IND vs PAK: ಐರ್ಲೆಂಡ್ ವಿರುದ್ಧದ ವೈಫಲ್ಯದ ಹೊರತಾಗಿಯೂ ಪಾಕ್ ವಿರುದ್ಧ ಆರಂಭಿಕರಾಗುತ್ತಾರಾ ವಿರಾಟ್ ಕೊಹ್ಲಿ?
ಇತ್ತೀಚಿಗೆ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 5 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದ ಕಾರಣ, ಟಿ20 ವಿಶ್ವಕಪ್‌ನಲ್ಲಿ ಚೊಚ್ಚಲ ಬಾರಿಗೆ ಇನ್ನಿಂಗ್ಸ್ ಆರಂಭಿಸುವ ಯೋಜನೆ ಅಂದುಕೊಂಡಂತೆ ನಡೆಯಲಿಲ್ಲ.
ಆದಾಗ್ಯೂ, ಭಾರತ ತಂಡದ ಮ್ಯಾನೇಜ್‌ಮೆಂಟ್ ಪಾಕಿಸ್ತಾನ ವಿರುದ್ಧದ ಭಾರತದ ಮುಂದಿನ ಹೈ-ವೋಲ್ಟೇಜ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಆರಂಭಿಕ ಸಂಯೋಜನೆಗೆ ಅಂಟಿಕೊಳ್ಳಲು ಸಜ್ಜಾಗಿದೆ.

ಸಾಂಪ್ರದಾಯಿಕ ಬದ್ಧ ಎದುರಾಳಿಗಳ ನಡುವಿನ ಭಾನುವಾರದ ಪಂದ್ಯವು ಎ ಗುಂಪಿನ ಫಲಿತಾಂಶವನ್ನು ನಿರ್ಧರಿಸಬಹುದು. ಏಕೆಂದರೆ, ಯುಎಸ್ಎ ವಿರುದ್ಧದ ಆಘಾತಕಾರಿ ಸೋಲಿನ ನಂತರ ಪಾಕಿಸ್ತಾನ ತಂಡಕ್ಕೆ ಗೆಲ್ಲಲೇಬೇಕಾದ ನಿರ್ಣಾಯಕ ಪಂದ್ಯವಾಗಿದೆ.
ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಹೆಚ್ಚುವರಿ ದೊಡ್ಡ ಬ್ಯಾಟರ್ ಶಿವಂ ದುಬೆ ಅವರನ್ನು ಆಡಿಸಲು ನಿಯೋಜಿತ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ಕೈಬಿಟ್ಟು, ಅಗ್ರ ಕ್ರಮಾಂಕಲ್ಲಿ ವಿರಾಟ್ ಕೊಹ್ಲಿಯನ್ನು ಆಡಿಸಲು ಭಾರತ ತಂಡದ ಮ್ಯಾನೇಜ್‌ಮೆಂಟ್ ನಿರ್ಧರಿಸಿತು.
ಐರ್ಲೆಂಡ್ ವಿರುದ್ಧ ಭಾರತ ತಂಡ 8 ವಿಕೆಟ್‌ಗಳ ಗೆಲುವಿನ ನಂತರ, ಭಾರತದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರ ಪ್ರಕಾರ ಹೇಳುವುದಾದರೆ, 2007ರ ಟಿ20 ವಿಶ್ವಕಪ್ ವಿಜೇತ ತಂಡವು ಪಾಕಿಸ್ತಾನ ವಿರುದ್ಧ ಅದೇ ಸಂಯೋಜನೆಗೆ ಅಂಟಿಕೊಳ್ಳಲಿದೆ.
ಕಳೆದ ಕೆಲವು ಆವೃತ್ತಿಗಳಲ್ಲಿ ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆರಂಭಿಕ ಬ್ಯಾಟರ್ ಆಗಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ 17ನೇ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ಅದ್ಭುತವಾಗಿತ್ತು.
