T20 World Cup ಭಾರತ ಸೆಮಿಫೈನಲ್ ಪಂದ್ಯವನ್ನು ಮುಂಬೈನಲ್ಲಿ ಆಡುವುದು ಪಾಕ್ ಆಟದ ಮೇಲೆ ಅವಲಂಬನೆ
ಬೆಂಗಳೂರು: ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಲೀಗ್ ಹಂತದ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಸೂರ್ಯಕುಮಾರ್ ಪಡೆ ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ಕಾದಾಟ ನಡೆಸಲಿದೆ. ಭಾರತ ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ. ಅಲ್ಲದೆ ತವರಿನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಆಸೆಯನ್ನು ಹೊಂದಿದೆ. ಆದರೆ ಭಾರತ ಟೂರ್ನಿಯ ಸೆಮಿಫೈನಲ್ ಹಂತದ ಪಂದ್ಯವನ್ನು ಮುಂಬೈನಲ್ಲಿ ಆಡುತ್ತದಾ ಎಂಬುದು ಪಾಕಿಸ್ತಾನ ತಂಡದ ಪ್ರದರ್ಶನದ ಮೇಲೆ ಅವಲಂಬನೆ ಆಗಿದೆ.
ಭಾರತ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಐತಿಹಾಸಿಕ ವಾಂಖೆಡೆ ಅಂಗಳದಲ್ಲಿ ಆಡುವ ಕನಸು ಕಾಣುತ್ತಿದೆ. ಸೂಪರ್ 8 ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸೆಮಿಫೈನಲ್ ಹಂತವನ್ನು ತಲುಪುವ ಆಸೆ ಭಾರತ ತಂಡದ್ದಾಗಿದೆ. ಮುಂಬೈನಲ್ಲಿ ಎರಡನೇ ಸೆಮಿಫೈನಲ್‌ನಲ್ಲಿ ನಡೆಯಲಿದೆ. ಭಾರತ ಸೆಮಿಫೈನಲ್ ಪಂದ್ಯವನ್ನು ಮುಂಬೈನಲ್ಲಿ ಆಡುತ್ತದೋ ಇಲ್ಲವೋ ಎಂಬುದು ಪಾಕಿಸ್ತಾನ ತಂಡದ ಆಟದ ಮೇಲೆ ಅವಲಂಬಿತವಾಗಿದೆ.

ಸೂಪರ್ 8 ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸಿದ್ದೇ ಆದಲ್ಲಿ ಭಾರತ ತನ್ನ ಸೆಮಿಫೈನಲ್ ಪಂದ್ಯವನ್ನು ಮುಂಬೈನಲ್ಲಿ ಆಡುವುದಿಲ್ಲ. ಸೆಮಿಫೈನಲ್ ಪಂದ್ಯಕ್ಕೆ ಪಾಕಿಸ್ತಾನ ಅರ್ಹತೆ ಪಡೆದಲ್ಲಿ ಭಾರತ ಈ ಪಂದ್ಯವನ್ನು ಆಡಲು ಆರ್ ಪ್ರೇಮದಾಸ್ ಮೈದಾನಕ್ಕೆ ಪ್ರಯಾಣ ಬೆಳೆಸಲಿದೆ.
ಏನಿದು ಸೆಮಿಫೈನಲ್ ಲೆಕ್ಕಾಚಾರ?
ಭಾರತ ಸೂಪರ್ 8 ಹಂತದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಅಗ್ರ ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದರೆ, ಪಾಕ್ ಬಿ ಗುಂಪಿನಿಂದ ಎರಡನೇ ಸ್ಥಾನದೊಂದಿಗೆ ಉಪಾಂತ್ಯ ಪ್ರವೇಶಿಸಿದರೆ, ಆಗ ಎರಡೂ ತಂಡಗಳು ಸೆಮಿಫೈನಲ್ ಪಂದ್ಯದಲ್ಲಿ ಫೈಟ್ ನಡೆಸುತ್ತವೆ. ಒಂದು ವೇಳೆ ಈ ಲೆಕ್ಕಾಚಾರ ನಿಜವಾದರೆ ಭಾರತ ತನ್ನ ಸೆಮುಫೈನಲ್ ಪಂದ್ಯವನ್ನು ಕೊಲಂಬೊದಲ್ಲಿ ಆಡಲಿದೆ. ಪ್ರಸಕ್ತ ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯ ಮಾರ್ಚ್ 4 ರಂದು ನಡೆಯಲಿದೆ. ಎರಡನೇ ಸೆಮಿಫೈನಲ್ ಪಂದ್ಯ ಮಾರ್ಚ್ 5 ರಂದು ನಡೆಯಲಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾದರೆ, ಆ ಪಂದ್ಯ ಶ್ರೀಲಂಕಾದ ಪ್ರೇಮದಾಸ್ ಮೈದಾನದಲ್ಲಿ ನಡೆಯಲಿದೆ. ಒಂದು ವೇಳೆ ಪಾಕಿಸ್ತಾನ ತಂಡ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದರೆ ಆ ಪಂದ್ಯ ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ. ಪಾಕ್ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆಯದೇ ಇದ್ದರೆ, ಇನ್ನೊಂದು ಸೆಮಿಫೈನಲ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ನಡೆಯಲಿದೆ.
ಭಾರತ, ಪಾಕಿಸ್ತಾನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಈ ಮೊದಲೇ ನಿರ್ಧರಿಸಲಾಗಿದೆ. ಬಿಸಿಸಿಐ ಹಾಗೂ ಪಾಕಿಸ್ತಾನ, ಐಸಿಸಿ ನಡುವೆ ನಡೆದ ತ್ರಿವಳಿ ಒಪ್ಪಂದದಿಂದ ಭಾರತ ಹಾಗೂ ಪಾಕ್ ತಂಡಗಳು 2027ರ ವರೆಗೆ ಹೈಬ್ರಿಡ್ ಮಾಡೆಲ್‌ನಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications