For Quick Alerts
ALLOW NOTIFICATIONS  
For Daily Alerts
 

IND vs AFG Super 8: ಭಾರತ ತಂಡದ ಆಡುವ 11ರ ಬಳಗದಲ್ಲಿ ಬದಲಾವಣೆ; ಸುಳಿವು ನೀಡಿದ ದ್ರಾವಿಡ್

ಗುರುವಾರ, ಜೂನ್ 20ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 8ರ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ತಮ್ಮ ಮೊದಲ ಹಣಾಹಣಿಗೆ ಸಜ್ಜಾಗಿವೆ.

ಇದೀಗ ವೆಸ್ಟ್ ಇಂಡೀಸ್‌ನಲ್ಲಿ ಪರಿಸ್ಥಿತಿಗಳಲ್ಲಿ ನಡೆಯುವ ಸೂಪರ್ 8ರ ಪಂದ್ಯಗಳಿಗೂ ಮುನ್ನ ಭಾರತ ತಂಡದ ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಲಾಗುತ್ತದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಸ್ವತಃ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಉತ್ತರಿಸಿದ್ದಾರೆ.

T20 World Cup 2024 Super 8 Changes in Team India s Playing 11 Rahul Dravid Big Hints

ಸ್ಪಿನ್ ಜೋಡಿಗಳಾದ ಕುಲದೀಪ್ ಯಾದವ್ ಅಥವಾ ಯುಜ್ವೇಂದ್ರ ಚಹಾಲ್ ಅವರು ಗುಂಪು ಹಂತದ ಪಂದ್ಯಗಳಿಗೆ ಹೊರಗಿದ್ದ ಬಳಿಕ, ಸೂಪರ್ 8ರ ಹಂತದ ಪಂದ್ಯಗಳಿಗೆ ತಂಡಕ್ಕೆ ಮರಳಬಹುದು ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸುಳಿವು ನೀಡಿದ್ದಾರೆ.

ವೇಗದ ಬೌಲಿಂಗ್‌ಗೆ ಟ್ರ್ಯಾಕ್ ಹೆಚ್ಚು ಸಹಾಯ ಮಾಡುವಂತಿದ್ದ ಕಾರಣ, ಭಾರತ ತಂಡ ನ್ಯೂಯಾರ್ಕ್‌ನಲ್ಲಿ ಮೂವರು ವೇಗಿಗಳನ್ನು ಬಳಸಿಕೊಳ್ಳಲು ನಿರ್ಧರಿಸಿತು. ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರನ್ನು ಸ್ಪಿನ್ನರ್‌ಗಳಾಗಿ ಬಳಸಿಕೊಂಡರು. ಆದರೆ ಅವರ ಪಾತ್ರವು ಮೊದಲ ಹಂತದಲ್ಲಿ ಸೀಮಿತವಾಗಿತ್ತು.

ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್, ಕುಲದೀಪ್ ಅವರಂತಹ ಆಟಗಾರನನ್ನು ಹೊರಗಿಡುವುದು ಎಷ್ಟು ಕಠಿಣ ಎಂದು ಪ್ರಶ್ನಿಸಲಾಯಿತು. ಇದು ಕಠಿಣ ನಿರ್ಧಾರ ಎಂದು ಭಾರತ ತಂಡದ ಕೋಚ್ ಹೇಳಿದ್ದು, ಆದರೆ ನ್ಯೂಯಾರ್ಕ್‌ನಲ್ಲಿ ಇದು ಅಗತ್ಯವಾಗಿತ್ತು ಎಂದಿದ್ದಾರೆ.

T20 World Cup 2024 Super 8 Changes in Team India s Playing 11 Rahul Dravid Big Hints

"ಯಾವುದೇ ಆಟಗಾರನನ್ನು ಹೊರಗಿಡುವುದು ಕಷ್ಟ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಪಂದ್ಯಗಳಲ್ಲಿ ನಾವು ಬಿಟ್ಟ ನಾಲ್ವರು ಆಟಗಾರರೆಲ್ಲರೂ ಗುಣಮಟ್ಟದ ಆಟಗಾರರು. ಅವರಲ್ಲಿ ಯಾರಾದರೂ ಭಾರತ ತಂಡಕ್ಕೆ ಬರುತ್ತಾರೆ, ಯಾವುದೇ ಒಬ್ಬ ಆಟಗಾರನಿಗಾಗಿ ತಂಡವನ್ನು ದುರ್ಬಲ ತಂಡವನ್ನಾಗಿ ಮಾಡುವುದಿಲ್ಲ," ಎಂದರು.

"ಇದು ಕೇವಲ ಪರಿಸ್ಥಿತಿಗಳು ಮತ್ತು ಆ ನಿರ್ದಿಷ್ಟ ಸ್ಥಳದಲ್ಲಿನ ಅವಶ್ಯಕತೆಯೆಂದು ನಾವು ಭಾವಿಸಿದ್ದೇವೆ. ಆ ನಿರ್ದಿಷ್ಟ ಸಂಯೋಜನೆಯೊಂದಿಗೆ ಆ ತಂಡದೊಂದಿಗೆ ಹೋಗುವಂತೆ ಮಾಡಿತು. ಅಲ್ಲಿ ಸ್ಪಿನ್‌ಗೆ ದೊಡ್ಡ ಪಾತ್ರವಿಲ್ಲ ಎಂದು ನಾವು ಭಾವಿಸಿದ್ದೇವು ಮತ್ತು ವೇಗದ ಬೌಲರ್‌ಗಳಿಗೆ ಸಹಾಯವಾಗುವ ಪರಿಸ್ಥಿತಿಗಳಾಗಿದ್ದವು," ಎಂದು ರಾಹುಲ್ ದ್ರಾವಿಡ್ ಹೇಳಿದರು.

ಭಾರತಕ್ಕೆ ಹೆಚ್ಚುವರಿ ಸ್ಪಿನ್ನರ್ ಬೇಕಾಗಬಹುದು

ರಾಹುಲ್ ದ್ರಾವಿಡ್ ಅವರು ಕೆರಿಬಿಯನ್ ದ್ವೀಪಗಳಲ್ಲಿನ ಪಿಚ್‌ಗಳು ಹೆಚ್ಚುವರಿ ಸ್ಪಿನ್ನರ್‌ಗೆ ನೆರವಾಗಲು ಕುಲದೀಪ್ ಅಥವಾ ಯುಜ್ವೇಂದ್ರ ಅವರನ್ನು ಆಡಿಸಲು ಒತ್ತಾಯಿಸಬಹುದು ಎಂದು ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಒಪ್ಪಿಕೊಂಡರು.

Story first published: Thursday, June 20, 2024, 12:57 [IST]
Other articles published on Jun 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+