ಟಿ20 ವಿಶ್ವಕಪ್ 2026 ಸಂಪೂರ್ಣ ವೇಳಾಪಟ್ಟಿ: 4 ಗುಂಪುಗಳ ಪಂದ್ಯಗಳ ವಿವರ
ಭಾರತ ಹಾಗೂ ಶ್ರೀಲಂಕಾದಲ್ಲಿ ಟಿ20 ವಿಶ್ವಕಪ್ 2026ರ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ರೋಹಿತ್ ಶರ್ಮಾ ಅವರನ್ನು ಟಿ20 ವಿಶ್ವಕಪ್‌ಗೆ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಸಿಸಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತದ 5 ಹಾಗೂ ಶ್ರೀಲಂಕಾದ 3 ನಗರಗಳಲ್ಲಿ ಟಿ20 ವಿಶ್ವಕಪ್ ಆಯೋಜಿಸಲಾಗುತ್ತಿದೆ. ಈ ಬಾರಿ ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಅಲ್ಲದೆ ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ.
ಫೆಬ್ರವರಿ 7 ರಿಂದ ಆರಂಭವಾಗುವ ಟೂರ್ನಿ ಮಾರ್ಚ್ 8ರ ವರೆಗೆ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನು ಒಂದೇ ಗುಂಪಿನಲ್ಲಿ ಸೇರಿಸಲಾಗಿದೆ. ಅಲ್ಲದೆ 4 ಗುಂಪುಗಳಲ್ಲಿ ತಂಡಗಳನ್ನು ವಿಂಗಡಿಸಲಾಗಿದ್ದು, ಪ್ರತಿ ಗುಂಪಿನಲ್ಲಿ 5 ತಂಡಗಳು ಸ್ಥಾನ ಪಡೆದಿವೆ. ಗುಂಪು ಹಂತದಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು, ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲಿವೆ. ಸೂಪರ್ 8 ಹಂತದಲ್ಲೂ 2 ಗುಂಪುಗಳಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತದೆ. ಈ ವೇಳೆ ಎರಡು ಗುಂಪುಗಳಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಪರಿಸ್ಥಿತಿ ಉದ್ವಿಗ್ನತೆಯಿಂದ ಪಾಕ್ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಈ ಮೊದಲೇ ಬಿಸಿಸಿಐ ಹಾಗೂ ಪಿಸಿಬಿಗಳು ಈ ಬಗ್ಗೆ ಐಸಿಸಿಗೆ ಮನವಿಯನ್ನು ಸಲ್ಲಿಸಿದ್ದವು. ಹೀಗಾಗಿಯೇ ಪಾಕ್ ಆಯೋಜಿತ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ, ಭಾಗವಹಿಸದೆ ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿತ್ತು. ಅಂತೆಯೇ ಇತ್ತೀಚಿಗೆ ನಡೆದ ಏಷ್ಯ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಆಯೋಜನೆ ಭಾರತದ್ದಾಗಿತ್ತು. ಬಳಿಕ ಎಲ್ಲ ಪಂದ್ಯಗಳನ್ನು ಯುಎಇನಲ್ಲಿ ಆಡಿಸಲಾಯಿತು. ಅಂತೆಯೇ ಪಾಕ್ 2026 ಟಿ20 ವಿಶ್ವಕಪ್‌ಗೂ ಭಾರತದ ಪ್ರವಾಸವನ್ನು ಬೆಳೆಸುವುದಿಲ್ಲ. ತನ್ನ ಎಲ್ಲ ಪಂದ್ಯಗಳನ್ನು ಲಂಕಾದಲ್ಲಿ ಆಡಲಿದೆ.
