ಟಿ20 ವಿಶ್ವಕಪ್ 2026: ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಪಾಕಿಸ್ತಾನಕ್ಕೆ ಇರುವುದು ಒಂದೇ ದಾರಿ
T20 World Cup 2026 Pakistan: ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026 ಗುಂಪು ಹಂತದ ಪಂದ್ಯದಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಹೀನಾಯ ಸೋಲು ಕಂಡಿದೆ. ಇದರ ಬೆನ್ನಲ್ಲೇ ಪಾಕ್ ತಂಡಕ್ಕೆ ಅಗ್ನಿ ಪರೀಕ್ಷೆ ಎದುರಾಗಿದೆ. ಇದರಲ್ಲಿ ಪಾಸಾದ್ರೆ ಮಾತ್ರ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ಸಾಧ್ಯತೆಯಿದೆ. ಇಲ್ಲದಿದ್ದರೆ ಟೂರ್ನಿಯಿಂದ ಹೊರಬೀಳುವುದು ಖಚಿತ ಎನ್ನುವಂತಾಗಿದೆ. ಹಾಗಾದ್ರೆ ಹೇಗೆ ಇದು ಲೆಕ್ಕಾವಚಾರ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
ಟಿ20 ವಿಶ್ವಕಪ್ 2026ರ ಮೊದಲ ಸುತ್ತಿನ ಪಂದ್ಯಗಳು ಅಂತಿಮ ಹಂತ ತಲುಪಿದ್ದು, ಗ್ರೂಪ್-ಎಯಲ್ಲಿ ಸ್ಪರ್ಧೆ ಮತ್ತಷ್ಟು ಕುತೂಹಲಕಾರಿಯಾಗುತ್ತಿದೆ. ಭಾರತವು ಆಡಿರುವ ಮೂರು ಪಂದ್ಯಗಳಲ್ಲೂ ಭರ್ಜರಿ ಗೆಲುವು ಸಾಧಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಉತ್ತಮ (3.05) ರನ್‌ರೇಟ್‌ನೊಂದಿಗೆ 6 ಅಂಕಗಳನ್ನು ಪಡೆದು ಅಗ್ರಸ್ಥಾನ ಅಲಂಕರಿಸಿದೆ. ಈ ಮೂಲಕ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ. ಆದರೆ, ಪಾಕಿಸ್ತಾನವು ಟೀಂ ಇಂಡಿಯಾ ವಿರುದ್ಧದ ಸೋಲಿನ ನಂತರ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯ ಎದುರಾಗಿದೆ.

ರನ್ ರೇಟ್‌ನಲ್ಲಿ ಕುಸಿದ ಪಾಕಿಸ್ತಾನ
ಹೌದು.. ಟೀಂ ಇಂಡಿಯಾ ಪ್ರಸ್ತುತ ಅಂಕಪಟ್ಟಿಯಲ್ಲಿ ಭಾರತ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಯುಎಸ್‌ಎ 4 ಪಂದ್ಯಗಳಲ್ಲಿ 2 ಜಯಗಳಿಸಿ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡ ಮೂರರಲ್ಲಿ ಎರಡು ಗೆಲುವಿನೊಂದಿಗೆ 4 ಅಂಕಗಳನ್ನು ಹೊಂದಿದ್ದರೂ, ಕಡಿಮೆ ನೆಟ್ ರನ್ ರೇಟ್‌ನಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನಕ್ಕಿಂತ ಉತ್ತಮ ನೆಟ್ ರನ್ ರೇಟ್ (0.788) ಹೊಂದಿರುವ ಯುಎಸ್‌ಎಗೆ ಹೋಲಿಸಿದರೆ, ಪಾಕ್ ತಂಡದ ನೆಟ್ ರನ್ ರೇಟ್ -0.403ಕ್ಕೆ ಕುಸಿದಿದೆ.
ಪಾಕಿಸ್ತಾನದ ಮುಂದಿದೆ ದೊಡ್ಡ ಸವಾಲು
ಪಾಕಿಸ್ತಾನಕ್ಕೆ ಇನ್ನೊಂದು ಪಂದ್ಯ ಮಾತ್ರ ಬಾಕಿ ಇದ್ದು, ನಮೀಬಿಯ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಯಾವುದೇ ಲೆಕ್ಕಾಚಾರವಿಲ್ಲದೆ ಸೂಪರ್ 8 ಹಂತಕ್ಕೇರಲಿದೆ. ಒಂದು ವೇಳೆ ಪಂದ್ಯ ರದ್ದಾದರೂ, ಉಭಯ ತಂಡಗಳಿಗೆ ತಲಾ ಒಂದು ಅಂಕ ಸಿಗುವುದರಿಂದ ಪಾಕಿಸ್ತಾನ 5 ಅಂಕಗಳೊಂದಿಗೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ಸಾಧ್ಯತೆಯಿದೆ. ಹೇಗೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.
ಒಂದು ವೇಳೆ ನಮೀಬಿಯ ವಿರುದ್ಧ ಪಾಕಿಸ್ತಾನ ಸೋಲು ಕಂಡರೆ, ಅಂಕಗಳು ಸಮನಾಗಿದ್ದರೂ ಉತ್ತಮ ನೆಟ್ ರನ್ ರೇಟ್ ಹೊಂದಿರುವ ಯುಎಸ್‌ಎ ತಂಡಕ್ಕೆ ಸೂಪರ್ 8 ಪ್ರವೇಶ ಪಡೆಯಲಿದೆ. ಆದ್ದರಿಂದ ಫೆಬ್ರವರಿ 18ರಂದು ನಡೆಯಲಿರುವ ಈ ಪಂದ್ಯವು ಪಾಕಿಸ್ತಾನದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಆಗಿದೆ. ಇದರಲ್ಲಿ ಗೆಲುವು ಸಾಧಿಸಿದರೆ ಮಾತ್ರ ಟೂರ್ನಿಯಲ್ಲಿ ಮುಂದುವರಿಯಲು ಸಾಧ್ಯ. ಇಲ್ಲದಿದ್ದರೆ ಹೊರಬೀಳುವುದು ಖಚಿತ ಎನ್ನುವಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications