USA vs PAK: ಪಾಕಿಸ್ತಾನ ವಿರುದ್ಧ 'ಸೂಪರ್ ಓವರ್ ಹೀರೋ' ಸೌರಭ್ ನೇತ್ರಾವಳ್ಕರ್ ಯಾರು?
ಗುರುವಾರ, ಜೂನ್ 6ರಂದು ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ 2024ರ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೂಪರ್ ಓವರ್‌ನಲ್ಲಿ ಸೋಲಿಸಿದ ನಂತರ, ಸೌರಭ್ ನೇತ್ರಾವಳ್ಕರ್ ಯುಎಸ್‌ಎ ತಂಡದ ಹೀರೋ ಆಗಿ ಹೊರಹೊಮ್ಮಿದರು.
ಟಿ20 ಕ್ರಿಕೆಟ್‌ನಲ್ಲಿ ಯುಎಸ್ಎ ತನ್ನ ಮೊದಲ ಮುಖಾಮುಖಿಯಲ್ಲೇ ಪಾಕಿಸ್ತಾನ ತಂಡವನ್ನು ಸೋಲಿಸಿದಾಗ ಸೌರಭ್ ನೇತ್ರಾವಳ್ಕರ್ ಅದ್ಭುತ ಪ್ರದರ್ಶನ ನೀಡಿದರು. ಒತ್ತಡದಲ್ಲಿ ಎಡಗೈ ವೇಗಿ ತನ್ನ ನರಗಳನ್ನು ಬಿಗಿ ಹಿಡಿದಿಟ್ಟುಕೊಂಡು ಸಾಮರ್ಥ್ಯ ತೋರಿಸಿದನು.

ಯುಎಸ್ಎ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ ನಂತರ, ಸೌರಭ್ ನೇತ್ರಾವಳ್ಕರ್ 4 ಓವರ್‌ಗಳಲ್ಲಿ 18 ರನ್ ನೀಡಿ 2 ವಿಕೆಟ್‌ಗಳೊಂದಿಗೆ ಮುಗಿಸಿದರು. ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್ ಅವರ ವಿಕೆಟ್‌ಗಳನ್ನು ಪಡೆದರು. ಈ ಮೂಲಕ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗೆ 159 ರನ್‌ಗಳಿಗೆ ನಿರ್ಬಂಧಿಸಿತು.
ನಂತರ ಸೂಪರ್ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದ ಸೌರಭ್ ನೇತ್ರಾವಳ್ಕರ್ ಅವರ ಕೆಲಸ ಅಲ್ಲಿಗೆ ಮುಗಿಯಲಿಲ್ಲ. ನಿರ್ಣಾಯಕ ಒಂದು ಓವರ್‌ನಲ್ಲಿ ಯುಎಸ್ಎ 18 ರನ್‌ಗಳನ್ನು ರಕ್ಷಣೆ ಮಾಡಬೇಕಾಗಿರುವುದರಿಂದ, ಸೌರಭ್ ನೇತ್ರಾವಳ್ಕರ್ ಪಾಕಿಸ್ತಾನದ ಬ್ಯಾಟರ್‌ಗಳಿಗೆ ನಿಯಂತ್ರಣ ಹೇರಿದರು.
ಸೌರಭ್ ನೇತ್ರಾವಳ್ಕರ್ ತಮ್ಮ ಎಲ್ಲಾ ಅನುಭವವನ್ನು ಹೊರತಂದರು ಮತ್ತು ಸೂಪರ್ ಓವರ್‌ನಲ್ಲಿ ಶಾದಾಬ್ ಖಾನ್, ಇಫ್ತಿಕರ್ ಅಹ್ಮದ್ ಮತ್ತು ಫಖರ್ ಜಮಾನ್ ಅವರಂತಹ ಪ್ರಮುಖ ಬ್ಯಾಟರ್‌ಗಳಿಗೆ ರನ್ ನೀಡಲು ಅವಕಾಶ ಕೊಡಲಿಲ್ಲ. ಸೂಪರ್ ಓವರ್‌ನಲ್ಲಿ ಕೇವಲ 13 ರನ್ ನೀಡಿದರು.
ಕೆನಡಾ ಮತ್ತು ಪಾಕಿಸ್ತಾನ ಎರಡನ್ನೂ ಸೋಲಿಸಿ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಯುಎಸ್ಎ ತಂಡ ಆತ್ಮವಿಶ್ವಾಸದಿಂದ ತುಂಬಿರುತ್ತದೆ.

ಭಾರತ ಅಂಡರ್-19ನಿಂದ ಯುಎಸ್ಎ ಹೀರೋ - ಸೌರಭ್ ನೇತ್ರಾವಳ್ಕರ್ ಪಯಣ
ಸೌರಭ್ ನೇತ್ರಾವಳ್ಕರ್ ಅವರು ಎಡಗೈ ವೇಗಿಯಾಗಿದ್ದು, ಅಕ್ಟೋಬರ್ 16, 1991ರಂದು ಮುಂಬೈನಲ್ಲಿ ಜನಿಸಿದರು. ನಂತರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈ ತಂಡಕ್ಕಾಗಿ ಆಡಿದರು. ಭಾರತದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಉತ್ತಮ ಸ್ನೇಹಿತರಾಗಿದ್ದರು.
