T20 World Cup 2024: ಭಾರತದ ಆಡುವ 11ರ ಬಳಗಕ್ಕೆ ಕುಲದೀಪ್ ಯಾದವ್ ಮರಳೋದು ಯಾವಾಗ?
ಸದ್ಯ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ 2024 ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಪ್ರವೇಶಿಸಿದೆ.
ಈವರೆಗೆ ಪಂದ್ಯಾವಳಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಮೂರನ್ನೂ ಗೆದ್ದು, ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಸೂಪರ್ 8ರ ಹಂತಕ್ಕೆ ಪ್ರವೇಶಿಸಿದೆ. ಇದೇ ವೇಳೆ ಭಾರತ ತಂಡದ ಆಡುವ 11ರ ಬಳಗದಲ್ಲಿ ಕೆಲವು ಸಂದಿಗ್ಧತೆಗಳು ಎದುರಾಗಿವೆ.

ಇದೇ ವೇಳೆ ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ಅವರು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಸೂಪರ್ 8ರ ಹಂತದಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡುವುದನ್ನು ಭಾರತೀಯ ಅಭಿಮಾನಿಗಳು ನೋಡುತ್ತಾರೆ ಎಂದು ಭಾರತದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ತಿಳಿಸಿದ್ದಾರೆ.
ನ್ಯೂಯಾರ್ಕ್‌ನಲ್ಲಿನ ಪಿಚ್ ಪರಿಸ್ಥಿತಿಗಳು ಸ್ಪಿನ್ ಬೌಲಿಂಗ್ ಅನ್ನು ಹೇಗೆ ಬೆಂಬಲಿಸುವುದಿಲ್ಲ ಎಂಬುದರ ಕುರಿತು ಪಿಯೂಷ್ ಚಾವ್ಲಾ ಮಾತನಾಡಿದರು. ಆದರೆ, ಟಿ20 ವಿಶ್ವಕಪ್ ಪಂದ್ಯಾವಳಿಯ ಎರಡನೇ ಲೆಗ್‌ನಲ್ಲಿ ಭಾರತೀಯ ಸ್ಪಿನ್ನರ್‌ಗಳು ಆಡುವ ಬಳಗಕ್ಕೆ ಬರಬೇಕಾಗುತ್ತದೆ ಎಂದರು.
ಪ್ರಸ್ತುತ ಭಾರತ ತಂಡದಲ್ಲಿ ನಾಲ್ಕು ಸ್ಪಿನ್ ಆಯ್ಕೆಗಳಿವೆ, ಅದರಲ್ಲಿ ಕುಲದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಇದ್ದಾರೆ.
"ನ್ಯೂಯಾರ್ಕ್‌ನಲ್ಲಿನ ಪಿಚ್ ತುಂಬಾ ಅಪಾಯಕಾರಿಯಾಗಿತ್ತು ಮತ್ತು ಆ ಪಿಚ್‌ನಲ್ಲಿ ಭಾರತ ತಂಡ ಪ್ರದರ್ಶನ ನೀಡಿದ ರೀತಿ ಮತ್ತು ಆಡಿದ ಮೂರು ಪಂದ್ಯಗಳಲ್ಲಿ ಮೂರನ್ನು ಗೆದ್ದಿದೆ. ಹೀಗಾಗಿ ಮುಂದೆ ಉತ್ತಮ ಅವಕಾಶಗಳಿವೆ," ಎಂದು ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ಹೇಳಿದರು.

"ನ್ಯೂಯಾರ್ಕ್‌ನಲ್ಲಿ ಸ್ಪಿನ್ನರ್‌ಗಳ ಅಗತ್ಯವಿರಲಿಲ್ಲ. ಆದರೆ ನೀವು ಸೂಪರ್ 8ಕ್ಕಾಗಿ ಎರಡನೇ ಲೆಗ್‌ಗೆ ಪ್ರವೇಶಿಸಿದಾಗ, ವೆಸ್ಟ್ ಇಂಡೀಸ್ ನೆಲದಲ್ಲಿ ಸ್ಪಿನ್ನರ್‌ಗಳು ದೊಡ್ಡ ಪಾತ್ರವನ್ನು ಹೊಂದಿದ್ದಾರೆ. ನಮ್ಮ ಸ್ಪಿನ್ನರ್‌ಗಳು ಈಗ ಆಟಕ್ಕೆ ಬರುತ್ತಾರೆ," ಎಂದು ಪಿಯೂಷ್ ಚಾವ್ಲಾ ತಿಳಿಸಿದರು.
ಇದಲ್ಲದೆ, ಪಿಯೂಷ್ ಚಾವ್ಲಾ ಅವರು ಸದ್ಯದ ಭಾರತ ತಂಡದಲ್ಲಿ ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಾಹಲ್ ಅವರನ್ನು ಅತ್ಯಂತ ಯಶಸ್ವಿ ಬೌಲರ್‌ಗಳೆಂದು ಆಯ್ಕೆ ಮಾಡಿದರು.
"ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪಂದ್ಯದಲ್ಲಿ ಒಬ್ಬರು ಮಾತ್ರ ಆಡುತ್ತಾರೆ ಮತ್ತು ಕುಲದೀಪ್ ಯಾದವ್ ಕಳೆದ ಒಂದೂವರೆ ವರ್ಷಗಳಲ್ಲಿ ಏನು ಮಾಡಿದ್ದಾರೆ ಎಂಬುದಕ್ಕೆ ಮೊದಲ ಆದ್ಯತೆ ಎಂದು ನಾನು ಭಾವಿಸುತ್ತೇನೆ. ನಿಮ್ಮಲ್ಲಿ ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರು ನಿಮಗೆ ಬ್ಯಾಟಿಂಗ್ ಡೆಪ್ತ್ ನೀಡಬಲ್ಲರು. ಆದರೂ, ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಒಪ್ಪಿಗೆ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ," ಎಂದು ಪಿಯೂಷ್ ಚಾವ್ಲಾ ಅಭಿಪ್ರಾಯಪಟ್ಟರು.
ಭಾರತ ತಂಡದ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ಎ ತಂಡಗಳನ್ನು ಯಶಸ್ವಿಯಾಗಿ ಸೋಲಿಸಿ ಸೂಪರ್ 8 ಹಂತವನ್ನು ತಲುಪಿದೆ. ತನ್ನ ಮುಂದಿನ ಪಂದ್ಯವನ್ನು ಶನಿವಾರ, ಜೂನ್ 15ರಂದು ಫ್ಲೋರಿಡಾದಲ್ಲಿ ಕೆನಡಾ ತಂಡದೊಂದಿಗೆ ಹಣಾಹಣಿ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications