Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

T20 World Cup 2024: ಟಿ20 ವಿಶ್ವಕಪ್‌ಗೆ ವೆಸ್ಟ್‌ ಇಂಡೀಸ್‌ ತಂಡ ಘೋಷಣೆ; 3ನೇ ಪ್ರಶಸ್ತಿ ಗೆಲ್ಲಲು ಕೆರಿಬಿಯನ್ನರು ಸಜ್ಜು

ಮುಂಬವರುವ 2024ರ ಟಿ20 ವಿಶ್ವಕಪ್‌ ಟೂರ್ನಿಗೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ತನ್ನ 15 ಸದಸ್ಯರ ತಂಡವನ್ನು ಘೋಷಣೆ ಮಾಡಿದೆ. ಈಗಾಗಲೆ ಭಾರತ, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಮತ್ತು ಆಸ್ಟ್ರೇಲಿಯಾ ತಮ್ಮ ತಂಡಗಳನ್ನು ಪ್ರಕಟಿಸಿವೆ. ಹೀಗಾಗಿ ವೆಸ್ಟ್ ಇಂಡೀಸ್ ತನ್ನ ತಂಡವನ್ನು ಘೋಷಿಸಿದ 10ನೇ ದೇಶವಾಗಿದೆ.

ಜೂನ್‌ 1 ರಿಂದ ಆರಂಭವಾಗುತ್ತಿರುವ ಈ ಮೆಗಾ ಟೂರ್ನಿ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕಾ ದೇಶಗಳಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಹೊಸ ವೆಸ್ಟ್‌ ಇಂಡೀಸ್‌ ತಂಡ ಬಲಿಷ್ಠವಾಗಿದ್ದು, ಹೊಡಿ ಬಡಿ ಆಟಗಾರರನ್ನು ಹೊಂದಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ ರಾಜಸ್ಥಾನ ರಾಯಲ್‌ ಪರ ಕಣಕ್ಕೀಳಿಯುತ್ತಿರುವ ರೋವ್‌ಮನ್‌ ಪೊವೆಲ್‌ ಅವರಿಗೆ ವೆಸ್ಟ್‌ ಇಂಡೀಸ್‌ ತಂಡದ ನಾಯಕತ್ವ ನೀಡಲಾಗಿದೆ. ಜೊತೆಗೆ ರಾಯಲ್‌ ಚಾಲೆಂಜರ್ಸ್‌ ಪರ ಆಡುತ್ತಿರುವ ವೇಗದ ಬೌಲರ್‌ ಅಲ್ಜಾರಿ ಜೋಸೆಫ್‌ ನನ್ನು ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.

T20 world cup 2024 West Indies squad

ಟಿ20 ಮಾದರಿ ಕ್ರಿಕೆಟ್‌ನಲ್ಲಿ ಅಪಾರಿ ತಂಡಗಳಲ್ಲಿ ಒಂದಾಗಿರುವ ವೆಸ್ಟ್‌ ಇಂಡೀಸ್‌ ಕಳೆದ ಮೂರು ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚಾಗಿ ಸದ್ದು ಮಾಡಿಲ್ಲ. ಆದರೆ ವೆಸ್ಟ್‌ ಇಂಡೀಸ್‌ ಅಸಾಧ್ಯವಾದುದನ್ನು ಸಾಧಿಸಬಲ್ಲ ತಂಡವಾಗಿದೆ. ಇದೀಗ ಟಿ20 ವಿಶ್ವಕಪ್‌ಗೆ ಪ್ರಕಟವಾಗಿರುವ ಕೆರಿಬಿಯನ್ ತಂಡ ಎದುರಾಳಿಗಳಿಗೆ ನಡುಕ ಹುಟ್ಟಿಸುವಂತಿದೆ.

