ಟಿ20 ವಿಶ್ವಕಪ್ 2021: ಭಾರತ vs ಅಫ್ಘಾನಿಸ್ತಾನ, ಟಾಸ್ ರಿಪೋರ್ಟ್, Live ಸ್ಕೋರ್

ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡಕ್ಕೆ ಅಫ್ಘಾನಿಸ್ತಾನ ಎದುರಾಳಿಯಾಗಿ ಸವಾಲೊಡ್ಡಿದೆ. ಅಬುಧಾಬಿಯಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಭಾರತ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಇನ್ನು ಇಂದಿನ ಈ ಮಹತ್ವದ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳಲಾಗಿದೆ. ಕಳೆದ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಗುಳಿದಿದ್ದ ಸೂರ್ಯಕುಮಾರ್ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಹೀಗಾಗಿ ಇಶಾನ್ ಕಿಶನ್ ಆಡುವ ಬಳಗದಿಂದ ಹೊರಗುಳಿದಿದ್ದಾರೆ. ಮತ್ತೊಂದೆಡೆ ವರುಣ್ ಚಕ್ರವರ್ತಿ ಆಡುವ ಬಳಗದಿಂದ ಹೊರಗುಳಿದಿದ್ದು ಆರ್ ಅಶ್ವಿನ್ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ಆರ್ ಅಶ್ವಿನ್ ಸುದೀರ್ಘ ಕಾಲದ ನಂತರ ಟೀಮ್ ಇಂಡಿಯಾ ವೈಟ್‌ಬಾಲ್ ತಂಡದ ಆಡುವ ಬಳಗದಲ್ಲಿ ಕಾಣಿಸಿಕೊಂಡಂತಾಗಿದೆ.
ಇನ್ನು ಅಫ್ಘಾನಿಸ್ತಾನ ತಂಡದಲ್ಲಿಯೂ ಒಂದು ಬದಲಾವಣೆ ಮಾಡಿಕೊಳ್ಳಲಾಗಿದೆ. ತಮಡದ ಪ್ರಮುಖ ಬೌಲಿಂಗ್ ಅಸ್ತ್ರಗಳಲ್ಲಿ ಒಬ್ಬರಾಗಿರುವ ಮಜೀಬ್ ಉರ್ ರಹ್ಮಾನ್ ಈ ಪಂದ್ಯದ ಆಡುವ ಬಳಗದಿಂದ ಹೊರಗುಳಿದಿದ್ದಾರೆ.
Live ಸ್ಕೋರ್ ಕಾರ್ಡ್ ಹೀಗಿದೆ
ಎರಡು ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದೆ. ಅದರಲ್ಲೀ ಭಾರತ ಸೆಮಿಫೈನಲ್ ಹಂತಕ್ಕೇರಲು ಈ ಪಂದ್ಯದ ಜೊತೆಗೆ ಮುಂದಿನ ಎರಡು ಪಂದ್ಯಗಳನ್ನು ಕೂಡ ಗೆಲ್ಲೇಬೇಕಾದ ಅನಿವಾರ್ಯತೆಯಿದೆ. ಅಷ್ಟಾದರೂ ಭಾರತ ತಂಡಕ್ಕೆ ಇತರ ತಂಡಗಳ ಫಲಿತಾಂಶದ ಮೇಲೆ ಭವಿಷ್ಯ ನಿರ್ಧಾರವಾಗಲಿದೆ.
ಮತ್ತೊಂದೆಡೆ ಅಫ್ಘಾನಿಸ್ತಾನ ಕೂಡ ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವುದು ಸ್ಪಷ್ಟವಾಗಿದೆ. ಭಾರತದ ವಿರುದ್ಧ ಗೆದ್ದು ನಾವು ಸೆಮಿಫಯನಲ್ ಹಾದಿಯನ್ನು ಸರಾಗಗೊಳಿಸಲಿದ್ದೇವೆ ಎಂಬ ಮಾತನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಒ ನಸೀಬ್ ಖಾನ್ ಹೇಳಿದ್ದಾರೆ.
ಭಾರತ ತನ್ನ ಮೊದಲ ಎರಡು ಪಂದ್ಯಗಳನ್ನು ಕೂಡ ದುಬೈ ಕ್ರೀಡಾಂಗಣದಲ್ಲಿ ಆಡಿತ್ತು. ಇದೀಗ ಈ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ತನ್ನ ಪಂದ್ಯದ ತಾಣವನ್ನು ಬದಲಾಯಿಸಿಕೊಂಡಿದೆ. ಅಬಿದಾಬಿಯ ಶೇಕ್ ಆಜಯೇದ್ ಕ್ರೀಡಾಂಗಣ ಈ ಪಂದ್ಯಕ್ಕೆ ವೇದಿಕೆಯಾಗಿದೆ.
ಟೀಮ್ ಇಂಡಿಯಾ ಪ್ಲೇಯಿಂಗ್ XI : ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ(ನಾಯಕ), ಸೂರ್ಯಕುಮಾರ್ ಯಾದವ್, ರಿಷಭ್ ಪಂತ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ
ಅಫ್ಘಾನಿಸ್ತಾನ ಪ್ಲೇಯಿಂಗ್ XI : ಹಜರತುಲ್ಲಾ ಝಜೈ, ಮೊಹಮ್ಮದ್ ಶಹಜಾದ್(ವಿಕೆಟ್ ಕೀಪರ್), ರಹಮಾನುಲ್ಲಾ ಗುರ್ಬಾಜ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ(ನಾಯಕ), ಗುಲ್ಬದಿನ್ ನೈಬ್, ಶರಫುದ್ದೀನ್ ಅಶ್ರಫ್, ರಶೀದ್ ಖಾನ್, ಕರೀಂ ಜನತ್, ನವೀನ್-ಉಲ್-ಹಕ್, ಹಮೀದ್ ಹಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications