T20 World Cup 2024: ಪಾಕಿಸ್ತಾನಕ್ಕೆ ಸಂಕಷ್ಟ; ಹ್ಯಾರಿಸ್ ರೌಫ್ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ
ಸದ್ಯಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡದ ಸಮಸ್ಯೆಗಳು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. 2024ರ ಟಿ20 ವಿಶ್ವಕಪ್‌ನಲ್ಲಿ ತಮ್ಮ ಆರಂಭಿಕ ಪಂದ್ಯದಲ್ಲಿ ಯುಎಸ್ಎ ವಿರುದ್ಧದ ಅವಮಾನಕರ ಸೋಲಿನ ನಂತರ, ಪಾಕಿಸ್ತಾನದ ಸ್ಟಾರ್ ಬೌಲರ್ ಹ್ಯಾರಿಸ್ ರೌಫ್ ಗುರುವಾರದ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಆರೋಪವನ್ನು ಎದುರಿಸಿದ್ದಾರೆ.
ಪ್ರಸ್ತುತ ಯುಎಸ್‌ಎ ಹಿರಿಯ ರಾಷ್ಟ್ರೀಯ ಕ್ರಿಕೆಟ್ ತಂಡದ ಸದಸ್ಯರಾಗಿರುವ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ರಸ್ಟಿ ಥೆರಾನ್ ಅವರು ಪಾಕಿಸ್ತಾನದ ಅನುಭವಿ ವೇಗದ ಬೌಲರ್ ರೌಫ್ ವಿರುದ್ಧ ಬಾಲ್ ಟ್ಯಾಂಪರಿಂಗ್ ಗಂಭೀರ ಆರೋಪವನ್ನು ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅನ್ನು ಟ್ಯಾಗ್ ಮಾಡಿದ್ದಾರೆ.

ಹ್ಯಾರಿಸ್ ರೌಫ್ ಅವರು ಯುಎಸ್ಎ ವಿರುದ್ಧ ಬೌಲಿಂಗ್‌ನಲ್ಲಿ ಕಳಪೆಯಾಗಿದ್ದರು. 4 ಓವರ್‌ಗಳಲ್ಲಿ 37 ರನ್‌ಗಳನ್ನು ಬಿಟ್ಟುಕೊಟ್ಟು ಕೇವಲ 1 ವಿಕೆಟ್ ಪಡೆದರು.
ಪಂದ್ಯದ ಸಮಯದಲ್ಲಿ ಬಲಗೈ ವೇಗಿಯು ಹೊಸ ಚೆಂಡಿನ ಮೇಲೆ ತನ್ನ ಉಗುರುಗಳನ್ನು ಓಡಿಸಿದನೆಂದು ರಸ್ಟಿ ಥರಾನ್ ಆರೋಪಿಸಿದ್ದಾನೆ. ಇದು ಅಮೆರಿಕನ್ ಬ್ಯಾಟರ್‌ಗಳನ್ನು ಹಿಮ್ಮೆಟ್ಟಿಸಲು ಹೀಗೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ರಸ್ಟಿ ಥರಾನ್ ಅವರು ಐಸಿಸಿ ಉದ್ದೇಶಿಸಿ ಮಾಡಿದ ಟ್ವೀಟ್‌ನಲ್ಲಿ, "ಬದಲಾದ ಈ ಹೊಸ ಚೆಂಡನ್ನು ಪಾಕಿಸ್ತಾನ ತಂಡವು ವಿರೂಪಗೊಳಿಸಿಲ್ಲ ಎಂದು ನಂಬಬೇಕೆ? ಎರಡು ಓವರ್‌ಗಳ ಹಿಂದೆ ಬದಲಾದ ಚೆಂಡನ್ನು ಹಿಂತಿರುಗಿಸುವುದೇ? ಹ್ಯಾರಿಸ್ ರೌಫ್ ತನ್ನ ಹೆಬ್ಬೆರಳು ಉಗುರಿನಿಂದ ಚೆಂಡನ್ನು ವಿರೂಪಗೊಳಿಸುವುದನ್ನು ನೋಡಬಹುದು," ಎಂದು ಬರೆದುಕೊಂಡಿದ್ದಾರೆ.

ಘಟನೆಯ ಕುರಿತು ಯುಎಸ್ಎ ತಂಡದಿಂದ ಯಾವುದೇ ಅಧಿಕೃತ ದೂರು ನೀಡಲಾಗಿಲ್ಲ ಎಂದು ಕಾಣುತ್ತದೆ. ಆದರೂ ಹಾಲಿ ಕ್ರಿಕೆಟ್‌ನಿಂದ ಈ ಆರೋಪವು ಗಂಭೀರವಾಗಿದೆ.
ಪಂದ್ಯದ ನಂತರ, ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ತಮ್ಮ ಬೌಲರ್‌ಗಳ ಮನಸ್ಥಿತಿಯನ್ನು ಟೀಕಿಸಿದರು. ಯುಎಸ್ಎ ತಂಡದ ವಿರುದ್ಧ 159 ರನ್‌ಗಳ ಸಾಧಾರಣ ಮೊತ್ತವನ್ನು ಸಮರ್ಥಿಸಿಕೊಂಡರೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ಸೂಚಿಸಿದರು.
"ನಾವು ಯಾವುದೇ ಪಂದ್ಯಾವಳಿಗೆ ಬಂದಾಗ, ಯಾವಾಗಲೂ ಅತ್ಯುತ್ತಮವಾದ ತಯಾರಿಯನ್ನು ಮಾಡಿರುತ್ತೇವೆ. ಇದು ಒಂದು ರೀತಿಯ ಮನಸ್ಥಿತಿ ಎಂದು ನೀವು ಹೇಳಬಹುದು. ಅಂತಹ ತಂಡದ ವಿರುದ್ಧ ಬಂದಾಗ ಆಟಗಾರರು ಸ್ವಲ್ಪ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಆಗ ವಿಷಯಗಳನ್ನು ಸ್ವಲ್ಪ ಲಘುವಾಗಿ ತೆಗೆದುಕೊಳ್ಳಲಾಗುತ್ತದೆ. ನಾವು ಯಾವುದೇ ತಂಡದ ವಿರುದ್ಧ ನಮ್ಮ ಯೋಜನೆಯನ್ನು ಕಾರ್ಯಗತಗೊಳಿಸದಿದ್ದರೆ, ಅದು ಯಾವುದೇ ತಂಡವಾಗಿದ್ದರೂ ಅವರು ಸೋಲಿಸುತ್ತಾರೆ," ಎಂದು ಬಾಬರ್ ಅಜಂ ಅಭಿಪ್ರಾಯಪಟ್ಟರು.
"ನಾವು ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಗುರಿಯನ್ನು ಹೊಂದಿಲ್ಲ ಎಂದು ನಾನು ನಂಬುತ್ತೇನೆ. ನಾವು ತಯಾರಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಆದರೆ ಪಂದ್ಯದಲ್ಲಿ ನಾವು ತಂಡವಾಗಿ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿಲ್ಲ," ಎಂದು ಬಾಬರ್ ಅಜಂ ಒಪ್ಪಿಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications