ಟಿ20 ವಿಶ್ವಕಪ್ 2021: ಅಫ್ಘಾನಿಸ್ತಾನದ ವಿರುದ್ಧ ರನ್ ಮಳೆ ಸುರಿಸಿದ ಟೀಮ್ ಇಂಡಿಯಾ

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಅಫ್ಘಾನಿಸ್ತಾನದ ವಿರುದ್ಧ ರನ್ ಸುರಿಮಳೆ ಹರಿಸಿದೆ. ನಿಗದಿತ 20 ಓವರ್‌ಗಳಲ್ಲಿ ಭಾರತ ಕೇವಲ 2 ವಿಕೆಟ್ ಕಳೆದುಕೊಂಡು 210 ರನ್‌ಗಳಿಸಿದೆ. ಈ ಮೂಲಕ ಅಫ್ಘಾನಿಸ್ತಾನ ತಂಡಕ್ಕೆ ಬೃಹತ್ ಗುರಿಯನ್ನು ನೀಡಿದೆ. ಭಾರತದ ಆರಂಭಿಕ ಆಟಗಾರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಶತಕದ ಜೊತೆಯಾಟ ನೀಡಿದ್ದಾರೆ. ಅಂತಿಮ ಹಂತದಲ್ಲಿ ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ಕೂಡ ಸ್ಟೋಟಕ ಆಟವನ್ನು ಪ್ರದರ್ಶಿಸಿದರು.
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ಟೀಮ್ ಇಂಡಿಯಾ ಆರಂಭದಿಂದಲೇ ಅದ್ಭುತ ಆಟವನ್ನು ಪ್ರದರ್ಶಿಸಿತು. ಟೀಮ್ ಇಂಡಿಯಾದ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅಫ್ಘಾನಿಸ್ತಾನದ ಬೌಲರ್‌ಗಳ ಮೇಲೆ ಅಬ್ಬರಿಸಲು ಆರಂಬಿಸಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ ಭರ್ಜರಿ 140 ರನ್‌ಗಳ ಜೊತೆಯಾಟ ನಿಡಿದ ಬಳಿಕ ಬೇರ್ಪಟ್ಟಿತು. 47 ಎಸೆತಗಳಲ್ಲಿ 74 ರನ್ ಸಿಡಿಸಿದ ರೋಹಿತ್ ಶರ್ಮಾ ಕರಿಮ್ ಜನತ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ನಂತರ ಕೆಎಲ್ ರಾಹುಲ್ 69 ರನ್‌ಗಳಿಸಿ ಔಟಾಗಿ ಫೆವಿಲಿಯನ್ ಸೇರಿದರು.
ನಂತರ ಜೊತೆಯಾಗಿದ್ದು ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯ ರನ್ ವೇಗ ಮತ್ತಷ್ಟು ಹೆಚ್ಚಿಸುವ ಸಲುವಾಗಿ ನಾಯಕ ವಿರಾಟ್ ಕೊಹ್ಲಿ ಈ ಇಬ್ಬರು ಸ್ಪೋಟಕ ಆಟಗಾರರನ್ನು ಬೇಗನೆ ಕಣಕ್ಕಿಳಿಸಿದ್ದರು. ನಾಯಕನ ಈ ನಿರ್ಧಾರವನ್ನು ಇಬ್ಬರು ದಾಂಡಿಗರು ಕೂಡ ಸಮರ್ಥಿಸುವಂತೆ ಆಡಿದರು. ರಿಷಭ್ ಪಂತ್ 13 ಎಸೆತಗಳಲ್ಲಿ 27 ರನ್ ಸಿಡಿಸಿದರು. ಇದರಲ್ಲಿ ಮೂರು ಭರ್ಜರಿ ಸಿಕ್ಸರ್ ಹಾಗೂ ಒಂದು ಬೌಂಡರಿ ಒಂಗೊಂಡಿತ್ತು. ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 35 ರನ್ ಸಿಡಿಸಿದರು. ಪಾಂಡ್ಯ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿ ಮಿಂಚಿದರು. ಈ ಮೂಲಕ ನಿಗದಿತ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಭಾರತ 210 ರನ್ ಗಳಿಸಿದೆ.
ಇನ್ನು ಅಫ್ಘಾನಿಸ್ತಾನದ ಪರವಾಗಿ 7 ಬೌಲರ್‌ಗಳು ದಾಳಿಗಿಳಿದರು ಕೂಡ ಭಾರತೀತ ದಾಂಡಿಗರನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಪ್ರಮುಖ ಬೌಲರ್ ರಶೀದ್ ಖಾನ್ ಸೇರಿದಂತೆ ಎಲ್ಲ ಬೌಳರ್‌ಗಳು ಕೂಡ ಭಾರತೀಯ ಬ್ಯಾಟರ್‌ಗಳಿಂದ ದಂಡನೆಗೆ ಒಳಗಾದರು. ಅದರಲ್ಲೂ ನವೀನ್ ಉಲ್ ಹಕ್ 59 ರನ್ ನೀಡುವ ಮೂಲಕ ಅತ್ಯಂತ ದುಬಾರಿಯಾದರು. ನವೀನ್ ಉಲ್ ಹಕ್ ಹಾಗೂ ಕರೀಮ್ ಜನತ್ ತಲಾ ಒಂದು ವಿಕೆಟ್ ಸಂಪಾದಿಸಿದ್ದಾರೆ.
ಟೀಮ್ ಇಂಡಿಯಾ ಪ್ಲೇಯಿಂಗ್ XI : ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ(ನಾಯಕ), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಅಫ್ಘಾನಿಸ್ತಾನ ಪ್ಲೇಯಿಂಗ್ XI : ಹಜರತುಲ್ಲಾ ಝಜೈ, ಮೊಹಮ್ಮದ್ ಶಹಜಾದ್(ವಿಕೆಟ್ ಕೀಪರ್), ರಹಮಾನುಲ್ಲಾ ಗುರ್ಬಾಜ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ(ನಾಯಕ), ಗುಲ್ಬದಿನ್ ನೈಬ್, ಶರಫುದ್ದೀನ್ ಅಶ್ರಫ್, ರಶೀದ್ ಖಾನ್, ಕರೀಂ ಜನತ್, ನವೀನ್-ಉಲ್-ಹಕ್, ಹಮೀದ್ ಹಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications