For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ನ್ಯೂಜಿಲೆಂಡ್ ತಂಡಕ್ಕೆ ಸುಲಭ ಸವಾಲು ನೀಡಿದ ಅಫ್ಘಾನಿಸ್ತಾನ!

 T20 world cup: 40th Match, New Zealand need 12 runs against Afghanistan

ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ನಡುವಿನ ಮಹತ್ವದ ಪಂದ್ಯದಲ್ಲಿ ಅಫ್ಘಾನಿಸ್ತಾನ ಸವಾಲಿನ ಗುರಿ ನೀಡಲು ವಿಫಲವಾಗಿದೆ. ನಜೀಬುಲ್ಲಾ ಜದ್ರಾನ್ ಏಕಾಂಗಿ ಹೋರಾಟದ ಫಲವಾಗಿ ಅಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 124 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ನಜೀಬುಲ್ಲಾ 48 ಎಸೆತಗಳಲ್ಲಿ 73 ರನ್ ಸಿಡಿಸಿದ್ದಾರೆ. ಆರು ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್ ಸಿಡಿಸಿದ್ದರು ಈ ಯುವ ಆಟಗಾರ. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಪ್ರದರ್ಶನ ಬಾರದ ಕಾರಣ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ನ್ಯೂಜಿಲೆಂಡ್ ತಂಡದ ಕರಾರುವಾಕ್ ಬೌಲಿಂಗ್ ದಾಳಿಯ ಮುಂದೆ ಅಫ್ಘಾನ್ ಅಗ್ರ ಕ್ರಮಾಂಕ ನಲುಗಿತು. ಕೇವಲ 19 ರನ್‌ಗಳಿಗೆ ಅಫ್ಘಾನಿಸ್ತಾನ ತಂಡ ಮೊದಲ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರ ಜೊತೆಯಾದ ಗುಲದ್ದೀನ್ ಹಾಗು ನಜೀಬುಲ್ಲಾ ಸಣ್ಣ ಚೇತರಿಕೆ ನೀಡಿದರು. ತಂಡದ ಮೊತ್ತ 56೦ ರನ್‌ಗಳಾಗಿದ್ದಾಗ 15 ರನ್‌ಗಳಿಸಿದ್ದ ಗುಬದ್ದೀನ್ ಕೂಡ ವಿಕೆಟ್ ಕಳೆದುಕೊಂಡರು.

ನಂರ ಉತ್ತಮ ಆಟವಾಡುತ್ತಿದ್ದ ನಜೀಬುಲ್ಲಾಗೆ ನಾಯಕ ನಬಿ ಸಾಥ್ ನೀಡಿದರು. ನಜೀಬುದ್ದೀನ್ ತಂಡದ ಸ್ಕೋರ್ ಹೆಚ್ಚಿಸುವ ಎಲ್ಲಾ ಪ್ರಯತ್ನಗಳನ್ನು ಕೂಡ ನಡೆಸಿದರು. ಈ ಜೋಡಿ ತಂಡದ ಮೊತ್ತ 115 ರನ್‌ಗಳಾಗುವವರೆಗೆ ಕ್ರೀಸ್‌ ಕಚ್ಚಿ ಬ್ಯಾಟಿಂಗ್ ನಡೆಸಿದರು. ನಬಿ ನಿಧಾನವಾಗಿ ಆಡುತ್ತಿದ್ದರೆ ನಜೀಬುಲ್ಲಾ ಉತ್ತಮವಾಗಿ ಬ್ಯಾಟ್ ಬೀಸಿದರು. ನಂತರ ನಬಿ ತಮ್ಮ ವಿಕೆಟ್ ಕಳೆದುಕೊಂಡರು. ಅದಾದ ಬಳಿಕ ತಂಡದ ಮೊತ್ತಕ್ಕೆ ನಾಲ್ಕು ರನ್ ಸೇಧರ್ಪಡೆಯಾಗುತ್ತಿದ್ದಂತೆಯೇ ನಜೀಬುಲ್ಲಾ ಕೂಡ ವಿಕೆಟ್ ಕಳೆದುಕೊಂಡರು. 48 ಎಸೆತ ಎದುರಿಸಿದ ನಜೀಬುಲ್ಲಾ 73 ರನ್‌ಗಳ ಕೊಡುಗೆ ನೀಡಿ ವಿಕೆಟ್ ಕಳೆದುಕೊಂಡರು.

ನಂತರ ಮತ್ತೊಮ್ಮೆ ನ್ಯೂಜಿಲೆಂಡ್ ಬೌಲರ್‌ಗಳ ಕೈಮೇಲಾಯಿತು. ಅದರಲ್ಲೀ 20ನೇ ಓವರ್‌ನಲ್ಲಿ ನೀಶಮ್ ಕೇವಲ 2 ರನ್‌ಗಳನ್ನು ಮಾತ್ರವೇ ನೀಡುವ ಮೂಲಕ ಅಫ್ಘಾನಿಸ್ತಾನದ ಮೊತ್ತ 125ರ ಗಡಿ ದಾಟದಂತೆ ನೋಡಿಕೊಂಡರು. ಈ ಮೂಲಕ ನ್ಯೂಜಿಲೆಂಡ್ ತಂಡ ಸುಲಭ ಸವಾಲನ್ನು ಪಡೆದುಕೊಂಡಿದೆ.

ಇನ್ನು ನ್ಯೂಜಿಲೆಂಡ್ ತಂಡದ ಪರವಾಗಿ ಟ್ರೆಂಟ್ ಬೋಲ್ಟ್ 3 ವಿಕೆಟ್ ಕಿತ್ತಿ ಮಿಂಚಿದರೆ ಸೌಥಿ 2 ವಿಕೆಟ್ ಪಡೆದರು. ಸ್ಯಾಂಟ್ನರ್ ಹಾಗೂ ಇಶ್ ಸೋಧಿ ತಲಾ 1 ವಿಕೆಟ್ ಸಂಪಾದಿಸಿದ್ದಾರೆ.

ನ್ಯೂಜಿಲೆಂಡ್ ಆಡುವ ಬಳಗ: ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೋಲ್ಟ್

ಬೆಂಚ್: ಟಾಡ್ ಆಸ್ಟಲ್, ಕೈಲ್ ಜೇಮಿಸನ್, ಟಿಮ್ ಸೀಫರ್ಟ್, ಮಾರ್ಕ್ ಚಾಪ್ಮನ್

ಅಫ್ಘಾನಿಸ್ತಾನ ಆಡುವ ಬಳಗ: ಹಜರತುಲ್ಲಾ ಝಜೈ, ಮೊಹಮ್ಮದ್ ಶಹಜಾದ್ (ವಿಕೆಟ್ ಕೀಪರ್), ರಹಮಾನುಲ್ಲಾ ಗುರ್ಬಾಜ್, ನಜೀಬುಲ್ಲಾ ಝದ್ರಾನ್, ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ (ನಾಯಕ), ಕರೀಮ್ ಜನತ್, ರಶೀದ್ ಖಾನ್, ನವೀನ್-ಉಲ್-ಹಕ್, ಹಮೀದ್ ಹಸನ್, ಮುಜೀಬ್ ಉರ್ ರಹಮಾನ್
ಆಡುವ ಬಳಗ: ಶರಫುದ್ದೀನ್ ಅಶ್ರಫ್, ಹಷ್ಮತುಲ್ಲಾ ಶಾಹಿದಿ, ಫರೀದ್ ಅಹ್ಮದ್, ಉಸ್ಮಾನ್ ಘನಿ

Story first published: Monday, November 8, 2021, 9:42 [IST]
Other articles published on Nov 8, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+