
ಆಸ್ಟ್ರೇಲಿಯಾವು 7 ನಗರಗಳಲ್ಲಿ ಐಸಿಸಿ T20 ವಿಶ್ವಕಪ್ 2022 ಅನ್ನು ಆಯೋಜಿಸುತ್ತಿದೆ. ಅಕ್ಟೋಬರ್ 16 ರಂದು ಗುಂಪು-ಹಂತದ ಪಂದ್ಯಗಳೊಂದಿಗೆ ಟೂರ್ನಿ ಪ್ರಾರಂಭವಾಗುತ್ತದೆ. ಟೀಂ ಇಂಡಿಯಾ ಅಕ್ಟೋಬರ್ 23 ರಂದು ಎಂಸಿಜಿ ಅಂಗಳದಲ್ಲಿ ತಮ್ಮ ಪ್ರತಿಸ್ಪರ್ಧಿ ಪಾಕಿಸ್ತಾನದ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸುತ್ತಾರೆ.
ವಿಶ್ವಕಪ್ ಆರಂಭಕ್ಕೂ ಮೊದಲು, ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಕೆಲವು ಪ್ರಶ್ನೆಗಳಿಗೆ ತ್ವರಿತವಾಗಿ ಉತ್ತರಗಳನ್ನು ಹುಡುಕಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಮತ್ತು ಯುಜ್ವೇಂದ್ರ ಚಹಾಲ್ ಕುರಿತಂತೆ ಹಲವು ಪ್ರಶ್ನೆಗಳು ಈಗ ತಲೆನೋವಾಗಿ ಪರಿಣಮಿಸಿವೆ.
ವಿಶ್ವಕಪ್ ಆರಂಭಕ್ಕೆ ಮುನ್ನ ಭಾರತೀಯ ಬೌಲಿಂಗ್‌ನಲ್ಲಿ ಅನುಭವ ಮತ್ತು ಉತ್ತಮ ಪ್ರದರ್ಶನದ ಅಂಕಿ ಅಂಶ ಹೊಂದಿರುವ ಭುವನೇಶ್ವರ್ ಕುಮಾರ್ ಮತ್ತು ತಂಡದ ಪ್ರೀಮಿಯಂ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮೇಲೆ ಹೆಚ್ಚಿನ ಗಮನ ಬಿದ್ದಿದೆ.
ಕಳೆದ ಟಿ20 ವಿಶ್ವಕಪ್‌ನಿಂದ ಇಲ್ಲಿಯವರೆಗೆ 26 ಇನ್ನಿಂಗ್ಸ್‌ಗಳಲ್ಲಿ 35 ವಿಕೆಟ್‌ಗಳೊಂದಿಗೆ, ಭುವನೇಶ್ವರ್ ಕುಮಾರ್ ಭಾರತದ ಅಗ್ರ ಟಿ20 ವಿಕೆಟ್ ಟೇಕರ್ ಆಗಿದ್ದಾರೆ.

ಭುವನೇಶ್ವರ್ ಮೇಲಿದೆ ಹೆಚ್ಚಿನ ಜವಾಬ್ದಾರಿ
ಜಸ್ಪ್ರೀತ್ ಬುಮ್ರಾ ಇಲ್ಲದ ವಿಶ್ವಕಪ್ ಟೂರ್ನಿಯಲ್ಲಿ ಭುವನೇಶ್ವರ್ ಕುಮಾರ್ ಹೆಚ್ಚಿನ ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ. ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡಿವಾಗ ಭುವನೇಶ್ವರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಅವರು ಉತ್ತಮ ವೇಗವನ್ನು ಹೊಂದಿಲ್ಲ, ಚೆಂಡು ಸ್ವಿಂಗ್ ಆಗದೆ ಇದ್ದರೆ ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಅವರು ಹೆಚ್ಚಿನ ರನ್ ಬಿಟ್ಟುಕೊಡುವ ಅಪಾಯ ಇದೆ.
ಅವರು ಉತ್ತಮ ಬೌಲರ್ ಆಗಿದ್ದಾರೆ ಏಕೆಂದರೆ ಅವರು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ, ಯಾರ್ಕರ್ ಎಸೆಯುವ ಪರಿಣಿತಿ ಹೊಂದಿದ್ದಾರೆ. ಆದರೆ ಆಸ್ಟ್ರೇಲಿಯಾ ಪಿಚ್‌ಗಳಲ್ಲಿ ಹೆಚ್ಚಿನ ವೇಗ ಇದ್ದರೆ ಅನುಕೂಲವಾಗುತ್ತದೆ.

ದುಬಾರಿಯಾಗಿರುವ ಚಹಾಲ್
ಐಪಿಎಲ್ 2022 ರ ನಂತರ ಯುಜ್ವೇಂದ್ರ ಚಹಾಲ್ ಉತ್ತಮ ಫಾರ್ಮ್‌ನಲ್ಲಿದ್ದರು. ಆದರೆ ಕಳೆದ ಕೆಲವು ಪಂದ್ಯಗಳಲ್ಲಿ ಅವರು ದುಬಾರಿಯಾಗಿದ್ದಾರೆ. ಕಳೆದ 10 ಪಂದ್ಯಗಳಲ್ಲಿ ಅವರು 7.68 ಎಕಾನಮಿ ರೇಟ್‌ನೊಂದಿಗೆ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಸ್ಪಿನ್ನರ್‌ಗೆ ಟಿ20 ಗಳಲ್ಲಿ ಉತ್ತಮ ಸಾಮರ್ಥ್ಯವಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯ XI ವಿರುದ್ಧ ಕೇವಲ ಒಂದು ವಿಕೆಟ್ ಪಡೆದು 4 ಓವರ್‌ಗಳಲ್ಲಿ 49 ರನ್‌ಗಳನ್ನು ಬಿಟ್ಟುಕೊಟ್ಟ ನಂತರ ಅವರು ತನ್ನ ಲಯವನ್ನು ಮರಳಿ ಪಡೆಯಲು ಎರಡು ಅಭ್ಯಾಸ ಪಂದ್ಯಗಳನ್ನು ಮಾತ್ರ ಹೊಂದಿದ್ದಾರೆ.
ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಅಧಿಕೃತ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.