಪಂದ್ಯದಲ್ಲಿ ಎರಡು ಪಂದ್ಯಗಳ ರನ್ ಗಳಿಸಲು ಬಯಸುತ್ತಾರೆ. ಆದ್ದರಿಂದ ವಿರಾಟ್ ಕೊಹ್ಲಿ ಐರ್ಲೆಂಡ್ ವಿರುದ್ಧ ದೊಡ್ಡ ಮೊತ್ತ ಗಳಿಸದೇ ಇರಬಹುದು. ಮುಂದಿನ ಪಂದ್ಯದಲ್ಲಿ ಹೆಚ್ಚುವರಿ ರನ್ ಗಳಿಸುತ್ತಾರೆ ಎಂದು ಐರ್ಲೆಂಡ್ ವಿರುದ್ಧ ಭಾರತ ಗೆಲುವು ಸಾಧಿಸಿದ ನಂತರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟರು.

ಐರ್ಲೆಂಡ್ ವಿರುದ್ಧದ ಗೆಲುವಿನೊಂದಿಗೆ ಭಾರತ ತಂಡವು ಇದೀಗ ಟಿ20 ಕ್ರಿಕೆಟ್‌ನಲ್ಲಿ ಏಕೈಕ ಎದುರಾಳಿಯ ವಿರುದ್ಧ ಸತತ 8 ಗೆಲುವು ದಾಖಲಿಸಿದೆ.

ನಾಯಕ ರೋಹಿತ್ ಶರ್ಮಾ ಅರ್ಧಶತಕ, ರಿಷಭ್ ಪಂತ್ ಉತ್ತಮ ಫಿನಿಶಿಂಗ್ ಮತ್ತು ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರ ಮಾರಕ ಸ್ಪೆಲ್‌ಗಳು ಹೈಲೈಟ್ ಆಗಿವೆ.

13ನೇ ಓವರ್‌ನ ಎರಡನೇ ಎಸೆತದಲ್ಲಿ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ರಿವರ್ಸ್ ಸ್ಕೂಪ್ ಮೂಲಕ ಗೆಲುವಿನ ಸಿಕ್ಸರ್ ಬಾರಿಸಿದರು.

ಈ ಗೆಲುವಿನೊಂದಿಗೆ ಭಾರತ ಟಿ20 ಪಂದ್ಯಗಳಲ್ಲಿ ಐರ್ಲೆಂಡ್ ವಿರುದ್ಧ ಸತತ ಎಂಟನೇ ಗೆಲುವು ಸಾಧಿಸಿತು. ಭಾರತ 2009ರಿಂದ 2018ರವರೆಗೆ ಬಾಂಗ್ಲಾದೇಶ ವಿರುದ್ಧ ಎಂಟು ಗೆಲುವುಗಳನ್ನು ಸಾಧಿಸಿತ್ತು.

ಆಸ್ಟ್ರೇಲಿಯಾ (2013-2017), ಶ್ರೀಲಂಕಾ (2016-2017) ಮತ್ತು ವೆಸ್ಟ್ ಇಂಡೀಸ್ (2018-2019) ಇತರ ಎದುರಾಳಿಗಳ ವಿರುದ್ಧ ಟೀಮ್ ಇಂಡಿಯಾ ಹೆಚ್ಚು ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಈ ತಂಡಗಳನ್ನು ತಲಾ ಏಳು ಬಾರಿ ಸೋಲಿಸಿದೆ.

Story first published: Thursday, June 6, 2024, 13:28 [IST]
Other articles published on Jun 6, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+