ಫೆ.15 ರಂದು ಬಿಗ್ ಫೈಟ್
ಪಾಕ್ ತಂಡ ಸೂಪರ್ 8 ನಿಂದ ಮುಂದೆ ಅಂದರೆ ಸೆಮಿಫೈನಲ್ ಹಂತವನ್ನು ತಲುಪುವಲ್ಲಿ ವಿಫಲರಾದರೆ, ಎಲ್ಲ ಪಂದ್ಯಗಳು ಭಾರತದಲ್ಲೇ ನಡೆಯಲಿವೆ. ಒಂದು ವೇಳೆ ಪಾಕ್ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಲ್ಲಿ ಆ ಪಂದ್ಯಗಳು ಕೋಲಂಬೊದಲ್ಲಿ ನಡೆಯಲಿದೆ. ಈ ವರ್ಷದಲ್ಲೇ ಭಾರತ ಹಾಗೂ ಪಾಕಿಸ್ತಾನ ತಂಡಗಳು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಬಾರಿ ಮುಖಾಮುಖಿ ಆಗಿವೆ. ಹೀಗಾಗಿ ಫೆ.15 ರಂದು ನಡೆಯಲಿರುವ ಹೋರಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಗುಂಪು A – ಸಂಪೂರ್ಣ ವೇಳಾಪಟ್ಟಿ
| ದಿನಾಂಕ | ಪಂದ್ಯ | ಸ್ಥಳ | ಸಮಯ |
|---|---|---|---|
| ಫೆಬ್ರವರಿ 7 | ಪಾಕಿಸ್ತಾನ vs ನೆದರ್ಲೆಂಡ್ಸ್ | ಕೊಲಂಬೊ | 11:00 AM |
| ಫೆಬ್ರವರಿ 7 | ಭಾರತ vs ಯುಎಸ್‌ಎ | ಮುಂಬೈ | 7:00 PM |
| ಫೆಬ್ರವರಿ 10 | ಪಾಕಿಸ್ತಾನ vs ಯುಎಸ್‌ಎ | ಕೊಲಂಬೊ | 7:00 PM |
| ಫೆಬ್ರವರಿ 12 | ಭಾರತ vs ನಮೀಬಿಯಾ | ದೆಹಲಿ | 7:00 PM |
| ಫೆಬ್ರವರಿ 13 | ಯುಎಸ್‌ಎ vs ನೆದರ್ಲೆಂಡ್ಸ್ | ಚೆನ್ನೈ | 7:00 PM |
| ಫೆಬ್ರವರಿ 15 | ಯುಎಸ್‌ಎ vs ನಮೀಬಿಯಾ | ಚೆನ್ನೈ | 3:00 PM |
| ಫೆಬ್ರವರಿ 15 | ಭಾರತ vs ಪಾಕಿಸ್ತಾನ | ಕೊಲಂಬೊ | 7:00 PM |
| ಫೆಬ್ರವರಿ 18 | ಪಾಕಿಸ್ತಾನ vs ನಮೀಬಿಯಾ | ಕೊಲಂಬೊ | 3:00 PM |
| ಫೆಬ್ರವರಿ 18 | ಭಾರತ vs ನೆದರ್ಲೆಂಡ್ಸ್ | ಅಹಮದಾಬಾದ್ | 7:00 PM |
ಗುಂಪು B – ಸಂಪೂರ್ಣ ವೇಳಾಪಟ್ಟಿ
| ದಿನಾಂಕ | ಪಂದ್ಯ | ಸ್ಥಳ | ಸಮಯ |
|---|---|---|---|
| ಫೆಬ್ರವರಿ 8 | ಶ್ರೀಲಂಕಾ vs ಐರ್ಲೆಂಡ್ | ಕೊಲಂಬೊ | 7:00 PM |
| ಫೆಬ್ರವರಿ 9 | ಜಿಂಬಾಬ್ವೆ vs ಓಮನ್ | ಕೊಲಂಬೊ | 3:00 PM |
| ಫೆಬ್ರವರಿ 11 | ಆಸ್ಟ್ರೇಲಿಯಾ vs ಐರ್ಲೆಂಡ್ | ಕೊಲಂಬೊ | 3:00 PM |
| ಫೆಬ್ರವರಿ 12 | ಶ್ರೀಲಂಕಾ vs ಓಮನ್ | ಕ್ಯಾಂಡಿ | 11:00 AM |
| ಫೆಬ್ರವರಿ 13 | ಆಸ್ಟ್ರೇಲಿಯಾ vs ಜಿಂಬಾಬ್ವೆ | ಕೊಲಂಬೊ | 11:00 AM |
| ಫೆಬ್ರವರಿ 14 | ಐರ್ಲೆಂಡ್ vs ಓಮನ್ | ಕೊಲಂಬೊ | 11:00 AM |
| ಫೆಬ್ರವರಿ 16 | ಆಸ್ಟ್ರೇಲಿಯಾ vs ಶ್ರೀಲಂಕಾ | ಕ್ಯಾಂಡಿ | 7:00 PM |
| ಫೆಬ್ರವರಿ 19 | ಶ್ರೀಲಂಕಾ vs ಜಿಂಬಾಬ್ವೆ | ಕೊಲಂಬೊ | 3:00 PM |
| ಫೆಬ್ರವರಿ 20 | ಆಸ್ಟ್ರೇಲಿಯಾ vs ಓಮನ್ | ಕ್ಯಾಂಡಿ | 7:00 PM |
ಗುಂಪು C – ಸಂಪೂರ್ಣ ವೇಳಾಪಟ್ಟಿ
| ದಿನಾಂಕ | ಪಂದ್ಯ | ಸ್ಥಳ | ಸಮಯ |
|---|---|---|---|
| ಫೆಬ್ರವರಿ 7 | ವೆಸ್ಟ್ ಇಂಡೀಸ್ vs ಬಾಂಗ್ಲಾದೇಶ | ಕೋಲ್ಕತ್ತಾ | 3:00 PM |
| ಫೆಬ್ರವರಿ 8 | ಇಂಗ್ಲೆಂಡ್ vs ನೇಪಾಳ | ಮುಂಬೈ | 3:00 PM |
| ಫೆಬ್ರವರಿ 9 | ಬಾಂಗ್ಲಾದೇಶ vs ಇಟಲಿ | ಕೋಲ್ಕತ್ತಾ | 11:00 AM |
| ಫೆಬ್ರವರಿ 11 | ಇಂಗ್ಲೆಂಡ್ vs ವೆಸ್ಟ್ ಇಂಡೀಸ್ | ಮುಂಬೈ | 7:00 PM |
| ಫೆಬ್ರವರಿ 14 | ಇಂಗ್ಲೆಂಡ್ vs ಬಾಂಗ್ಲಾದೇಶ | ಕೋಲ್ಕತ್ತಾ | 3:00 PM |
| ಫೆಬ್ರವರಿ 15 | ವೆಸ್ಟ್ ಇಂಡೀಸ್ vs ನೇಪಾಳ | ಮುಂಬೈ | 11:00 AM |
| ಫೆಬ್ರವರಿ 16 | ಇಂಗ್ಲೆಂಡ್ vs ಇಟಲಿ | ಕೋಲ್ಕತ್ತಾ | 3:00 PM |
| ಫೆಬ್ರವರಿ 17 | ಬಾಂಗ್ಲಾದೇಶ vs ನೇಪಾಳ | ಮುಂಬೈ | 7:00 PM |
| ಫೆಬ್ರವರಿ 19 | ವೆಸ್ಟ್ ಇಂಡೀಸ್ vs ಇಟಲಿ | ಕೋಲ್ಕತ್ತಾ | 11:00 AM |
ಗುಂಪು D – ಸಂಪೂರ್ಣ ವೇಳಾಪಟ್ಟಿ
| ದಿನಾಂಕ | ಪಂದ್ಯ | ಸ್ಥಳ | ಸಮಯ |
|---|---|---|---|
| ಫೆಬ್ರವರಿ 8 | ನ್ಯೂಜಿಲೆಂಡ್ vs ಅಫ್ಘಾನಿಸ್ತಾನ | ಚೆನ್ನೈ | 11:00 AM |
| ಫೆಬ್ರವರಿ 9 | ದಕ್ಷಿಣ ಆಫ್ರಿಕಾ vs ಕೆನಡಾ | ಅಹಮದಾಬಾದ್ | 7:00 PM |
| ಫೆಬ್ರವರಿ 10 | ನ್ಯೂಜಿಲೆಂಡ್ vs ಯುಎಇ | ಚೆನ್ನೈ | 3:00 PM |
| ಫೆಬ್ರವರಿ 11 | ದಕ್ಷಿಣ ಆಫ್ರಿಕಾ vs ಅಫ್ಘಾನಿಸ್ತಾನ | ಅಹಮದಾಬಾದ್ | 11:00 AM |
| ಫೆಬ್ರವರಿ 13 | ಕೆನಡಾ vs ಯುಎಇ | ದೆಹಲಿ | 3:00 PM |
| ಫೆಬ್ರವರಿ 14 | ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ | ಅಹಮದಾಬಾದ್ | 7:00 PM |
| ಫೆಬ್ರವರಿ 16 | ಅಫ್ಘಾನಿಸ್ತಾನ vs ಯುಎಇ | ದೆಹಲಿ | 11:00 AM |
| ಫೆಬ್ರವರಿ 17 | ನ್ಯೂಜಿಲೆಂಡ್ vs ಕೆನಡಾ | ಚೆನ್ನೈ | 11:00 AM |
| ಫೆಬ್ರವರಿ 18 | ದಕ್ಷಿಣ ಆಫ್ರಿಕಾ vs ಯುಎಇ | ದೆಹಲಿ | 11:00 AM |
| ಫೆಬ್ರವರಿ 19 | ಅಫ್ಘಾನಿಸ್ತಾನ vs ಕೆನಡಾ | ಚೆನ್ನೈ | 7:00 PM |
ಮಾ.8ರಂದು ಫೈನಲ್
ಟಿ20 ವಿಶ್ವಕಪ್ 2026ರ ಮೊದಲ ಸೆಮಿಫೈನಲ್ ಪಂದ್ಯ ಮಾರ್ಚ್ 4 ರಂದು, ಎರಡನೇ ಸೆಮಿಫೈನಲ್ ಪಂದ್ಯ ಮಾರ್ಚ್ 5 ರಂದು ನಡೆದರೆ, ಮಾರ್ಚ್ 8 ರಂದು ಫೈನಲ್ ಪಂದ್ಯ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications