T20 World Cup 2024: ಗುಂಪು-2 ರಲ್ಲಿ ಸೆಮಿಫೈನಲ್ ಕದನಕ್ಕಾಗಿ 3 ತಂಡಗಳ ನಡುವೆ ಕಠಿಣ ಸ್ಪರ್ಧೆ!
ಜೂನ್ 22 ಶನವಾರ, 2024ರ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯಗಳು ನಡೆಯುತ್ತಿದ್ದು, ಇದೀಗ ಗುಂಪು 2ರಲ್ಲಿ ಕೇವಲ ಎರಡು ಪಂದ್ಯಗಳು ಮಾತ್ರ ಉಳಿದಿವೆ. ಈ ಗುಂಪಿನಲ್ಲಿ ಸೆಮಿಫೈನಲ್‌ಗಾಗಿ ಪ್ರಬಲ ಪೈಪೋಟಿ ಏರ್ಪಟಿದೆ.
ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ತ್ರಿಕೋನ ಘರ್ಷಣೆ ಮಾರ್ಪಟ್ಟಿದೆ. ಯುಎಸ್‌ಎ ಇನ್ನೂ ಸೆಮಿಫೈನಲ್ ರೇಸ್‌ನಲ್ಲಿದೆ. ಆದರೆ ಸ್ಪರ್ಧೆಯಲ್ಲಿ ಯುಎಸ್‌ಎ ಉಳಿಯಲು ಕಠಿಣ ಹೋರಾಟ ನಡೆಸಬೇಕಾಗಿದ್ದು, ಉಳಿದ ಮೂರು ತಂಡಗಳ ಸೋಲು-ಗೆಲುವಿಗೆ ಕಾಯುವ ಸ್ಥಿತಿಯಲ್ಲಿದೆ.

ಗುಂಪು-2ರಲ್ಲಿ ಎಲ್ಲಾ ತಂಡಗಳು ಎರಡು ಪಂದ್ಯಗಳನ್ನು ಆಡಿವೆ. ಆದರೆ, ಪ್ರಸ್ತುತ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಟಾಪ್-2ರಲ್ಲಿವೆ. ಮೂರನೇ ಸ್ಥಾನದಲ್ಲಿ ಕುಳಿತಿರುವ ಇಂಗ್ಲೆಂಡ್, ಜೂನ್ 24 ರಂದು ನಡೆಯಲಿರುವ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕದನವನ್ನು ನೋಡಿ ಆನಂದಿಸಲು ಸಿದ್ಧವಾಗಿದೆ.
ದಕ್ಷಿಣ ಆಫ್ರಿಕಾ ತಂಡ ಅಮೆರಿಕ ಮತ್ತು ಇಂಗ್ಲೆಂಡ್ ವಿರುದ್ಧ ಆಡಿರುವ ಎರಡು ಪಂದ್ಯಗಳನ್ನು ಗೆದ್ದಿದೆ. ಆದರೆ ಅಂತರವು ತುಂಬಾ ಕಡಿಮೆಯಾಗಿದೆ. ರೋಚಕ ಪಂದ್ಯದಲ್ಲಿ ಅಮೆರಿಕ ವಿರುದ್ಧ 18 ರನ್‌ಗಳ ಜಯ ಸಾಧಿಸಿದರೆ, ಇಂಗ್ಲೆಂಡ್ ವಿರುದ್ಧ 7 ರನ್‌ಗಳಿಂದ ಗೆಲುವು ಸಾಧಿಸಿತ್ತು.
ಇಂತಹ ಪರಿಸ್ಥಿತಿಯಲ್ಲಿ ಆಫ್ರಿಕಾ 4 ಅಂಕಗಳೊಂದಿಗೆ ಮುಂದಿದ್ದರೂ ರನ್ ರೇಟ್ ಈ ತಂಡಕ್ಕೆ ಅಪಾಯ ತಂದೊಡ್ಡಬಹುದು. ಜೂನ್ 24 ರಂದು ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ ಸೂಪರ್-8 ರ ಕೊನೆಯ ಪಂದ್ಯವನ್ನು ಆಡಬೇಕಾಗಿದೆ. ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋತರೆ, ಇಂಗ್ಲೆಂಡ್‌ನ ಸೆಮಿಫೈನಲ್ ಹಾದಿಯನ್ನು ಸುಲಭವಾಗಲಿದೆ.

ವೆಸ್ಟ್ ಇಂಡೀಸ್ ಸೋತರೆ ಏನಾಗಬಹುದು?
ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್ ಸೋತರೂ ಇಂಗ್ಲೆಂಡ್ ಸಂಕಷ್ಟದಲ್ಲಿಯೇ ಇರಲಿದೆ. ವಿಂಡೀಸ್ ತಂಡ ಕೇವಲ 2 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಅಮೆರಿಕ ವಿರುದ್ಧ 9 ವಿಕೆಟ್ ಗಳ ಜಯ ಸಾಧಿಸಿದ ಬಳಿಕ ಕೆರಿಬಿಯನ್ನರ ರನ್ ರೇಟ್ ಗಗನಕ್ಕೇರಿದೆ.
ವಿಂಡೀಸ್ ತಂಡ 2 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ವಿಂಡೀಸ್ ಸೋಲುವ ಭಯದಲ್ಲಿದೆ. ದಕ್ಷಿಣ ಆಫ್ರಿಕಾ ತಂಡ 2024ರ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ವೆಸ್ಟ್ ಇಂಡೀಸ್ ಸೋತರೂ ಇಂಗ್ಲೆಂಡ್ ಗೆಲ್ಲಬಹುದು.
ಇಂಗ್ಲೆಂಡ್ vs ಯುಎಸ್‌ಎ
ಇಂಗ್ಲೆಂಡ್‌ನ ಮುಂದಿನ ಪಂದ್ಯವನ್ನು ಜೂನ್ 23 ರಂದು ಅಮೇರಿಕಾ ವಿರುದ್ಧ ನಡೆಯಲಿದೆ. ಆಂಗ್ಲರ ಪಡೆ ಈ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಲು ಸಜ್ಜಾಗಿದ್ದು, ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನು ಗೆಲ್ಲಲೇಬೇಕು.
ಯುಎಸ್ಎ ವಿರುದ್ಧ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ಒಂದು ವೇಳೆ ಆಂಗ್ಲರ ತಂಡ ಈ ಪಂದ್ಯ ಗೆದ್ದರೆ ಸೆಮಿಫೈನಲ್‌ಗೆ ಟಿಕೆಟ್ ಪಡೆಯಲಿದೆ. ಒಂದು ವೇಳೆ ಇಂಗ್ಲೆಂಡ್ ಸೋತರೆ ಟೂರ್ನಿಯಿಂದ ಹೊರಗುಳಿಯಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications