
ಟಿ20 ವಿಶ್ವಕಪ್‌ನ ಸೂಪರ್ 12 ಹಂತದ ಪಂದ್ಯಗಳು ಅಂತಿಮ ಹಂತಕ್ಕೆ ತಲುಪಿದೆ. ಇಂದು ಪಾಕಿಸ್ತಾನ ಹಾಗೂ ಸ್ಕಾಟ್ಲೆಂಡ್ ತಂಡಗಳು ಪರಸ್ಪರ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಎದುರಾಳಿ ಸ್ಕಾಟ್ಲೆಂಡ್‌ಗೆ ಆರಂಭದಲ್ಲಿ ಬೌಲಿಂಗ್ ಮಾಡುವ ಸವಾಲು ಎಸೆದಿದೆ.
ಈಗಾಗಲೇ ಸೆಮಿಫೈನಲ್‌ಗೇರುವ ನಾಲ್ಕು ತಂಡಗಳು ಕೂಡ ಅಂತಿಮವಾಗಿದೆ. ಗ್ರೂಪ್ ಎರಡರಲ್ಲಿ ಪಾಕಿಸ್ತಾನ ಅಗ್ರ ತಂಡವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರೆ ಸ್ಕಾಟ್ಲೆಂಡ್ ಸೂಪರ್ 12 ಹಂತದಿಂದ ಈಗಾಗಲೇ ಅಧಿಕೃತವಾಗಿ ಹೊರಬಿದ್ದಿದೆ. ಟೂರ್ನಿಯಲ್ಲಿ ಇಂದಿನ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಿದ್ದು ಈ ಫಲಿತಾಂಶದಿಂದಾಗಿ ಯಾವುದೇ ಬದಲಾವಣೆಗಳು ಆಗುವ ಸಾಧ್ಯತೆಯಿಲ್ಲ.
Live ಸ್ಕೋರ್ ಕಾರ್ಡ್ ಹೀಗಿದೆ
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಈವರೆಗೆ ಅಜೇಯ ತಂಡವಾಗಿ ಉಳಿದುಕೊಂಡಿರುವ ಪಾಕಿಸ್ತಾನ ತಂಡ ಅಜೇಯವಾಗಿಯೇ ಸೆಮಿಫೈನಲ್‌ಗೇರುವ ಗುರಿ ಹೊಂದಿದೆ. ಈ ಮೂಲಕ ಎರಡನೇ ಬಾರಿಗೆ ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸನ್ನು ನನಸು ಮಾಡಿಕೊಳ್ಳಲು ಮತ್ತಷ್ಟು ಆತ್ಮ ವಿಶ್ವಾಸ ಪಡೆದುಕೊಳ್ಳುವ ಲೆಕ್ಕಾಚಾರದಲ್ಲಿದೆ.
ಮತ್ತೊಂದೆಡೆ ಸ್ಕಾಟ್ಲೆಂಡ್ ಆಡಿದ ನಾಲ್ಕು ಪಂದ್ಯಗಳ ಪೈಕಿ ನಾಲ್ಕರಲ್ಲಿಯೂ ಸೋಲು ಕಂಡಿದ್ದು ಅಂತಿಮ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸುವ ಪ್ರಯತ್ನವನ್ನು ನಡೆಸಲಿದೆ. ಈ ಮೂಲಕ ಟೂರ್ನಿಯನ್ನು ಸ್ಮರಣೀಯವಾಗಿ ಮುಗಿಸುವ ಲೆಕ್ಕಾಚಾರದಲ್ಲಿದೆ.
ಪಾಕಿಸ್ತಾನ ಆಡುವ ಬಳಗ: ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಶಾದಾಬ್ ಖಾನ್, ಇಮಾದ್ ವಾಸಿಮ್, ಹಸನ್ ಅಲಿ, ಹಾರಿಸ್ ರೌಫ್, ಶಾಹೀನ್ ಅಫ್ರಿದಿ
ಬೆಂಚ್: ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಹೈದರ್ ಅಲಿ, ಸರ್ಫರಾಜ್ ಅಹ್ಮದ್
ಸ್ಕಾಟ್ಲೆಂಡ್ ಆಡುವ ಬಳಗ: ಜಾರ್ಜ್ ಮುನ್ಸೆ, ಕೈಲ್ ಕೋಟ್ಜರ್ (ನಾಯಕ), ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್), ರಿಚಿ ಬೆರಿಂಗ್ಟನ್, ಡೈಲನ್ ಬಡ್ಜ್, ಮೈಕೆಲ್ ಲೀಸ್ಕ್, ಕ್ರಿಸ್ ಗ್ರೀವ್ಸ್, ಮಾರ್ಕ್ ವ್ಯಾಟ್, ಹಮ್ಜಾ ತಾಹಿರ್, ಸಫ್ಯಾನ್ ಷರೀಫ್, ಬ್ರಾಡ್ಲಿ ವೀಲ್
ಬೆಂಚ್: ಜೋಶ್ ಡೇವಿ, ಕ್ರೇಗ್ ವ್ಯಾಲೇಸ್, ಕ್ಯಾಲಮ್ ಮ್ಯಾಕ್ಲಿಯೋಡ್, ಅಲಾಸ್ಡೇರ್ ಇವಾನ್ಸ್