T20 World Cup: 11 ವರ್ಷದ ಬಾಲಕನ ಬೌಲಿಂಗ್ ಕೌಶಲ್ಯಕ್ಕೆ ರೋಹಿತ್ ಶರ್ಮಾ ಫಿದಾ

ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದೆ. ಪರ್ತ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಅವರಿಗೆ ಬೌಲಿಂಗ್ ಮಾಡುವ ಅದೃಷ್ಟ ಬಾಲಕನೊಬ್ಬನಿಗೆ ದೊರೆಯಿತು.
ಪರ್ತ್‌ನಲ್ಲಿ ಟೀಂ ಇಂಡಿಯಾದ ಅಭ್ಯಾಸದ ವೇಳೆ ಬೆಳಗ್ಗೆಯಿಂದಲೇ ನೂರಾರು ಯುವಕರು ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿದ್ದರು. 11 ವರ್ಷದ ಭಾರತೀಯ ಯುವ ಆಟಗಾರ ದೃಶಿಲ್ ಚೌಹಾನ್ ಬೌಲಿಂಗ್ ಮಾಡುವಾಗ ರೋಹಿತ್ ಶರ್ಮಾ ಅವರ ಕಣ್ಣಿಗೆ ಬಿದ್ದರು.
ದೃಶಿಲ್ ಚೌಹಾನ್ ಬೌಲಿಂಗ್ ಕೌಶಲ್ಯದಿಂದ ಪ್ರಭಾವಿತರಾದ ರೋಹಿತ್ ಶರ್ಮಾ ಅವರನ್ನು ಬಂದು ನೆಟ್ಸ್‌ನಲ್ಲಿ ಕೆಲವು ಎಸೆತಗಳನ್ನು ಬೌಲ್ ಮಾಡಲು ಹೇಳಿದರು. ಅದರಂತೆ, ಬಾಲಕ ನೆಟ್ಸ್‌ನಲ್ಲಿ ಟೀಂ ಇಂಡಿಯಾ ನಾಯಕನಿಗೆ ಬೌಲಿಂಗ್ ಮಾಡಿ ಖುಷಿ ಪಟ್ಟಿದ್ದಾನೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಐಸಿಸಿ) ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, 11 ವರ್ಷದ ಎಡಗೈ ಬೌಲರ್ ಭಾರತೀಯ ನಾಯಕನೊಂದಿಗಿನ ತನ್ನ ಭೇಟಿಯ ಕುರಿತು ಮಾತನಾಡಿದ್ದಾರೆ. ಬಾಲಕ ತನಗೆ ಇನ್‌ಸ್ವಿಂಗ್ ಯಾರ್ಕರ್ ಮತ್ತು ಔಟ್‌ಸ್ವಿಂಗರ್ ಬೌಲ್ ಮಾಡುವುದು ಇಷ್ಟ ಎಂದು ಹೇಳಿದ್ದಾರೆ.

ಗಮನ ಸೆಳೆದ ದೃಶಿಲ್ ಚೌಹಾನ್
ಪರ್ತ್‌ನಲ್ಲಿ ಎರಡನೇ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ XI ವಿರುದ್ಧ ಸೋತ ನಂತರ, ರೋಹಿತ್ ಶರ್ಮಾ ಮತ್ತು ತಂಡ WACA ಕ್ರೀಡಾಂಗಣದಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಿದರು.
ಅದೇ ಸಮಯದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಅಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು. ಅವರ ನಡುವೆ ಭಾರತೀಯ ಮೂಲದ ದೃಶಿಲ್ ಚೌಹಾನ್ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಮವ ಸೆಳೆಯುವಲ್ಲಿ ಸಫಲನಾಗಿದ್ದಾನೆ.
T20 World Cup: ಟೀಂ ಇಂಡಿಯಾಕ್ಕೆ ಕಾಡುತ್ತಿದೆ ಚಹಾಲ್, ಭುವನೇಶ್ವರ್ ಬೌಲಿಂಗ್ ಚಿಂತೆ

ಬ್ರಿಸ್ಬೇನ್‌ಗೆ ಬರುವಂತೆ ಬಾಲಕನಿಗೆ ಆಹ್ವಾನ
ದೃಶಿಲ್ ಚೌಹಾನ್ ಬೌಲಿಂಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾಕ್ಕೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಲು ಬ್ರಿಸ್ಬೇನ್ ಆಗಮಿಸುವಂತೆ ಆಹ್ವಾನ ನೀಡಿದರು. ನೆಟ್ಸ್‌ನಲ್ಲಿ ದೃಶಿಲ್‌ನ ಕೆಲವು ಎಸೆತಗಳನ್ನು ಎದುರಿಸಿದ ರೋಹಿತ್ ಆತನ ಬೌಲಿಂಗ್ ಕೌಶಲ್ಯಕ್ಕೆ ಫಿದಾ ಆಗಿದ್ದಾರೆ.
ಪರ್ತ್‌ನಲ್ಲಿ ತಮ್ಮ ಅಭ್ಯಾಸವನ್ನು ಮುಗಿಸಿದ ಬಳಿಕ ಟೀಂ ಇಂಡಿಯಾ ಬ್ರಿಸ್ಬೇನ್ ತಲುಪಿದೆ. ಬ್ರಿಸ್ಬೇನ್‌ನಲ್ಲಿ ಭಾನುವಾರ ಅಭ್ಯಾಸ ನಡೆಸಲಿದ್ದು, ಸೋಮವಾರ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶಮಿ ಆಡುವ ಸಾಧ್ಯತೆ
ಗಾಯಗೊಂಡಿರುವ ಜಸ್ಪ್ರೀತ್ ಬುಮ್ರಾ ಬದಲಿಗೆ ತಂಡಕ್ಕೆ ಆಯ್ಕೆಯಾಗಿರುವ ಮೊಹಮ್ಮದ್ ಶಮಿ ಈಗಾಗಲೇ ಬ್ರಿಸ್ಬೇನ್‌ನಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶಮಿ ಆಡುವ ಸಾಧ್ಯತೆ ಇದೆ. ಅದಕ್ಕೂ ಮುನ್ನ, ಅವರು ಭಾನುವಾರ ಟೀಂ ಇಂಡಿಯಾದ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತದ ಟಿ20 ವಿಶ್ವಕಪ್ ಅಭಿಯಾನ ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಲಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಪಾಕಿಸ್ತಾನ 10 ವಿಕೆಟ್‌ಗಳಿಂದ ಸೋಲಿಸಿತ್ತು.

ಟಿ20 ವಿಶ್ವಕಪ್‌ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications