ಭಾರತದ ವಿರುದ್ಧದ ಪಂದ್ಯ ಬಹಿಷ್ಕರಿಸಲು ಪಾಕ್ ಸಿದ್ಧತೆ: ಐಸಿಸಿ ಎಚ್ಚರಿಕೆ
ನವದೆಹಲಿ: ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಈ ವೇಳೆ ಐಸಿಸಿ ಮೆಗಾ ಟೂರ್ನಿಯಲ್ಲಿ ಪಾಕಿಸ್ತಾನ ಭಾಗವಹಿಸುವ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಪಾಕಿಸ್ತಾನ ಟಿ20 ವಿಶ್ವಕಪ್ 2026ರಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಸಜ್ಜಾಗಿದೆ ಎಂದು ತಿಳಿದು ಬಂದಿದೆ.
ಜಿಯೋ ನ್ಯೂಸ್ ಹಾಗೂ ಪಾಕ್ ಮಾಧ್ಯಮ ವರದಿಗಳಂತೆ, ಪಾಕಿಸ್ತಾನ ಸರ್ಕಾರಕ್ಕೆ ಸೇರಿದ ಅಧಿಕೃತ ಪ್ರಕಟಣೆಯಿಂದ ಈ ನಿರ್ಧಾರ ಬಂದಿದೆ. ಪ್ರಕಟಣೆಯಲ್ಲಿ ಪಾಕಿಸ್ತಾನಕ್ಕೆ ಟಿ20 ವಿಶ್ವಕಪ್ ಆಡಲು ಅನುಮತಿ ನೀಡಲಾಗಿದೆ. ಆದರೆ ಫೆ.15 ರಂದು ಭಾರತದ ವಿರುದ್ಧದ ಪಂದ್ಯದಲ್ಲಿ ಮೈದಾನಕ್ಕೆ ಇಳಿಯುವುದಿಲ್ಲ ಎಂದು ವರದಿಯಾಗಿದೆ.

ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸದಿರುವ ಬಗ್ಗೆ ಚರ್ಚೆಗಳು ಬಾಂಗ್ಲಾದೇಶ ಟೂರ್ನಿಯಿಂದ ಹೊರ ಬಿದ್ದ ಬಳಿಕ ಆರಂಭವಾದವು. ಭಾರತದಲ್ಲಿ ಭದ್ರತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶ ಟಿ20 ವಿಶ್ವಕಪ್‌ನಲ್ಲಿ ಆಡದಿರಲು ನಿರ್ಧರಿಸಿತ್ತು. ಅಲ್ಲದೆ ಬಾಂಗ್ಲಾ ಗುಂಪು ಹಾಗೂ ಸ್ಥಳವನ್ನು ಬದಲಿಸುವಂತೆ ಐಸಿಸಿಗೆ ಮನವಿಯನ್ನು ಮಾಡಿಕೊಂಡಿತ್ತು. ಪಾಕಿಸ್ತಾನ ಆರಂಭದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಬಹಿಷ್ಕಾರದ ಬೆದರಿಕೆ ಒಡ್ಡಿತು. ಆದರೆ ಈಗ ಬರುತ್ತಿರುವ ಮಾಹಿತಿಗಳ ಪ್ರಕಾರ ಭಾರತದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಹೇಳಿದೆ.
ಪಾಕ್ ಭಾರತದ ವಿರುದ್ಧ ಪಂದ್ಯ ಬಹಿಷ್ಕರಿಸಿದರೆ...
ಒಂದು ವೇಳೆ ಪಾಕಿಸ್ತಾನ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ, ಟೀಮ್ ಇಂಡಿಯಾಕ್ಕೆ ಇದರ ಸಂಪೂರ್ಣ ಲಾಭವಾಗುತ್ತದೆ. ಅಲ್ಲದೆ ಸುಲಭವಾಗಿ 2 ಅಂಕಗಳು ಲಭಿಸುತ್ತವೆ. ಮತ್ತು ಸೂಪರ್ 8 ಹಂತಕ್ಕೆ ತಲುಪುವ ಹಾದಿ ಸಹ ಸುಗಮವಾಗುತ್ತದೆ. ಪಾಕಿಸ್ತಾನ ಭಾರತದೊಂದಿಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಐಸಿಸಿ ಎಚ್ಚರಿಕೆ
ಇನ್ನು ಐಸಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ (ಪಿಸಿಬಿ) ಅಧಿಕೃತ ಹೇಳಿಕೆಗಾಗಿ ಕಾಯುತ್ತಿದೆ. ವಿಶ್ವಕಪ್‌ನಂತಹ ಯಾವುದೇ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ, ಎಲ್ಲಾ ಅರ್ಹತಾ ತಂಡಗಳು ನಿಗದಿತ ವೇಳಾಪಟ್ಟಿಯ ಪ್ರಕಾರ ಸಮಾನ ಪಂದ್ಯಗಳಲ್ಲಿ ಸ್ಪರ್ಧಿಸುತ್ತವೆ ಎಂದು ಐಸಿಸಿ ಹೇಳಿದೆ. ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಐಸಿಸಿ ಎಚ್ಚರಿಸಿದೆ.
ಪಾಕಿಸ್ತಾನ ಒಂದು ವೇಳೆ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದರೆ, ಐಸಿಸಿ ಕಠಿಣ ಕ್ರಮಕೈಗೊಳ್ಳಬಹುದಾಗಿದೆ. ಐಸಿಸಿ ಪಾಕಿಸ್ತಾನದ ಮೇಲೆ ವಿವಿಧ ರೀತಿಯ ನಿಷೇಧಗಳನ್ನು ವಿಧಿಸಬಹುದಾಗಿದೆ.
ಪಾಕಿಸ್ತಾನ ತಂಡದ ವೇಳಾಪಟ್ಟಿ
ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಟಿ20 ವಿಶ್ವಕಪ್ ಆಯೋಜಿಸುತ್ತಿವೆ. ಈ ಟೂರ್ನಿಯಲ್ಲಿ ಪಾಕಿಸ್ತಾನ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಪಾಕಿಸ್ತಾನ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಪಾಕ್ ತನ್ನ ಮೊದಲ ಪಂದ್ಯವನ್ನು ಫೆ.7 ರಂದು ನೆದರ್ಲೆಂಡ್ಸ್ ವಿರುದ್ಧ, ಫೆ.10 ರಂದು ಯುಎಸ್‌ಎ ವಿರುದ್ಧ, ಫೆ.15 ರಂದು ಭಾರತದ ವಿರುದ್ಧ, ಫೆ.18 ರಂದು ನಮೀಬಿಯಾ ವಿರುದ್ಧ ಲೀಗ್ ಹಂತದ ಪಂದ್ಯಗಳನ್ನು ಆಡಲಿದೆ.
ಟಿ20 ವಿಶ್ವಕಪ್‌ಗೆ ಪ್ರಕಟಿತ ಪಾಕ್ ತಂಡ: ಸಲ್ಮಾನ್ ಅಲಿ ಅಗಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಅಜಮ್, ಫಹೀಮ್ ಅಶ್ರಫ್, ಫಖರ್ ಜಮಾನ್, ಖವಾಜಾ ಮೊಹಮ್ಮದ್ ನಫೆ, ಮೊಹಮ್ಮದ್ ನವಾಜ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ನಸೀಮ್ ಶಾ, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಶಾಹೀನ್ ಶಾ ಅಫ್ರಿದಿ, ಶಾದಾಬ್ ಖಾನ್, ಉಸ್ಮಾನ್ ಖಾನ್, ಉಸ್ಮಾನ್ ತಾರಿಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications