Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಸೂಪರ್ 8ರಲ್ಲಿ ಗೆದ್ದು ಬೀಗಿದ ವೆಸ್ಟ್ ಇಂಡೀಸ್; ಯುಎಸ್ಎ ಸೆಮಿಸ್ ಹಾದಿ ಕಠಿಣ!

ಶನಿವಾರ, ಜೂನ್ 22ರಂದು ಬಾರ್ಬಡೋಸ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 8ರ ಎರಡನೇ ಗುಂಪಿನ ಪಂದ್ಯದಲ್ಲಿ ಯುಎಸ್ಎ ತಂಡದ ವಿರುದ್ಧ ವೆಸ್ಟ್ ಇಂಡೀಸ್ 9 ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಯುಎಸ್ಎ ತಂಡ 19.5 ಓವರ್‌ಗಳಲ್ಲಿ ಕೇವಲ 128 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ವೆಸ್ಟ್ ಇಂಡೀಸ್ ಬ್ಯಾಟರ್‌ಗಳು ಕೇವಲ 10.5 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿ 1 ವಿಕೆಟ್‌ಗೆ 130 ರನ್ ಗಳಿಸಿತು.

T20 World Cup 2024 West Indies Beat USA by 9 Wickets In Super 8 Match

ವೆಸ್ಟ್ ಇಂಡೀಸ್ ಸ್ಫೋಟಕ ಆರಂಭಿಕ ಶಾಯ್ ಹೋಪ್ ಅಜೇಯ 82 ರನ್ ಸಿಡಿಸುವ ಮೂಲಕ ಆರಾಮದಾಯಕ ಗೆಲುವು ದಾಖಲಿಸಲು ನೆರವಾದರು. ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಸೂಪರ್ 8ರ 2ನೇ ಗುಂಪಿನ ಅಂಕಪಟ್ಟಿಯಲ್ಲಿ ಸ್ಥಾನವನ್ನು ಪಡೆಯಿತು.

ಬುಧವಾರದಂದು ಇಂಗ್ಲೆಂಡ್‌ ವಿರುದ್ಧ ಎಂಟು ವಿಕೆಟ್‌ಗಳ ಸೋಲು ಅನುಭವಿಸಿದ ಬಳಿಕ ವೆಸ್ಟ್ ಇಂಡೀಸ್ ತಂಡವು ಇದೀಗ ಎರಡು ಅಂಕಗಳೊಂದಿಗೆ ಮತ್ತು 1.814 ನೆಟ್ ರನ್ ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಜಾನ್ಸನ್ ಚಾರ್ಲ್ಸ್ ಆರಂಭದಲ್ಲಿ 14 ಎಸೆತಗಳಲ್ಲಿ ಎರಡು ಬೌಂಡರಿಗಳೊಂದಿಗೆ 15 ರನ್ ಗಳಿಸಿ ಔಟಾದರು. ಆದರೆ ಶಾಯ್ ಹೋಪ್ ಅಜೇಯ 82 ರನ್ ಮತ್ತು ನಿಕೋಲಸ್ ಪೂರನ್ ಅಜೇಯ 27 ರನ್ ಗಳಿಸಿ ತಮ್ಮ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

T20 World Cup 2024 West Indies Beat USA by 9 Wickets In Super 8 Match

ಬಲಗೈ ವಿಕೆಟ್‌ಕೀಪರ್-ಬ್ಯಾಟರ್ ಶಾಯ್ ಹೋಪ್ ಕೇವಲ 39 ಎಸೆತಗಳಲ್ಲಿ 8 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳೊಂದಿಗೆ 82 ರನ್ ಗಳಿಸಿದರೆ, ನಿಕೋಲಸ್ ಪೂರನ್ 13 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 1 ಬೌಂಡರಿಯೊಂದಿಗೆ 27 ರನ್ ಗಳಿಸಿ ಯುಎಸ್ಎ ಬೌಲರ್‌ಗಳನ್ನು ಬೆಂಡೆತ್ತಿದರು.

ಇದಕ್ಕೂ ಮುನ್ನ ಯುಎಸ್ಎ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಸ್ಟೀವನ್ ಟೇಲರ್ ಮತ್ತು ಆಂಡ್ರೀಸ್ ಗೌಸ್ ಉತ್ತಮ ಆರಂಭ ನೀಡಲಿಲ್ಲ. ತಂಡದ ಮೊತ್ತ 3 ರನ್‌ಗಳಾಗಿದ್ದ ವೇಳೆ 2 ರನ್ ಗಳಿಸಿದ್ದ ಸ್ಟೀವನ್ ಟೇಲರ್ ಅವರ ವಿಕೆಟ್ ಪಡೆಯುವಲ್ಲಿ ಆಂಡ್ರೆ ರಸೆಲ್ ಸಫಲರಾದರು.

ನಂತರ ಆಂಡ್ರೀಸ್ ಗೌಸ್ 29 ರನ್, ನಿತೀಶ್ ಕುಮಾರ್ 20 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಮಿಲಿಂದ್ ಕುಮಾರ್ 19 ರನ್, ವ್ಯಾನ್ ಶಾಲ್ಕ್ವಿಕ್ 18 ರನ್, ಅಲಿ ಖಾನ್ 14 ರನ್ ಗಳಿಸಿದರೆ, ಉಳಿದ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಟಲಿಲ್ಲ.

ಬೌಲಿಂಗ್‌ನಲ್ಲಿ ವೆಸ್ಟ್ ಇಂಡೀಸ್ ಪರ ಆಂಡ್ರೆ ರಸೆಲ್ 3.5 ಓವರ್‌ಗಳಲ್ಲಿ 31 ರನ್ ನೀಡಿ 3 ವಿಕೆಟ್ ಪಡೆದರೆ, ರೋಸ್ಟನ್ ಚೇಸ್ 4 ಓವರ್‌ಗಳಲ್ಲಿ 19 ರನ್ ನೀಡಿ 3 ವಿಕೆಟ್ ಕಬಳಿಸಿ ಎದುರಾಳಿ ಬ್ಯಾಟರ್‌ಗಳಿಗೆ ಕಂಟಕವಾದರು. ಉಳಿದಂತೆ ಅಲ್ಝಾರಿ ಜೋಸೆಫ್ 2 ವಿಕೆಟ್ ಮತ್ತು ಗುಡಾಕೇಶ್ ಮೋಟಿ 1 ವಿಕೆಟ್ ಪಡೆದರು.

Story first published: Saturday, June 22, 2024, 11:54 [IST]
Other articles published on Jun 22, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+