ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
ಪ್ರಸ್ತುತ ನಡೆಯುತ್ತಿರುವ 2024ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡವು ಅಮೋಘವಾದ ವಿಜಯಗಳನ್ನು ದಾಖಲಿಸುತ್ತಿದೆ. ತಂಡದಲ್ಲಿ ಆಟಗಾರರ ಒಗಟ್ಟಿನ ಬಲ ಪ್ರದರ್ಶನ ಎದುರಾಳಿ ತಂಡದ ಗೆಲುವಿಗೆ ಮುಳುವಾಗಿದೆ.
ಕಳೆದ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಕೂಡ ಅಂತಿಮ ಘಟ್ಟ ತಲುಪಿದ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಾಜಿ ಆಟಗಾರ ಸ್ಪಿನ್ ಮಾಂತ್ರಿಕ ಸುನಿಲ್ ನರೈನ್ ಹೊಸ ಮೈಲುಗಲ್ಲು ತಲುಪ್ಪಿದ್ದರು.

ಐಪಿಎಲ್‌ನಲ್ಲಿ ಶ್ರೀಲಂಕಾ ಯಾರ್ಕರ್ ಸ್ಪೆಷಲಿಸ್ಟ್ ವೇಗಿ ಲಸಿತಾ ಮಾಲಿಂಗ ದಾಖಲೆಯನ್ನು ಸುನಿಲ್ ನರೈನ್ ಮುರಿಯುವ ಮೂಲಕ ಒಂದೇ ಫ್ರಾಂಚೈಸಿಯ ಪರ ಅತಿ ಹೆಚ್ಚು ವಿಕೆಟ್ (172) ಪಡೆದ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಬೌಲಿಂಗ್‌ನಲ್ಲಿ ಮಾತ್ರವಲ್ಲದೆ, ತನ್ನ ಬ್ಯಾಟಿಂಗ್ ಮೂಲಕ ಕೂಡ ಸುನಿಲ್ ನರೈನ್ ಸಾಧನೆ ಗೈದಿರುವುದು ಮತ್ತೊಂದು ವಿಶೇಷವಾಗಿದೆ.
ಹೀಗೆ ಅದ್ಭುತ ಫಾರ್ಮ್‌ನಲ್ಲಿ ಅಬ್ಬರಿಸುತ್ತಿರುವ ಸುನಿಲ್ ನರೈನ್ ಮುಂಬರುವ 2024ರ ಟಿ-20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಪರ ಕಣಕ್ಕೀಳಿಯಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಅಲ್ಲದೆ ಹಲವು ಜನರು ಪ್ರಕಾರ ಈ ಚುಟುಕು ಕ್ರಿಕೆಟ್ ಸಮರದಲ್ಲಿ ಸುನಿಲ್ ನರೈನ್ ಆಡಿದರೆ ಮತ್ತೊಮ್ಮೆ ವೆಸ್ಟ್ ಇಂಡೀಸ್ ತಂಡ ವಿಶ್ವ ಚಾಂಪಿಯನ್ ಆಗುವುದರಲ್ಲಿ ಬೇರೆ ಮಾತಿಲ್ಲ ಎನ್ನುತ್ತಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಪ್ರತಿಕ್ರಿಯಿಸಿರುವ ಸುನಿಲ್ ನರೈನ್ ಅವರು, ಇತ್ತೀಚೆಗೆ ಐಪಿಎಲ್‌ನಲ್ಲಿ ನನ್ನ ಪ್ರದರ್ಶನಗಳು ನಾನು ಅಂತರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯಿಂದ ಹೊರಬಂದು ಮುಂಬರುವ ಟಿ-20 ವಿಶ್ವಕಪ್ ಆಡಬೇಕೆಂದು ಹಲವರು ಒತ್ತಾಯಿಸುತ್ತಿದ್ದಾರೆ. ಆದರೆ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಆ ಬಾಗಿಲು ನನ್ನ ಪಾಲಿಗೆ ಈಗ ಮುಚ್ಚಿದೆ.

ಜೂನ್‌ನಿಂದ ಆರಂಭವಾಗುತ್ತಿರುವ ಟಿ-20 ವಿಶ್ವಕಪ್ ಟೂರ್ನಿಗಾಗಿ ಕಳೆದ ಹಲವು ತಿಂಗಳಿಂದ ವೆಸ್ಟ್ ಇಂಡೀಸ್ ಹುಡುಗರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಹೀಗಾಗಿ ಅವರ ಅವಕಾಶವನ್ನು ಕಿತ್ತುಕೊಳ್ಳುವುದು ಸರಿಯಲ್ಲ. ಈ ಹುಡುಗರು ಪ್ರಶಸ್ತಿಯನ್ನು ಗೆಲ್ಲಲು ಸಮರ್ಥರಾಗಿದ್ದು, ಅವರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಬರೆದು ಕೊಂಡಿದ್ದಾರೆ.
ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಜೊತೆಗೆ ಈ ಪೋಸ್ಟ್ ನೋಡಿರುವ ನೆಟಿಗರು ಸುನಿಲ್ ನರೈನ್ ನಡೆಗೆ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೂ ಒಂದು ವರ್ಗ ಮಾತ್ರ ಸುನಿಲ್ ನರೈನ್ ಟಿ-20 ವಿಶ್ವಕಪ್ ಆಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಂತ್ರಿ ಸೃಷ್ಟಿಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications