For Quick Alerts
ALLOW NOTIFICATIONS  
For Daily Alerts
 

ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡುತ್ತಿರುವ 7 ಆಟಗಾರರು

2026ರ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಹಾಲಿ ಚಾಂಪಿಯನ್ ಪಟ್ಟವನ್ನು ಹೊಂದಿರುವ ಭಾರತ, ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದಾರೆ. ಬಿಸಿಸಿಐ ಘೋಷಿಸಿರುವ ತಂಡದಲ್ಲಿ 7 ಆಟಗಾರರು ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ಐಸಿಸಿ ಮೆಗಾ ಈವೆಂಟ್‌ ಆಡುತ್ತಿರುವ ಆ 7 ಆಟಗಾರರು ಯಾರು ಎಂಬ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾ ಟಿ20 ವಿಶ್ವಕಪ್‌ಗೆ ಅಳೆದು ತೂಗಿ ಆಟಗಾರರನ್ನು ಆಯ್ಕೆ ಮಾಡಿದೆ. ಘೋಷಿಸಿದ ತಂಡದಲ್ಲಿ ಭರವಸೆಯ ಆಟಗಾರ ಶುಭಮನ್‌ ಗಿಲ್ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. 15 ಸದಸ್ಯರ ತಂಡದಲ್ಲಿ ಕಳೆದ ಬಾರಿ ಟಿ20 ವಿಶ್ವಕಪ್ ತಂಡದಲ್ಲಿ ಆಡಿದ ಹಲವು ಆಟಗಾರರು ಇದ್ದಾರೆ. ಇನ್ನು ಹಲವು ಯುವ ಆಟಗಾರರು ಇದೇ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಪಡೆದಿದ್ದು, ತಮ್ಮ ಕ್ಷಮತೆಯನ್ನು ಬಿಗ್ ಟೂರ್ನಿಯಲ್ಲಿ ಸಾಬೀತು ಪಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

T20 World Cup 2026 7 Indian Players Set for Debut in the Mega Event Under Surya s Leadership

ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಂಡಿರುವ ಆಟಗಾರರ ಪಟ್ಟಿಯಲ್ಲಿ ಯುವಕರ ದಂಡೇ ಇದೆ. ಟಿ20 ಕ್ರಿಕೆಟ್‌ನ ಸ್ಫೋಟಕ ಬ್ಯಾಟರ್ ಅಭಿಷೇಕ್‌ ಶರ್ಮಾ ಸಹ ಇದೇ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಆಡುತ್ತಿದ್ದಾರೆ. ಇವರಲ್ಲದೆ, ತಿಲಕ್ ವರ್ಮಾ, ರಿಂಕು ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್ ಮತ್ತು ಇಶಾನ್ ಕಿಶಾನ್ ಈ ಲೀಸ್ಟ್‌ನಲ್ಲಿ ಕಾಣಿಸಿಕೊಳ್ಳುವ ಆಟಗಾರರು. ಈ ಆಟಗಾರರು ಮೆಗಾ ಇವೆಂಟ್‌ನಲ್ಲಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಲು ಯೋಜನೆ ರೂಪಿಸಿಕೊಂಡಿದ್ದಾರೆ.

ಇವರ ಮೇಲೆ ಕಣ್ಣು

ಯುವ ಆಟಗಾರ ಅಭಿಷೇಕ್‌ ಶರ್ಮಾ ಅವರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿರಲಿವೆ. ಇವರು ಸ್ಪೋಟಕ ಆಟದಿಂದಲೇ ಎದುರಾಳಿ ಬೌಲರ್‌ಗಳಿಗೆ ಕಾಡುವ ಕ್ಷಮತೆಯನ್ನು ಹೊಂದಿದ್ದಾರೆ. ಇವರು ಬಿಗ್ ಹಿಟ್ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸುತ್ತಾ ಸಾಗಿಸಬಲ್ಲರು. ಅಲ್ಲದೆ ಇವರು ಸದ್ಯ ಟಿ20 ಸ್ವರೂಪದಲ್ಲಿ ನಂಬರ್ 1 ಬ್ಯಾಟರ್‌ ಎಂಬ ಹಣೆ ಪಟ್ಟಿ ಹೊಂದಿದ್ದಾರೆ. ಇನ್ನು ಸ್ಪಿನ್ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ವರುಣ್‌ ಚಕ್ರವರ್ತಿ ಅವರ ಮೇಲೂ ಎಲ್ಲರ ಕಣ್ಣುಗಳು ನೆಟ್ಟಿರಲಿವೆ. ಇವರು ಸಹ ಟಿ20 ಸ್ವರೂಪದಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಸಹ ರನ್‌ಗಳಿಗೆ ಕಡಿವಾಣ ಹಾಕಿ ವಿಕೆಟ್‌ ಬೇಟೆ ನಡೆಸಬಲ್ಲರು.

ಟಿ20 ವಿಶ್ವಕಪ್‌ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್ (ಉಪನಾಯಕ), ಜಸ್‌ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ಅರ್ಷ್‌ದೀಪ್ ಸಿಂಗ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ವಷಿಂಗ್‌ಟನ್ ಸುಂದರ್, ವಷಿಂಗ್ಟನ್ ಸುಂದರ್.

Story first published: Saturday, December 20, 2025, 20:05 [IST]
Other articles published on Dec 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+