ವೆಸ್ಟ್‌ ಇಂಡೀಸ್‌ ಈವರೆಗೆ 2 ಬಾರಿ ಟಿ20 ವಿಶ್ವಕಪ್‌ ಪ್ರಶಸ್ತಿಯನ್ನು ಗೆದ್ದಿದೆ. ಅಲ್ಲದೆ ಈ ಬಾರಿ ಚುಟುಕು ಕ್ರಿಕೆಟ್‌ ಸಮರಕ್ಕೆ ವೆಸ್ಟ್‌ ಇಂಡೀಸ್‌ ಆತಿಥೇಯರಾಗಿರುವುದರಿಂದ ಹೆಚ್ಚು ಅಪಾಯಕಾರಿಯಾಗಿದ್ದಾರೆ. 2022ರ ಟಿ20 ವಿಶ್ವಕಪ್‌ ತಂಡದಿಂದ ದೂರ ಉಳಿದಿದ್ದ ಶಿಮ್ರಾನ್‌ ಹೆಟ್ಮೆಯರ್‌ ಮತ್ತೆ ಮರಳಿ ಬಂದಿದ್ದಾರೆ. ಹೀಗಾಗಿ ವೆಸ್ಟ್‌ ಇಂಡೀಸ್‌ ತಂಡದ ಶಕ್ತಿ ಹೆಚ್ಚಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿರುವ ವೆಸ್ಟ್‌ ಇಂಡೀಸ್ ಸಖತ್‌‌ ಸ್ಟ್ರಾಂಗ್‌ ಆಗಿ ಕಾಣುತ್ತಿದೆ.

ಮತ್ತೊಂದೆಡೆ ಆಸ್ಟ್ರೇಲಿಯಾ ಪ್ರವಾಸದ ವೇಳೆ ತನ್ನ ಭರ್ಜರಿ ಪ್ರದರ್ಶನದಿಂದ ವಿಶ್ವ ಕ್ರಿಕೆಟ್‌ ಗಮನನ ಸೆಳೆದಿದ್ದ ವಿಂಡೀಸ್‌ ಬೌಲರ್‌ ಶಮರ್‌ ಜೋಸೆಫ್‌ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದರ ಜೊತೆಗೆ ಪ್ರಸುತ್ತ ನಡೆಯುತ್ತಿರುವ 2024ರ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸುನಿಲ್‌ ನರೈನ್‌ ಅವರನ್ನು ತಂಡಕ್ಕೆ ಮರಳುವಂತೆ ವೆಸ್ಟ್‌ ಇಂಡೀಸ್‌ ಹೇಳಿತ್ತು ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಯುವ ಆಟಗಾರರ ಅವಕಾಶವನ್ನು ನಾನು ಕಿತ್ತುಕೊಳ್ಳಲು ಬಯಸುವುದಿಲ್ಲ ಎಂದು ಸುನಿಲ್‌ ನರೈನ್‌ ಹೇಳಿದ್ದರು. ಕಳೆದ ವರ್ಷ ಸುನಿಲ್‌ ನರೈನ್‌ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ವೆಸ್ಟ್ ಇಂಡೀಸ್ ತಂಡ:

ರೋವ್‌ಮನ್ ಪೊವೆಲ್ (ನಾಯಕ), ಅಲ್ಜಾರಿ ಜೋಸೆಫ್ (ಉಪನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೆಸ್, ಶಿಮ್ರಾನ್ ಹೆಟ್ಮೆಯರ್, ಶಮರ್ ಜೋಸೆಫ್, ಬ್ರ್ಯಾಂಡನ್ ಕಿಂಗ್, ನಿಕ್ಲಾಸ್ ಪೂರನ್, ಶಾಯ್ ಹಾಪ್, ಆಂಡ್ರೆ ರೆಸೆಲ್, ರೊಮಾರಿಯೊ ಶೆಫರ್ಡ್, ಜೇಸನ್ ಹೊಸ ಗುಡ್ಡರ್ ಅಜೆಸನ್ ಹೋಲ್, ಡಾಕೆಲ್ ಶೆರ್ಫೇನ್ ರುದರ್ಫೋರ್ಡ್.

Story first published: Saturday, May 4, 2024, 11:38 [IST]
Other articles published on May 4, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+