32 ವರ್ಷದ ಎಡಗೈ ವೇಗದ ಬೌಲರ್ ಸೌರಭ್ ನೇತ್ರಾವಳ್ಕರ್ ಅವರು ಕ್ರೀಡೆ ಮತ್ತು ತಂತ್ರಜ್ಞಾನದ ನಡುವಿನ ಸಾಂಪ್ರದಾಯಿಕ ಗಡಿಗಳನ್ನು ಧಿಕ್ಕರಿಸುವ ಜೀವನ ನಡೆಸಿದರು.
ಸೌರಭ್ ನೇತ್ರಾವಳ್ಕರ್ ಅವರ ಕ್ರಿಕೆಟ್ ವೃತ್ತಿಜೀವನವು ಉತ್ತಮ ಭರವಸೆಯೊಂದಿಗೆ ಪ್ರಾರಂಭವಾಯಿತು. 2010ರಲ್ಲಿ ಕೆಎಲ್ ರಾಹುಲ್, ಜಯದೇವ್ ಉನಾದ್ಕಟ್ ಮತ್ತು ಮಯಾಂಕ್ ಅಗರ್ವಾಲ್ ಅವರಂತಹ ಆಟಗಾರರೊಂದಿಗೆ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದರು.
ಆದರೆ, ಅವರು ಶೀಘ್ರದಲ್ಲೇ ಭಾರತೀಯ ಕ್ರಿಕೆಟ್‌ನಲ್ಲಿ ಅವಕಾಶಗಳ ಕೊರತೆಯನ್ನು ಎದುರಿಸಿದರು. ಆಗ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಸ್ಥಳಾಂತರಗೊಂಡರು.
ಭಾರತ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದ ಸೌರಭ್ ನೇತ್ರಾವಳ್ಕರ್ ಅವರು ಒರಾಕಲ್‌ನಲ್ಲಿ ಇಂಜಿನಿಯರ್ ಆಗಲು ತೆರಳಿದರು. ಕಾರ್ನೆಲ್ ವಿಶ್ವವಿದ್ಯಾಲಯದಿಂದ ಎಂಎಸ್ ಮಾಡಿದರು ಮತ್ತು ಯುಎಸ್‌ನಲ್ಲೇ ಉಳಿದರು. ಇದೀಗ ಅವರು ಪಾಕಿಸ್ತಾನ ತಂಡದ ವಿರುದ್ಧ ಯುಎಸ್ಎ ತಂಡಕ್ಕೆ ಐತಿಹಾಸಿಕ ವಿಶ್ವಕಪ್ ಪಂದ್ಯವನ್ನು ಗೆಲ್ಲಿಸಿಕೊಟ್ಟರು.
ಸೌರಭ್ ನೇತ್ರಾವಳ್ಕರ್ ಅವರು ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಗಾಗಿ ಯುಎಸ್ಎಗೆ ತೆರಳಿದರು. ಇದು ವೃತ್ತಿಪರ ಕ್ರಿಕೆಟಿಗ ಮತ್ತು ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಅವರ ದ್ವಂದ್ವ ಜೀವನವನ್ನು ಪ್ರಾರಂಭಿಸಿತು.
ತನ್ನ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ, ಸೌರಭ್ ನೇತ್ರಾವಳ್ಕರ್ ಪ್ರಮುಖ ತಂತ್ರಜ್ಞಾನ ಸಂಸ್ಥೆಯಾದ ಒರಾಕಲ್‌ನಲ್ಲಿ ಲಾಭದಾಯಕ ಉದ್ಯೋಗವ ಪಡೆದರು. 2019ರಲ್ಲಿ ಸೌರಭ್ ನೇತ್ರಾವಳ್ಕರ್ ಯುಎಸ್ಎಗೆ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶವನ್ನು ಮಾಡಿದರು. ಯುಎಸ್ಎ ನಾಯಕರಾಗಲು ಶ್ರೇಯಾಂಕಗಳ ಮೂಲಕ ತ್ವರಿತವಾಗಿ ಏರಿದರು.
ಸೌರಭ್ ನೇತ್ರಾವಳ್ಕರ್ ಅವರು ಯುಎಸ್ಎ ತಂಡಕ್ಕಾಗಿ ಆರಂಭಿಕ ಬೌಲರ್ ಆಗಿದ್ದಾರೆ. ಹೊಸ ಬಾಲ್ ಮತ್ತು ಸೀಮಿತ ಓವರ್‌ಗಳ ಕ್ರಿಕೆಟ್‌ನ ನಂತರದ ಹಂತಗಳಲ್ಲಿ ಪ್ರಮುಖ ಅಸ್ತ್ರವಾಗಿದ್ದಾರೆ.
ಮೇಜರ್ ಲೀಗ್ ಕ್ರಿಕೆಟ್ (ಎಂಎಲ್‌ಸಿ) ಉದ್ಘಾಟನಾ ಆವೃತ್ತಿಯಲ್ಲಿ ವಾಷಿಂಗ್ಟನ್ ಫ್ರೀಡಮ್ ತಂಡಕ್ಕಾಗಿ ಆಡಿದ ಸೌರಭ್ ನೇತ್ರಾವಳ್ಕರ್ ಅನುಭವವು ಅವರ ಕೌಶಲ್ಯಗಳನ್ನು ಮತ್ತಷ್ಟು ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications