ಭಾನುವಾರ, ಜೂನ್ 2ರಂದು ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಟಿ20 ವಿಶ್ವಕಪ್ ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ಪಪುವಾ ನ್ಯೂ ಗಿನಿಯಾ ವಿರುದ್ಧ ವೆಸ್ಟ್ ಇಂಡೀಸ್ ತಮ್ಮ ಅಭಿಯಾನ ಆರಂಭಿಸುತ್ತಿದೆ.
2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಯುಎಸ್ಎ ಮತ್ತು ಕೆನಡಾ ತಂಡಗಳ ನಡುವಿನ ರೋಚಕ ಉದ್ಘಾಟನಾ ಪಂದ್ಯದ ನಂತರ, ಎರಡನೇ ಪಂದ್ಯದಲ್ಲಿ ಸಹ-ಆತಿಥೇಯ ತಂಡ ವೆಸ್ಟ್ ಇಂಡೀಸ್ ಕಣಕ್ಕಿಳಿಯುತ್ತಿದೆ.

ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ರೋವ್ಮನ್ ಪೊವೆಲ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದರು. ಹೀಗಾಗಿ ಅಸ್ಸಾದ್ ವಾಲಾ ನಾಯಕತ್ವದ ಪಪುವಾ ನ್ಯೂ ಗಿನಿಯಾ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
ರೋವ್ಮನ್ ಪೊವೆಲ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡದಲ್ಲಿ ಹಲವು ಬಿಗ್-ಹಿಟ್ಟರ್‌ಗಳನ್ನು ಹೊಂದಿರುವ ಕಾರಣ, ಪ್ರಶಸ್ತಿ ಗೆಲ್ಲುವ ಮೆಚ್ಚಿನ ತಂಡಗಳಲ್ಲಿ ಒಂದಾಗಿ ಪಂದ್ಯಾವಳಿಯನ್ನು ಪ್ರಾರಂಭಿಸುತ್ತಿದೆ.
ಮತ್ತೊಂದೆಡೆ, ಕ್ರಿಕೆಟ್ ಶಿಶು ಪಪುವಾ ನ್ಯೂ ಗಿನಿಯಾ ತಂಡವು 2024ರ ಟಿ20 ವಿಶ್ವಕಪ್ ಪಂದ್ಯಾವಳಿಗೆ ಅಂಡರ್‌ಡಾಗ್‌ಗಳಾಗಿ ಬರುತ್ತಿದ್ದಾರೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಪೂರ್ವ ಏಷ್ಯಾ-ಪೆಸಿಫಿಕ್ ಅರ್ಹತಾ ಪಂದ್ಯವನ್ನು ಗೆದ್ದ ನಂತರ, ಅಸ್ಸಾದ್ ವಾಲಾ ನಾಯಕತ್ವದ ತಂಡವು ಪಂದ್ಯಾವಳಿಯಲ್ಲಿ ತಮ್ಮ ಸ್ಥಾನವನ್ನು ಗಳಿಸಿದೆ.

ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ 2024ರ ಟಿ20 ವಿಶ್ವಕಪ್‌ನ ಸಂಪೂರ್ಣ ಪ್ರಸಾರ ಹಕ್ಕುಗಳನ್ನು ಹೊಂದಿದೆ. ಹೀಗಾಗಿ ವೆಸ್ಟ್ ಇಂಡೀಸ್ vs ಪಪುವಾ ನ್ಯೂ ಗಿನಿಯಾ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದ್ದರೆ, ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ.
ವೆಸ್ಟ್ ಇಂಡೀಸ್: ಜಾನ್ಸನ್ ಚಾರ್ಲ್ಸ್, ಬ್ರಾಂಡನ್ ಕಿಂಗ್, ರೋಸ್ಟನ್ ಚೇಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್ (ನಾಯಕ), ಆಂಡ್ರೆ ರಸೆಲ್, ರೊಮಾರಿಯೊ ಶೆಫರ್ಡ್, ಶೆರ್ಫೇನ್ ರುದರ್‌ಫೋರ್ಡ್, ಅಕೈಲ್ ಹೊಸೈನ್, ಅಲ್ಜಾರಿ ಜೋಸೆಫ್, ಗುಡಾಕೇಶ್ ಮೋಟಿ.
ಪಪುವಾ ನ್ಯೂ ಗಿನಿಯಾ: ಟೋನಿ ಉರಾ, ಸೆಸೆ ಬೌ, ಅಸ್ಸಾದ್ ವಾಲಾ (ನಾಯಕ), ಲೆಗಾ ಸಿಯಾಕಾ, ಹಿರಿ ಹಿರಿ, ಚಾರ್ಲ್ಸ್ ಅಮಿನಿ, ಕಿಪ್ಲಿನ್ ಡೊರಿಗಾ (ವಿಕೆಟ್ ಕೀಪರ್), ಅಲೀ ನಾವೊ, ಚಾಡ್ ಸೋಪರ್, ಕಬುವಾ ಮೋರಿಯಾ, ಜಾನ್ ಕರಿಕೊ.