T20 World Cup 2024: ಸೂಪರ್ 8 ಎಂದರೇನು? ಅರ್ಹತೆ ಪಡೆಯುವ ತಂಡಗಳು ಯಾವುವು?
2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಪ್ರಸ್ತುತ ಆವೃತ್ತಿಯು ಪ್ರಾರಂಭವಾದ ದಿನದಿಂದಲೂ ಕ್ರಿಕೆಟ್ ಅಭಿಮಾನಿಗಳಿಗೆ ಸಾಕಷ್ಟು ರೋಚಕ ತಿರುವುಗಳನ್ನು ನೀಡಿದೆ.
ಟಿ20 ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಅನಿರೀಕ್ಷಿತ ಪಂದ್ಯಾವಳಿಗಳಲ್ಲಿ ಒಂದಾಗಿದೆ ಎಂದು ತಿಳಿದುಕೊಳ್ಳಬಹುದು. ನ್ಯೂಯಾರ್ಕ್‌ನ ಅನಿರೀಕ್ಷಿತ ಪಿಚ್‌ಗಳು, ಕಡಿಮೆ ಸ್ಕೋರ್‌ಗಳು ಮತ್ತು ತ್ವರಿತ ವಿಕೆಟ್‌ಗಳನ್ನು ನೋಡಿದ್ದೇವೆ.

ಇದೀಗ ಗುಂಪು ಹಂತವು ಕೊನೆಗೊಳ್ಳುತ್ತಿರಲು ಮತ್ತು ಅಭಿಮಾನಿಗಳು ಮತ್ತು ಕ್ರಿಕೆಟ್ ವಿಶ್ಲೇಷಕರು ವಿಶ್ವಕಪ್‌ನ ಸೂಪರ್ 8ರ ಭಾಗ ಪ್ರಾರಂಭವಾಗುವುದನ್ನು ಕುತೂಹಲದಿಂದ ಕಾಯುತ್ತಿದ್ದಾರೆ.
ಈ ಸುದ್ದಿಯಲ್ಲಿ ನಿಖರವಾಗಿ ಸೂಪರ್ 8ರ ಸ್ವರೂಪ ಏನು ಮತ್ತು ಭಾಗವಹಿಸಿರುವ ತಂಡಗಳು ಪಂದ್ಯಾವಳಿಯ ಸೂಪರ್ 8ರ ಹಂತಕ್ಕೆ ಹೇಗೆ ಅರ್ಹತೆ ಪಡೆಯಬಹುದು ಎಂಬುದನ್ನು ನಾವು ನೋಡೋಣ.
ಏನಿದು ಸೂಪರ್ 8?
2024ರ ಟಿ20 ವಿಶ್ವಕಪ್‌ನ ಎಲ್ಲಾ ಗುಂಪು ಹಂತದ ಪಂದ್ಯಗಳು ಮುಗಿದ ನಂತರ, ಟಿ20 ವಿಶ್ವಕಪ್‌ನ ಸೂಪರ್ 8ರ ಹಂತವು ಜೂನ್ 19ರಂದು ಪ್ರಾರಂಭವಾಗುತ್ತದೆ. ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್ ಕ್ರಮವಾಗಿ ಜೂನ್ 27 ಮತ್ತು ಜೂನ್ 29ರಂದು ನಡೆಯಲಿದೆ.
ಹಾಗಾದರೆ, ಸೂಪರ್ 8 ನಿಖರವಾಗಿ ಏನು? ಎಂಬ ಪ್ರಶ್ನೆಗೆ ಪಂದ್ಯಾವಳಿಯಲ್ಲಿ ಭಾಗವಹಿಸುವ 20 ತಂಡಗಳನ್ನು ಪ್ರತಿ ಗುಂಪಿಗೆ ಐದು ತಂಡಗಳಂತೆ 4 ಗುಂಪುಗಳಾಗಿ ವಿಂಗಡಿಸಲಾಗಿದೆ.
ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಪಂದ್ಯಾವಳಿಯ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಸೂಪರ್ 8ರಲ್ಲಿ ಎಂಟು ತಂಡಗಳನ್ನು ಪ್ರತಿ ಗುಂಪಿಗೆ 4 ತಂಡಗಳಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ.
ಈ ವೇಳೆ ಒಂದು ಗುಂಪಿನಲ್ಲಿ ಪ್ರತಿ ತಂಡವು ಮೂರು ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯ ಆಡಲಿವೆ. ಸೂಪರ್ 8ರ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ನಂತರ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತವೆ.
ಯಾವ ತಂಡಗಳು ಸೂಪರ್ 8ರ ಗುಂಪಿಗೆ ಸೇರುತ್ತವೆ?
ಎಲ್ಲಾ ನಾಲ್ಕು ಗುಂಪುಗಳಲ್ಲಿ ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್ 8ರ ಹಂತವನ್ನು ಆಡಲು ಅರ್ಹತೆ ಪಡೆಯುತ್ತವೆ. ಆದರೆ ಯಾವ ತಂಡಗಳು ಸೂಪರ್ 8ರ ಗುಂಪುಗಳನ್ನು ಸೇರುತ್ತವೆ? ಸೂಪರ್ 8ರ ಹಂತದಲ್ಲಿ ಎ ಮತ್ತು ಬಿ ಎಂಬ ಎರಡು ಗುಂಪುಗಳಿರಲಿವೆ.
ಟೂರ್ನಿಯ ಗುಂಪು ಹಂತಗಳಲ್ಲಿ ಎ ಮತ್ತು ಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಎರಡು ತಂಡಗಳು ಹಾಗೂ ಬಿ ಮತ್ತು ಡಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡಗಳು ಸೂಪರ್ 8ರ ವೇಳೆ ಎ ಗುಂಪಿನಲ್ಲಿ ಸ್ಥಾನ ಪಡೆಯುತ್ತವೆ.
ಬಿ ಮತ್ತು ಡಿ ಗುಂಪಿನ ಅಗ್ರ ಎರಡು ತಂಡಗಳು ಹಾಗೂ ಎ ಮತ್ತು ಸಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡಗಳು ಸೂಪರ್ 8ರ ಬಿ ಗುಂಪಿಗೆ ಸೇರುತ್ತವೆ.
ಸೂಪರ್ 8ಗೆ ಅರ್ಹತೆ ಪಡೆಯುವ ಪ್ರತಿಯೊಂದು ತಂಡವು ಮೂರು ಪಂದ್ಯಗಳನ್ನು ಆಡುತ್ತವೆ. ಗುಂಪಿನ ಇತರ ಎಲ್ಲ ಸದಸ್ಯರ ವಿರುದ್ಧ ತಲಾ ಒಂದು ಪಂದ್ಯ ಆಡಲಿವೆ.
ಆ ಬಳಿಕ ಎ ಮತ್ತು ಬಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್ ತಲುಪಲಿವೆ. ಅಲ್ಲಿ ಗೆಲ್ಲುವ ತಂಡಗಳು 2024ರ ಟಿ20 ವಿಶ್ವಕಪ್ ಪ್ರಶಸ್ತಿಗಾಗಿ ಫೈನಲ್‌ನಲ್ಲಿ ಕಾದಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications