T20 World Cup 2026: ಟಿ-20 ವಿಶ್ವಕಪ್ 2026 ಟೂರ್ನಿ ಈಗಾಗಲೇ ಆರಂಭವಾಗಿದ್ದು, ಇಂದು (ಫೆಬ್ರವರಿ 8) ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ಕಾದಾಡಲಿವೆ. ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಕಿವೀಸ್ ತಂಡವು ತಮ್ಮ ಹಲವು ಸ್ಟಾರ್ ಗಾಯದಿಂದ ಬಳಲುತ್ತಿದ್ದರೂ ಇಂದಿನ ಪಂದ್ಯದಲ್ಲಿ 2024ರ ಸೇಡು ತೀರಿಸಿಕೊಳ್ಳಲು ಹೊರಟಿದೆ. ಮತ್ತೊಂದೆಡೆ, ಹಿನ್ನಡೆ ಅನುಭವಿಸುವ ಆತಂಕವನ್ನೂ ಕೂಡ ಎದುರಿದುತ್ತಿದೆ.
ನ್ಯೂಜಿಲೆಂಡ್ ಶನಿವಾರ ಚೆನ್ನೈದ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಕಾದಾಡಲಿದೆ. 2024 ಟೂರ್ನಮೆಂಟ್‌ನಲ್ಲಿ ಇದೇ ತಂಡ ವಿರುದ್ಧ 84 ರನ್‌ಗಳಿಂದ ಭಾರೀ ಸೋಲು ಅನುಭವಿಸಿದ ಕಿವೀಸ್ ಇಂದಿನ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳಲು ಕಾತರದಲ್ಲಿದೆ. ಆದರೆ, ತಂಡದಲ್ಲಿ ಹಲವರು ಗಾಯದಿಂದ ಬಳಲುತ್ತಿರುವುದೇ ದೊಡ್ಡ ಸವಲಾಗಿ ಪರಿಣಮಿಸಿದೆ. ಇದೇ ಅಫ್ಘಾನಿಸ್ತಾನಕ್ಕೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.

ಅತ್ಯಂತ ಮಹತ್ವದ ಪಂದ್ಯ: 2024ರಲ್ಲಿ ಗಯಾನಾದಲ್ಲಿ ನಡೆದ ಪಂದ್ಯವು ಎರಡೂ ತಂಡಗಳಿಗೂ ಮಹತ್ವದಾಗಿತ್ತು. ಈ ವೇಳೆ ಅಫ್ಘಾನಿಸ್ತಾನದ ಭರ್ಜರಿ ಜಯದಿಂದ ನ್ಯೂಜಿಲೆಂಡ್ ಸೆಮಿಫೈನಲ್ ಓಟದಿಂದ ನಡೆಯುವಂತಾಯಿತು. ಅಂದಿನಿಂದ ಈ ತಂಡಗಳ ನಡುವೆ ಯಾವುದೇ ಪಂದ್ಯಗಳಿಲ್ಲದ ಕಾರಣ, ಇಂದಿನ ವಿಶ್ವಕಪ್ 2026 ಪಂದ್ಯಾವಳಿ ಅತ್ಯಂತ ಮಹತ್ವ ಪಡೆಯಲಿದೆ ಅಂದರೆ ತಪ್ಪಾಗಲಾರದು.
ಗಾಯದ ಸಂಕಷ್ಟ ಎದುರಿಸುತ್ತಿರುವ ಕಿವೀಸ್: ಆದರೆ, ಭಾರತವನ್ನು ಎದುರಿಸಿದ ಸರಣಿಯಲ್ಲಿ ನ್ಯೂಜಿಲೆಂಡ್ ತಂಡದ ಹಲವು ಆಟಗಾರರು ಗಾಯಗೊಂಡಿದ್ದಾರೆ. ಸ್ಟಾರ್ ಆಟಗಾರರಾದ ರಚಿನ್ ರವೀಂದ್ರ, ಡೆವೊನ್ ಕಾನ್ವೆ, ಆಲ್-ರೌಂಡರ್ ಮೈಕೆಲ್ ಬ್ರೇಸ್‌ವೆಲ್, ವೇಗಿ ಲಾಕಿ ಫರ್ಗುಸನ್ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ಓಪನರ್ ಫಿನ್ ಅಲೆನ್ ಭುಜದ ಗಾಯದಿಂದ ಬಳಲುತ್ತಿದ್ದಾರೆ. ಇದರ ಲಾಭವನ್ನು ಅಪ್ಘಾನಿಸ್ತಾನ ತಂಡ ಪಡೆದುಕೊಳ್ಳಲಿದ್ಯಾ ಎಂದು ಕಾದುನೋಡಬೇಕಿದೆ.
ಇನ್ನೂ ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನವು ಗಾಯದ ಸಂಕಷ್ಟಕ್ಕೆ ಒಳಗಾಗಿರುವ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. 2024ರಲ್ಲಿನ 84 ರನ್‌ಗಳ ವಿರೋಚಿತ ಸೋಲಿನ ನಂತರ, ನ್ಯೂಜಿಲೆಂಡ್ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅಫ್ಘಾನಿಸ್ತಾನ ಈ ನಿರ್ಣಾಯಕ ಗ್ರೂಪ್ ಡಿ ಪಂದ್ಯದಲ್ಲಿ ತಮ್ಮ ಎದುರಾಳಿಗಳ ಫಿಟ್‌ನೆಸ್ ಕಾಳಜಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ ಎನ್ನಲಾಗುತ್ತಿದೆ.