T20 World Cup 2026: ಟಿ20 ವಿಶ್ವಕಪ್ 2026ರ ಪಂದ್ಯದಲ್ಲಿ ಪಾಕಿಸ್ತಾನ ತಂಡ ಅಮೆರಿಕಾ ವಿರುದ್ಧ 32 ರನ್‌ಗಳ ಅಂತದಿಂದ ಜಯ ಸಾಧಿಸಿದೆ. ಈ ಮೂಲಕ ಎರಡನೇ ಗೆಲುವಿನೊಂದಿಗೆ ಪಾಕಿಸ್ತಾನ ಅಂಕಪಟ್ಟಿಯಲ್ಲಿ ನಾಲ್ಕು ಪಾಯಿಂಟ್ಸ್ ಪಡೆದು ಅಗ್ರಸ್ಥಾನ ಅಲಂಕರಿಸಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ9 ವಿಕೆಟ್ ನಷ್ಟಕ್ಕೆ 190 ರನ್‌ಗಳನ್ನು ಕಲೆಹಾಕಿತು. ಬಳಿಕ ಈ ಗುರಿ ಬೆನ್ನತ್ತಿದ್ದ ಯುಎಸ್‌ಎ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 158 ರನ್ ಗಳಿಸುವ ಮೂಲಕ 32 ರನ್‌ಗಳಿಂದ ಸೋಲನುಭವಿಸಿತು.

ಬೃಹತ್ ಮೊತ್ತ ಕಲೆಹಾಕಲು ಕಾರಣ: ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಕಲೆಹಾಕಿತು. ಪಾಕಿಸ್ತಾನ ಪರ ಸಾಹಿಬ್ಜಾದಾ ಫರ್ಹಾನ್ 73 (41), ಬಾಬರ್ ಆಜಂ 46 (32), ಶದಾಬ್ ಖಾನ್ 30(12) ರನ್‌ಗಳಿಂದ ತಂಡ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಇನ್ನುಳಿದವರು 20 ರನ್‌ಗಳ ಒಳಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಸೈಮ್ ಅಯೂಬ್ 19, ಸೈಮನ್ ಅಘಾ 1, ಮೊಹಮ್ಮದ್ ನವಾಜ್ 5, ಫಹೀಮ್ ಅಶ್ರಫ್ 1, ಅಬ್ರಾರ್ ಅಹ್ಮದ್ ಹಾಗೂ ಉಸ್ಮಾನ್ ಖಾನ್ 0ಗೆ ವಿಕೆಟ್ ಒಪ್ಪಿಸಿದರೆ, ಶಾಹೀನ್ ಆಫ್ರಿದಿ 9 ರನ್ ಹೊಡೆದು ಅಜೆಯರಾಗಿ ಉಳಿದರು. ಈ ಮೂಲಕ ಪಾಕಿಸ್ತಾನ 190 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಯುಎಸ್‌ಎ ಸೋಲಿಗೆ ಕಾರಣ: ಬಳಿಕ ಯುಎಸ್‌ಎ ಪರ ಬ್ಯಾಟ್ ಬೀಸಿದ, ಶುಭಮ್ ರಂಜನೆ ತಂಡದ ಪರ 51(30) ಗರಿಷ್ಠ ರನ್‌ಗಳನ್ನು ಬಾರಿಸಿದರು. ಶಯನ್ ಜಹಾಂಗೀರ್ 49(34) ಆಂಡ್ರೀಸ್ ಗೌಸ್ 13(13) ರನ್‌ಗಳಿಸಿದರೆ, ಉಳಿದವರು ಒಂದಂಕಿ ದಾಟಲಿಲ್ಲ. ಇದೇ ತಂಡದ ಸೋಲಿಗೆ ಬೌಲರ್‌ಗಳು ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟಿದ್ದೇ ತಂಡದ ಸೋಲಿಗೆ ಕಾರಣ ಅಂದರೆ ತಪ್ಪಾಗಲಾರದು. ಸೌರಭ್ ನೇತ್ರವಾಲ್ಕರ್ ನಾಲ್ಕು ಓವರ್ ಬೌಲಿಂಗ್ ಎಸೆದು ಬರೋಬ್ಬರಿ 40 ರನ್‌ಗಳನ್ನು ಕೊಟ್ಟರು. ಇನ್ನೂ ಆದಿಲ್ 39, ಮೊಹಮ್ಮದ್ ಮೊಹ್ಸಿನ್ 27 ರನ್‌ಗಳನ್ನು ಬಿಟ್ಟುಕೊಟ್ಟರು.
ಗುರಿ ಬೆನ್ನತ್ತಿದ ಅಮೆರಿಕಾ ತಂಡಕ್ಕೆ ಪಾಕಿಸ್ತಾನದ ಬೌಲರ್‌ಗಳು ಆರಂಭದಿಂದಲೇ ಒತ್ತಡ ಹೇರುತ್ತಾ ಬಂದರು. ಪವರ್‌ಪ್ಲೇ ಅವಧಿಯಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಅಮೆರಿಕಾ, ನಂತರವೂ ಸ್ಥಿರತೆ ಕಾಣಲು ವಿಫಲವಾಯಿತು. ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳು ಉತ್ತಮ ಪ್ರದರ್ಶನ ನೀಡಿದ ಪರಿಣಾಮ, ಅಮೆರಿಕಾ ತಂಡ ನಿಗದಿತ ಓವರ್‌ಗಳಲ್ಲಿ ಗುರಿ ತಲುಪಲು ಸಾಧ್ಯವಾಗಲಿಲ್ಲ. ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದ್ದೇ ಪಾಕಿಸ್ತಾನದ ಜಯಕ್ಕೆ ಪ್ರಮುಖ ಕಾರಣವಾಗಿದ್ದು, 32 ರನ್‌ಗಳ ಅಂತರದಲ್ಲಿ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.