ಐಪಿಎಲ್ ಇತಿಹಾಸದಲ್ಲಿ ಅವರ ಅತ್ಯುತ್ತಮ 154ರ ಸ್ಟ್ರೈಕ್ ರೇಟ್‌ನಲ್ಲಿ 741 ರನ್ ಗಳಿಸಿದ ನಂತರ, ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದವರಿಗೆ ನೀಡಲಾದ ಆರೆಂಜ್ ಕ್ಯಾಪ್‌ನೊಂದಿಗೆ ಮುಗಿಸಿದರು.

ಅಲ್ಲದೆ, ವಿರಾಟ್ ಕೊಹ್ಲಿ ಆರಂಭಿಕರಾಗಿ ಭಾರತಕ್ಕೆ ಹಲವು ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ. ಇದು ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಲು ಭಾರತಕ್ಕೆ ಒಂದು ಸ್ಥಾನವನ್ನು ತೆರೆಯುತ್ತದೆ.
ಗಮನಾರ್ಹವಾಗಿ, ರಿಷಭ್ ಪಂತ್‌ಗೆ 3ನೇ ಸ್ಥಾನವನ್ನು ನೀಡುತ್ತದೆ. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ರಿಷಭ್ ಪಂತ್ ಈ ಸ್ವರೂಪದಲ್ಲಿ ಸಾಕಷ್ಟು ಪ್ರಭಾವ ಬೀರಲಿಲ್ಲ.
ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರನ್ನು 3ನೇ ಕ್ರಮಾಂಕದಲ್ಲಿ ಆಯ್ಕೆಯಾಗಿ ಪರಿಗಣಿಸುತ್ತಿದ್ದರು ಎಂಬುದು ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅವರನ್ನು ಆ ಸ್ಥಾನದಲ್ಲಿ ಕಳುಹಿಸಿದಾಗ ಸ್ಪಷ್ಟವಾಗಿತ್ತು.
ರಿಷಭ್ ಪಂತ್ ಭಾರತದ 3ನೇ ಸ್ಥಾನದ ಆಯ್ಕೆ ಖಚಿತ
ರಿಷಭ್ ಪಂತ್ 2024ರ ಟಿ20 ವಿಶ್ವಕಪ್‌ನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ (ಅಭ್ಯಾಸ ಪಂದ್ಯ ಸೇರಿದಂತೆ), ಅವರು ನಿಧಾನಗತಿಯ ನ್ಯೂಯಾರ್ಕ್ ಟ್ರ್ಯಾಕ್‌ನಲ್ಲಿ ಉತ್ತಮ ರನ್ ಗಳಿಸಿದರು.
ಐರ್ಲೆಂಡ್ ವಿರುದ್ಧ ರಿಷಭ್ ಪಂತ್ 26 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿ ಭಾರತಕ್ಕೆ ಸುಲಭ ಗೆಲುವು ತಂದುಕೊಟ್ಟರು. ಪಂದ್ಯವನ್ನು ಮುಗಿಸಲು ಜೋಶ್ವಾ ಲಿಟಲ್ ವಿರುದ್ಧ ಅತ್ಯುತ್ತಮ ರಿವರ್ಸ್ ಸ್ಕೂಪ್ ಸಿಕ್ಸರ್ ನೆನಪಿಡುವ ಅಂಶಗಳಲ್ಲಿ ಒಂದು.
ಈ ಟಿ20 ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ರಿಷಭ್ ಪಂತ್ ಭಾರತದ 3ನೇ ಕ್ರಮಾಂಕದ ಬ್ಯಾಟರ್ ಆಗಲಿದ್ದಾರೆ ಎಂದು ವಿಕ್ರಮ್ ರಾಥೋರ್ ಹೇಳಿದ್ದಾರೆ. "ಹೌದು, ಪಂತ್ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಆಡಿದ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಈ ಸಮಯದಲ್ಲಿ ಎಡಗೈ ಬ್ಯಾಟರ್ ಆಗಿರುವ ಕಾರಣ ರಿಷಭ್ ಪಂತ್ ನಮ್ಮ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ," ಎಂದು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications